ಉಡುಪಿ ಜಿಲ್ಲಾಧಿಕಾರಿ ಹೇಳಿಕೆಗೆ ಮುಂಬಯಿಯ ಹಿರಿಯ ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ ಹೇಳಿದ್ದು ಹೀಗೆ !

4:04 PM, Sunday, May 24th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

chandrashekara palethadyಮುಂಬಯಿ : ಉಡುಪಿ ಜಿಲ್ಲಾಧಿಕಾರಿಯವರು ಮುಂಬಯಿ ತುಳು ಕನ್ನಡಿಗರ ಬಗ್ಗೆ ನೀಡಿದ ಹೇಳಿಕೆ ಬಗ್ಗೆ ಮುಂಬಯಿಯ ಹಿರಿಯ ಪತ್ರಕರ್ತ, ಕರ್ನಾಟಕ ಮಲ್ಲ ದಿನ ಪತ್ರಿಕೆಯ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿಯವರು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ .

“ಉಡುಪಿ ಜಿಲ್ಲಾಧಿಕಾರಿಗೆ,
ಮಾನ್ಯರೇ ಮುಂಬಯಿ (ಮಹಾರಾಷ್ಟ್ರ )ತುಳು -ಕನ್ನಡಿಗರು ಕರೆ ಮಾಡಿದರೆ ಅಥವಾ ಸಾಮಾಜಿಕ ಜಾಲದಲ್ಲಿ ಡಾನ್ ಗಳಂತೆ ಹೇಳಿಕೆ ನೀಡಿದರೆ ಅವರನ್ನು ಜೈಲಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದೀರಿ.

ಆಡಳಿತಾತ್ಮಕವಾಗಿ ನಿಮಗೆ ಆ ಅಧಿಕಾರ ಇರಬಹುದು. ಆದರೆ ಉಡುಪಿ ಜಿಲ್ಲೆಗೆ ಮಹಾರಾಷ್ಟ್ರದಿಂದ ತಲುಪಲು ಜೀವ ಭಯ ದಿಂದ ಕಾಯುತ್ತಿರುವ ಜನರು ಯಾರನ್ನು ಸಂಪರ್ಕಿಸಬೇಕು. ಮುಂಬೈಯಿಂದ ಅಲ್ಲಿಗೆ ಬರಲು ಬಯಸಿರುವವರು ನಿಮ್ಮ ಜೈಲಲ್ಲಿ ಕ್ವಾರೆಂಟೈನ್ ಒಳಗಾಗಲೂ ತಯಾರಿದ್ದಾರೆ. ಏಕೆಂದರೆ ಕೊರೊನ ಹಿಡಿದುಕೊಳ್ಳುವ ಪ್ರಾಣ ಭಯ ಅವರನ್ನು ನಿದ್ದೆ ಮಾಡಲೂ ಬಿಡುತ್ತಿಲ್ಲ. ಉಡುಪಿ ಜಿಲ್ಲೆಯಿಂದ ಹೊರ ರಾಜ್ಯಗಳ ಜನರು ಹಲವು ಶ್ರಮಿಕ್ ರೈಲಲ್ಲಿ ಹೋಗುತ್ತಲೇ ಇದ್ದಾರೆ. ಮುಂಬೈಯಲ್ಲಿ ಇರುವ ನಾವೆಲ್ಲ ಉಡುಪಿ ಮತ್ತು ಮಂಗಳೂರಿಗೆ ಶ್ರಮಿಕ್ ರೈಲಿಗೆ ಕತ್ತು ಉದ್ದ ಮಾಡಿ ಕಾದದ್ದೇ ಬಂತು. ಸೇವಾ ಸಿಂಧು ಆರಂಭ ಆದಾಗ ನಾವು ನಿಟ್ಟುಸಿರು ಬಿಟ್ಟದ್ದು ಹೌದು. ಆದರೆ ಆ ಭಾಗ್ಯ ಕೂಡಾ ಹೆಚ್ಚು ದಿನ ಇಲ್ಲದೇ ಹೋಯಿತು. ನಾವೆಲ್ಲ ಮುಂಬಯಿಗೆ ಬಂದು ಜೀವನ ಕಂಡು ಕೊಂಡದ್ದೇ ತಪ್ಪೇ?.

ಮುಂಬಯಿ ಅಥವಾ ಇತರ ಹೊರ ರಾಜ್ಯಗಳಿಂದ ಬಂದ ಜನರಲ್ಲಿ ಕೊರೊನ ಕಂಡು ಬಂದಷ್ಟಕ್ಕೆ ಅವರೇನೂ ಅಲ್ಲಿಗೆ ಕೊರೊನ ಹಂಚಲು ಬಂದಿಲ್ಲ. ಕೊರೊನ ವೈರಸ್ ರೋಗಿಗಳಿಗೆ ಚಿಕಿತ್ಸೆ ಒದಗಿಸುವುದು ಯಾವುದೇ ಜಿಲ್ಲಾ ಆಡಳಿತದ ಜವಾಬ್ದಾರಿ.

ಇದರಿಂದ ದಯವಿಟ್ಟು ಮಹಾರಾಷ್ಟ್ರದಿಂದ ಉಡುಪಿಗೆ ಬರುವ ಜನರನ್ನು ಮುಕ್ತವಾಗಿ ಸ್ವಾಗತಿಸಿ ಅವರಿಗೆ ಕಡ್ಡಾಯ ಕ್ವಾರೆಂಟೈನ್ ವ್ಯವಸ್ಥೆ ಮಾಡಿ. ಮುಂಬೈ ಕನ್ನಡಿಗರು ಶತ್ರುಗಳು ಎಂಬ ವಾತಾವರಣ ಸೃಷ್ಟಿಗೆ ಅವಕಾಶ ನೀಡ ಬೇಡಿ.”

