ಉಡುಪಿ : ಜಿಲ್ಲೆಯಲ್ಲಿ ಮೂವರು ಮಕ್ಕಳು ಸೇರಿ ಮತ್ತೆ 18 ಮಂದಿಗೆ ಕೊರೊನಾ ಇರುವುದು ದೃಢಪಟ್ಟಿದ್ದು ಈ ಪೈಕಿ ಬಹುತೇಕರು ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ.
ಈ 18 ಕೊರೊನಾ ಪ್ರಕರಣಗಳ ಪೈಕಿ 7 ಮಂದಿ ಮಹಿಳೆಯರಾಗಿದ್ದು ಮೂವರು ಮಕ್ಕಳಾಗಿದ್ದಾರೆ.
ಇಬ್ಬರಿಗೆ ಕಂಟೈನ್‌ಮೆಂಟ್ ಝೋನ್ ಸಂಪರ್ಕದಿಂದ ಕೊರೊನಾ ದೃಢಪಟ್ಟಿದ್ದು ಮತ್ತಿಬ್ಬರಿಗೆ ಕೊರೊನಾ ಹರಡಿದ ಸಂಪರ್ಕವನ್ನು ಪತ್ತೆಹಚ್ಚಲಾಗುತ್ತಿದೆ. ಇನ್ನುಳಿದ 14 ಮಂದಿಯೂ ಕೂಡಾ ಮಹಾರಾಷ್ಟ್ರದಿಂದ ವಾಪಾಸ್ ಆದವರಾಗಿದ್ದಾರೆ.
Click this button or press Ctrl+G to toggle between Kannada and English