ನವದೆಹಲಿ : ಶೀಘ್ರದಲ್ಲೇ ಉಪಗ್ರಹ ವ್ಯವಸ್ಥೆ ಹಾಗೂ ಇಂಟರ್ನೆಟ್, ಮೊಬೈಲ್ಫೋನ್ ಅಲ್ಲದೆ ಸ್ಥಿರದೂರವಾಣಿಗಳು ಸೇರಿ ಆಧುನಿಕ ಸಂವಹನ ವ್ಯವಸ್ಥೆಯೇ ಸ್ತಬ್ಧವಾಗಲಿದೆ ಎಂಬ ಆಘಾತಕಾರಿ ಮಾಹಿತಿಯೊಂದು ಸಂಶೋಧನಾ ಮೂಲವೊಂದರಿಂದ ಬಂದಿದೆ.
ಮನುಷ್ಯ ಸಹಿತ ಭೂಮಿ ಮೇಲಿನ ಸಕಲ ಜೀವಿಗಳೂ ವಿನಾಶವಾಗುತ್ತವೆ ಎಂಬ ಮಾತುಗಳನ್ನು ಸಾಕಷ್ಟು ಬಾರಿ ಕೇಳಿದ್ದೇವೆ ಅದು ಆಗಲಿಲ್ಲ, ಈಗ ಬಂದಿರುವ ಸುದ್ದಿ ಅತ್ಯಂತ ಖಚಿತ ಮೂಲದಿಂದ ಬಂದಿದೆ ಅಂತ ಜನ ಆತಂಕಗೊಂಡಿದ್ದಾರೆ.
ಕಳೆದ ಎರಡು ದಶಕಗಳಲ್ಲಿ ಭೂಮಿ ಮೇಲಿನ ಗುರುತ್ವಾಕರ್ಷಣ ಶಕ್ತಿ ಶೇ.10 ರಷ್ಟು ದುರ್ಭಲಗೊಳ್ಳುತ್ತಿದೆ, ಸೌರ ವಿಕಿರಣದಿಂದ ನಮಗೆ ರಕ್ಷಣೆ ಒದಗಿಸುವ ಜತೆಗೆ ಮೊಬೈಲ್ಫೋನ್, ಇಂಟರ್ನೆಟ್, ಉಪಗ್ರಹ ಸೇರಿ ಆಧುನಿಕ ಸಂವಹನ ಸೌಲಭ್ಯ ಗಳು ಇದರಿಂದ ವಿನಾಶ ಗೊಳ್ಳಲಿದೆ ಎನ್ನುವ ಮಾಹಿತಿ ಸಿಕ್ಕಿದೆ.
ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ (ಇಎಸ್ಎ) ಸ್ವಾರ್ಮ್ ಎಂಬ ಉಪಗ್ರಹಗಳ ಜಾಲ ಒದಗಿಸಿರುವ ಮಾಹಿತಿಯನ್ನು ಸಮಗ್ರವಾಗಿ ಅಧ್ಯಯನ ನಡೆಸಿದ ಬಳಿಕ ವಿಜ್ಞಾನಿಗಳು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಆಫ್ರಿಕಾ ಮತ್ತು ದಕ್ಷಿಣ ಅಮೆರಿಕ ನಡುವಿನ ಸೌತ್ ಅಟ್ಲಾಂಟಿಕ್ ಪ್ರದೇಶದಲ್ಲಂತೂ ಕಾಂತಕ್ಷೇತ್ರ ಶಕ್ತಿ ತುಂಬಾ ವೇಗವಾಗಿ ಕುಸಿಯುತ್ತಿದೆ ಎಂದು ಜರ್ಮನ್ ರಿಸರ್ಚ್ ಸೆಂಟರ್ ಫಾರ್ ಜಿಯೋಸೈನ್ಸಸ್ನ ಜರ್ಗೆನ್ ಮಟ್ಜಕಾ ಹೇಳಿದ್ದಾರೆ.
ಇದೀಗ ಕಾಂತಕ್ಷೇತ್ರ ತೀವ್ರಗತಿಯಲ್ಲಿ ಕ್ಷೀಣಿಸುತ್ತಿರುವುದು ಏಕೆ ಎಂಬ ಬಗ್ಗೆ ವಿಜ್ಞಾನಿಗಳು ಅಧ್ಯಯನ ಆರಂಭಿಸಿದ್ದಾರೆ. ಉತ್ತರ ಮತ್ತು ದಕ್ಷಿಣ ಧ್ರುವಗಳ ನಡುವೆ ಕಾಂತಕ್ಷೇತ್ರ ತುಂಬಾ ವೇಗವಾಗಿ ಹೊಯ್ದಾಡುತ್ತಿದೆ. ಇದುವೇ ಅದರ ಶಕ್ತಿಯ ತೀವ್ರಗತಿಯ ಕ್ಷೀಣಿಸುವಿಕೆಗೆ ಕಾರಣ ಎಂದು ವಿಜ್ಞಾನಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಅಂದಾಜು 7,80,000 ವರ್ಷಗಳ ಹಿಂದೆ ಈ ರೀತಿ ಸಂಭವಿಸಿತ್ತು. ಅದೀಗ ಪುನರಾವರ್ತನೆ ಆಗುತ್ತಿರಬಹುದು ಎಂದು ಹೇಳಿದ್ದಾರೆ.
Click this button or press Ctrl+G to toggle between Kannada and English