ಚಂದ್ರಶೇಖರ ಪಾಲೆತ್ತಾಡಿ
ಸಂಪಾದಕ
ಕರ್ನಾಟಕ ಮಲ್ಲ ದಿನ ಪತ್ರಿಕೆ

image description

3 ಪ್ರತಿಕ್ರಿಯ - ಶೀರ್ಷಿಕೆ - ಉಡುಪಿ ಜಿಲ್ಲಾಧಿಕಾರಿ ಹೇಳಿಕೆಗೆ ಮುಂಬಯಿಯ ಹಿರಿಯ ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ ಹೇಳಿದ್ದು ಹೀಗೆ !

  1. ಭಾಸ್ಕಸ್ ಸರಪಾಡಿ, ಸರಪಾಡಿ%20%20ಬಂಟ್ವಾಳ%20taluk

    ಈ ಮೇಲಿನ ಕರ್ನಾಟಕ ಮಲ್ಲದ ಚಂದ್ರ ಶೇಖರ್ ಪಳೆತಾಡಿ ಯವರು ಬರೆದ ಪ್ರಕಟಣೆ ನಿಜವಾಗಿ ಸತ್ಯ ಸಂಗತಿ, ಕರ್ನಾಟಕದ ಮಂತ್ರಿ ಗಳು ಈ ಮನವಿಯನ್ನು ಗಮನಿಸಿದರೆ ನಿಮಗೆ ಒಳೆದು ಇಳವದಲಿ ನಿಮ್ಮ ಮುಂದಿನ ದಿನ ಖಂಡಿತ ಸರಿ ಇರಲಿ, ದಯವಿಟ್ಟು ಪಳೆತಾಡಿ ಯವರು ಬರೆದ ಪತ್ರಕೆ ಗಮನಿಸಿದರೆ ಒಳೆದು
    ನಿಮ್ಮ ವಿಸ್ವಶಿ
    ಭಾಸ್ಕರ್ ಸರಪಾಡಿ
    ಗುಜರಾತ್
    ವಾಪಿ
    ವಲ್ಸಡ್ ಜಿಲೆ.

  2. ಉಮೇಶ್ ಪೂಜಾರಿ ಕೊಪ್ಪ, ಕೊಪ್ಪ

    ನಿಮ್ಮ ಬರಹ ಮುಂಬೈ ಯಲ್ಲಿ ಇರುವ ನಮ್ಮತುಳುನಾಡ / ಕನ್ನಡಿಗರು ಇನ್ನು ಊರಿಗೆ ಹೋಗುವ ದಾರಿ ಇಲ್ಲವೇನು ಎಂಬ ಭಾವನೆ ಉಂಟಾಗಿದ್ದು ಸಹಜ. ಕೆಲವೊಂದು ವ್ಯಕ್ತಿಗಳ ಅಸಭ್ಯ ಹೇಳಿಕೆ ನಮ್ಮ ದಕ್ಷ ಜಿಲ್ಲಾಧಿಕಾರಿಯವರಿಗೆ ಹಾಗೂ ನಮ್ಮ ರಾಜಕೀಯ ವ್ಯಕ್ತಿಗಳಿಗೆ ನೀಡಿದಂತಹ ಅಸಭ್ಯ ಹೇಳಿಕೆಗಳು ಸಹಜವಾಗಿ ಸಿಟ್ಟು ಬರುವಂಥದ್ದು ಹಾಗಾಗಿ ಅವರು ಅಂತಹ ಹೇಳಿಕೆ ನೀಡಿರಬಹುದು ಈಗ ನೀವು ನೀಡಿದಂತಹ ಹೇಳಿಕೆ ನಮ್ಮ ಜನರಿಗೆ ಊರಿಗೆ ಹೋಗುವ ಆಸೆ ಸದ್ಯವೇ ಈಡೇರುವ ಹಾಗೆ ಇದೆ ಧನ್ಯವಾದಗಳು

  3. ನವೀನ್ ಪಡ್ಡು ಇನ್ನ, ಕಾರ್ಕಳ

    ಉಡುಪಿ ಜಿಲ್ಲಾಧಿಕಾರಿಗಳೇ ನಮಸ್ತೆ ಸರ್ 🙏
    ನಿಮ್ಮ ಉಡುಪಿ ಜಿಲ್ಲೆಯ ಬಗ್ಗೆ ಕಾಲಜ್ಜಿ ನಿಮ್ಮ ಕರ್ತವ್ಯ ಮೆಚ್ಚಲೇಬೇಕು ಸರ್ ನಮ್ಮ ಉಡುಪಿ ಸುರಕ್ಷಿತವಾಗಿದ್ದರೆ ಸಾಕೆ ಉಡುಪಿ ಜನರು ಬೇಡವೇ ಸರ್ ನಾವು ಉಡುಪಿಯವರು ನಮ್ಮನು ಮರೆಯಬೇಡಿ 🙏

    ಚಂದ್ರಶೇಖರ್ ಪಾಲೆತ್ತಾಡಿ ಸರ್ ನಿಮ್ಮ ಕೆಲಸ ದೇವರು ಮೆಚ್ಚುವಂತದ್ದು🙏

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English