ಕತಾರಿನಿಂದ ಮಂಗಳೂರಿಗೆ ಪ್ರತ್ಯೇಕ ವಿಮಾನ ಬೇಕು: ಸುಬ್ರಮಣ್ಯ ಹೆಬ್ಬಾಗಿಲು

12:19 AM, Monday, May 25th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Subrahmanya Hebbagiluಕತಾರ್:‌ 22 ಮೇ 2020 ಕನ್ನಡಿಗರ ಇತಿಹಾಸದಲ್ಲಿ ನೆನಪಿನಲ್ಲಿಡಬೇಕಾದ ದಿನ, ಪ್ರತ್ಯೇಕವಾಗಿ 185  ಜನ ಪ್ರಯಾಣಿಕರನ್ನು ಹೊತ್ತು ದೋಹಾದಿಂದ ಬೆಂಗಳೂರಿಗೆ ನೇರ ವಿಮಾನ ಯಾನಕ್ಕೆ ಕಾರಣಕರ್ತರಾದವರು ಹಾಗೂ ಪ್ರಯಾಣಿಕರೆಲ್ಲರೂ ನೆನಪಿನಲ್ಲಿಡಬೇಕಾದ ಸುದಿನ ಎಂದು ಕತಾರ್‌ ನ ಭಾರತೀಯ‌ ಸಮುದಾಯ ಹಿತೈಷಿ‌ ವೇದಿಕೆಯ ಕರ್ನಾಟಕ ಪ್ರತಿನಿಧಿ ಸುಬ್ರಮಣ್ಯ ಹೆಬ್ಬಾಗಿಲು ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸುಬ್ರಮಣ್ಯ, ಕರೋನಾ 19 ಮಹಾ ಮಾರಿಯಿಂದ ತತ್ತರಿಸಿ ಹೋಗಿ, ನಿರಾಶ್ರಿತ ಮತ್ತು ತುರ್ತು ಪರಿಸ್ಥಿತಿಯಲ್ಲಿರುವ ಕತಾರಿನ ಕನ್ನಡಿಗರಿಗೆ ಅಭಯ ಹಸ್ತ ನೀಡಿದ ಭಾರತ ಹಾಗೂ ಕರ್ನಾಟಕ ಸರಕಾರವು ಸಕಲ ಪ್ರಯತ್ನವನ್ನು ಮಾಡಿ, ‘ವಂದೇ ಭಾರತ ನಿಯೋಗ”ದಡಿಯಲ್ಲಿ ಬೆಂಗಳೂರಿಗೆ ಮೊದಲ ವಿಮಾನಯಾನವನ್ನು ಹಾರಲು ವ್ಯವಸ್ಥೆ ಮಾಡಿರುವುದು ಸಂತಸದ ವಿಚಾರ.

ಈ ವಿಮಾನದಲ್ಲಿ ಕರ್ನಾಟಕ ಮೂಲದ, ಕತಾರಿನಲ್ಲಿ ನೆಲೆಸಿದ್ದ ಕನ್ನಡಿಗರು, ಅದರಲ್ಲೂ ಗರ್ಭಿಣಿಯರು, ವಯೋವೃದ್ಧರು, ಅನಾರೊಗ್ಯದಿಂದ ಬಳಲುತ್ತಿರುವವರು ಹಾಗೂ ಕೆಲಸ ಕಳೆದುಕೊಂಡು ವಾಸ್ತವ್ಯ ಹೂಡಲಾಗದೆ ಬಳಲುತ್ತಿರುವವರನ್ನು ಮಾತೃಭೂಮಿಗೆ ಹಿಂತಿರುಗಲು ವಿಮಾನದ ವ್ಯವಸ್ಥೆಗೆ ಕಾರಣಕರ್ತರಾದ ಎಲ್ಲಾ ಮಂತ್ರಿಗಳು, ಸಚಿವರು ಹಾಗು ಸ್ವಯಂ ಸೇವಾಕರ್ತರಿಗೂ ವಂದನೆಗಳು.

ಕತಾರ್‌ನಿಂದ ಸುಮಾರು 1,300 ಜನರು ಊರಿಗೆ ಬರಲು ನೋಂದಣಿ ಮಾಡಿಸಿಕೊಂಡಿದ್ದಾರೆ. ಅವರಲ್ಲಿ ಕರ್ನಾಟಕ ಕರಾವಳಿಯವರೇ ಹೆಚ್ಚು. ಬೆಂಗಳೂರು, ಮೈಸೂರು, ಮಂಡ್ಯ ಮೊದಲಾದೆಡೆ ಹೋಗುವವರು ಬೆಂಗಳೂರಿನ ಮೂಲಕ ಹೋಗುವವರಾದರೆ, ಅತ್ತ ಕಾಸರಗೋಡು, ಇತ್ತ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಭಟ್ಕಳ, ಬೈಂದೂರಿನವರೆಗೆ ಹೋಗುವವರು ಮಂಗಳೂರನ್ನು ಆಶ್ರಯಿಸಬೇಕಾಗಿದೆ.

ಈಗ ಬೆಂಗಳೂರಿಗೆ ವಿಮಾನ ಯಾನಕ್ಕೆ ತಾತ್ವಿಕ ಸಮ್ಮತಿಯಾಗಿದ್ದರೂ ಮಂಗಳೂರಿಗೆ ಆಗಿಲ್ಲ ಎನ್ನುವ ಕೊರಗು ಕತಾರ್‌ನಲ್ಲಿರುವ ಕರಾವಳಿ ಭಾಗದವರಿಗೆ. ಕತಾರ್‌ ನಲ್ಲಿರುವ ಕನ್ನಡಿಗರನ್ನು ಆದಷ್ಟು ಬೇಗ ಭಾರತಕ್ಕೆ ಕರೆತರಲು ಕೇಂದ್ರ‌ ಸಚಿವ‌ ಡಿ.ವಿ.ಸದಾನಂದ ಗೌಡ,‌ ಕರ್ನಾಟಕ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಲಾಗಿದೆ. ಮಂಗಳೂರಿಗೆ‌ ಕತಾರ್ ನಿಂದ ನೇರ ವಿಮಾನ‌ ವ್ಯವಸ್ಥೆ ಹೆಚ್ಚು‌ ಸಂಕಷ್ಟದಲ್ಲಿರುವ ದಕ್ಷಿಣ ಕನ್ನಡ, ಉಡುಪಿ ಜನತೆಗೆ ಅಗತ್ಯವಿದೆ. ಹೀಗೆ ಮುಂದುವರೆದು ಮಂಗಳೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹಿಂತಿರುಗಬೇಕೆಂದಿರುವ ಕನ್ನಡಿಗರಿಗೆ ವಿಮಾನ ಸೇವೆಯನ್ನು ವ್ಯವಸ್ಥೆ ಮಾಡಲು ಮನವಿ ಮಾಡಿದ್ದಾರೆ.

ವರದಿ : ಶಂಭು ಹುಬ್ಬಳ್ಳಿ
ಮೆಗಾ ಮೀಡಿಯಾ ನ್ಯೂಸ್ ಬ್ಯುರೋ

 

Subrahmanya Hebbagilu

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English