ಕಷ್ಟದಲ್ಲಿರುವ ಹುಬ್ಬಳ್ಳಿಯ ಛಾಯಾಗ್ರಾಹಕರಿಗೆ ಧವಸ ಧಾನ್ಯವಿತರಣೆ

10:21 PM, Sunday, May 24th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Hubli Photoಹುಬ್ಬಳ್ಳಿ,:  ಹುಬ್ಬಳ್ಳಿ ಫೋಟೋ ಮತ್ತು ವಿಡಿಯೋ ಗ್ರಾಫರ ಸಂಘದ ಆಶ್ರಯದಲ್ಲಿ ಕೊರೋನಾ ವೈರಸ್ ಬಂದಾಗಿಂದ ಹುಬ್ಬಳ್ಳಿಯ ಎಲ್ಲ ಫೋಟೋಗ್ರಾಫರಗಳು ಆರ್ಥಿಕ ಪರಿಸ್ಥಿತಿ ಕೈಕೊಟ್ಟಿದ್ದು ಇದನ್ನು ಅರಿತ ಸಂಘದ ವತಿಯಿಂದ ಈಗಾಗಲೇ ಎರಡು ಬಾರಿ ಧವಸ ಧಾನ್ಯ ಕೊಟ್ಟಿದ್ದು ಈಗ ಇಂದು ಹುಬ್ಬಳ್ಳಿಯ ಪೆಂಡಾರಗಲ್ಲಿ ಯಲ್ಲಿರುವ ಕಿರಣ ಸ್ಟುಡಿಯೋ ದಲ್ಲಿ ಯವ ಕಣ್ಮಣಿ ವಿಧಾನ್ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್ ಎರಡು ನೂರು ಬಡ ಫೋಟೋಗ್ರಾಫರಗಳಿಗೆ ಇಂದು ಫುಡ್ ಪಾಕೆಟ್ ವಿತರಣೆ ಮಾಡಿದರು ಇದಕ್ಕೂ ಮುನ್ನ ಮಾತನಾಡಿದ ಪ್ರದೀಪ್ ಶೆಟ್ಟರ್, ನಿಮ್ಮ ಸಂಘದ ಮನವಿಯನ್ನು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರೊಂದಿಗೆ ಮುಖ್ಯಮಂತ್ರಿಗಳಿಗೆ ಕೊಟ್ಟು ಫೋಟೋಗ್ರಾಫರಗಳಿಗೂ, ವಿಡಿಯೋಗ್ರಾಫರಗಳಿಗೂ ಸಹಾಯ ಧನ ಸಿಗುವ ಹಾಗೆ ಮಾಡುತ್ತೇನೆ ಎಂದು ಭರವಸೆ ನೀಡಿದರು. ಆಟೋಚಾಲಕರಿಗೆ ಹೇಗೆ ಹಣವನ್ನು ಕೊಟ್ಟಿದ್ದಾರೆಯೇ ಹಾಗೆ ಪೋಟೋ ಸ್ಟುಡಿಯೋ ಗಳಿಗೂ ಅನ್ವಯವಾಗು ವಂತೆ ಮಾಡುತ್ತೇನೆ ಎಂದರು. ಸದಾ ನಿಮ್ಮ ಜೊತೆಯಲ್ಲಿರುತ್ತೇನೆ ಏನಾದರೂ ಸಹಾಯ ಬೇಕಿದ್ದರೆ ನಮ್ಮನ್ನು ಸಂಪರ್ಕಿಸಬೇಕೆಂದು ಹೇಳಿದರು.

kiran--food-kitಇದಕ್ಕೂ ಮೊದಲೂ ಸಂಘದ ಅಧ್ಯಕ್ಷ ಕಿರಣ್ ಬಾಕಳೆ ಮಾತನಾಡಿ, ನಾವೆಲ್ಲರೂ ಇಂದಿನ ಸಮಯದಲ್ಲಿ ಕೊರೋನಾ ವಿರುದ್ಧ ಹೋರಾಡಿ ಜಯಿಸಬೇಕು ಮತ್ತು ಇದ್ದದರಲ್ಲಿ ನಾವು ತೃಪ್ತಿ ಪಡೆದು ದೇಶ ಮುನ್ನಡೆಸೋಣ ಮುಂದೆ ಸ್ವಲ್ಪದಿನದಲ್ಲಿ ಈ ವೈರಸ್ ಹತೋಟಿಗೆ ಬರುತ್ತದೆ ಎಂದರು.

ಸಭೆಯಲ್ಲಿ ಅಧ್ಯಕ್ಷ ಕಿರಣ್ ಬಾಕಳೆ, ಉಪಾಧ್ಯಕ್ಷ ದಿನೇಶ ದಾಬಡೆ, ಕಾರ್ಯದರ್ಶಿ ಜಯೇಷ ಇರಕಲ, ಅನಿಲ ತುರಮರಿ, ಗುರುರಾಜ ಕುಲಕರ್ಣಿ, ಆನಂದ ರಾಜೊಳ್ಳಿ, ಕೃಷ್ಣಾ ಪೂಜಾರಿ, ಇಮ್ರಾನ್, ರಿಯಾಜ, ದತ್ತು ,ಶಿವಾನಂದ ಹಳಿಜೋಳ, ಪ್ರವೀಣ್ ಹಣಗಿ, ವಿನಾಯಕ, ಪ್ರಕಾಶ ಬಸವಾ ,ರಾಕೇಶ್ ರಷೀದ್ ವಜೀರ, ವಿಜಯ ಮೆಹರವಾಡೆ, ವಿನಾಯಕ್ ಬಾಕಳೆ, ವಿಜಯ ಬಾಕಳೆ ಮತ್ತು ಹುಬ್ಬಳ್ಳಿಯ ಎಲ್ಲ ಛಾಯಾಗ್ರಾಹಕರು ಭಾಗವಹಿಸಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English