ಗದಗ: ರಾಜ್ಯದಲ್ಲಿ ಸುಮಾರು 7 ಲಕ್ಷ , 75 ಸಾವಿರ ಜನ ಆಟೋ ಟ್ಯಾಕ್ಸಿ ಚಾಲಕರಿಗೆ ಕರೋನಾ ಪರಿಹಾರದ ರೂಪವಾಗಿ ಒಂದೇ ಕಂತಿನಲ್ಲಿ ಐದು ಸಾವಿರ ರೂ. ಸರ್ಕಾರ ಘೋಷಣೆ ಮಾಡಿದ್ದು ಸಂತೋಷದ ವಿಷಯವಾಗಿದೆ.
ಆದರೆ, ಈ ಘೋಷಣೆ ಕೇವಲ ಕಾಗದದ ಮೇಲೆ ಮಾತ್ರ ಇದೆ. ಈ ಹಣ ಪಡೆಯಲು ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಹಲವಾರು ಕಠಿಣ ನಿಬಂಧನೆಗಳನ್ನು ನೀಡಿದ್ದು ಇದರಿಂದ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಗದಗ ಜಿಲ್ಲಾ ಆಟೋ ಚಾಲಕರ ಮಾಲೀಕರ ಸಂಘ, ಜೈಭೀಮ್ ಆಟೋ ಚಾಲಕರ ಮಾಲೀಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ್ ಮನಗುಂಡಿ ಪತ್ರಿಕಾ ಪ್ರಕಟಣೆ ದೂರಿದ್ದಾರೆ.
ಈಗಾಗಲೇ ಸಂಕಷ್ಟದಲ್ಲಿ ಇರುವಂತಹ ಆಟೋ ಮತ್ತು ಟ್ಯಾಕ್ಸಿ ಚಾಲಕರು ಸರ್ಕಾರ ನೀಡುತ್ತಿರುವ ಸಹಾಯಧನ ಪಡೆಯಲು ಹರಸಾಹಸ ಪಡುತ್ತಿರುವುದು ಅತ್ಯಂತ ದುರ್ದೈವದ ಸಂಗತಿಯಾಗಿದೆ. ಎಲ್ಲಾ ಚಾಲಕರು ಸ್ವಂತ ವಾಹನ ಹೊಂದಿರುವುದಿಲ್ಲವೆಂಬ ಕನಿಷ್ಠ ಜ್ಞಾನವೂ ಸರ್ಕಾರಕ್ಕೆ ಇಲ್ಲದೆ ಇರುವುದು ಅತ್ಯಂತ ದುರದೃಷ್ಟಕರವಾಗಿದೆ. ಹಲವಾರು ಚಾಲಕರು ಬಾಡಿಗೆ ರೂಪದಲ್ಲಿ ವಾಹನಗಳನ್ನು ಪಡೆದು ಜೀವನ ನಡೆಸುತ್ತಿರುವುದು ತಮ್ಮ ಗಮನಕ್ಕೆ ಬಂದಿಲ್ಲ ಎಂಬುದು ಅತ್ಯಂತ ದುರಾದೃಷ್ಟ. ಆದ ಕಾರಣ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶೀಫ್ರವೇ ಎಲ್ಲ ತಪ್ಪುಗಳನ್ನು ಸರಿಪಡಿಸಬೇಕು. ಈಗ ಸರಕಾರದಿಂದ ಸೇವಾ ಸಿಂಧು ಮುಖಾಂತರ ಅರ್ಜಿ ಬಿಡುಗಡೆ ಮಾಡಿದ್ದು ಅದರಲ್ಲಿ ಅರ್ಜಿ ಸಲ್ಲಿಸಲು ವಾಹನದ ಮಾದರಿ ವಾಹನ ಚೆಸ್ಸಿ ನಂಬರ, ವಾಹನದ ಪಾಸಿಂಗ್ ದಿನಾಂಕ ಕೇಳಿರುವುದು ಎಷ್ಟು ಸರಿ ಎಂದು ಜನಸಾಮಾನ್ಯರು ಪ್ರಶ್ನೆ ಮಾಡುತ್ತಿದ್ದಾರೆ.
ಸಾರಿಗೆ ಸಚಿವರು ಮಾಧ್ಯಮದವರ ಮುಂದೆ ಆಟೋ ಮತ್ತು ಟ್ಯಾಕ್ಸಿ ಚಾಲಕರು ತಮ್ಮ ಲೈಸೆನ್ಸ್ ನಂಬರ್ ಬ್ಯಾಡ್ಜ ನಂಬರ್ ಆಧಾರ ನಂಬರ, ಬ್ಯಾಂಕ್ ನಂಬರ್ ಪಾಸ್ ಪುಸ್ತಕಗಳನ್ನು ಕೊಡಬೇಕೆಂದು ಹೇಳಿರುತ್ತಾರೆ.
ಆದರೆ ಮರುದಿವಸವೇ ತಮ್ಮ ಸರ್ಕಾರದಿಂದ ಒಂದು ಆದೇಶ ಜಾರಿಯಾಗುತ್ತೆ ಆದೇಶದಲ್ಲಿ ಎಲ್ಲ ತರದ ವಿಷಯಗಳನ್ನು ಒಳಗೊಂಡು ಯಾವ ತರದ ವಾಹನವನ್ನು ಚಾಲಕ ಚಲಾಯಿಸುತ್ತಿದ್ದಾನೆ. ಆತನ ವಾಹನದ ನಂಬರ ಹಾಗೂ ಆತ ಹೊಂದಿರುವ ಗಾಡಿಯ ಚೆಸ್ಸಿ ನಂಬರ್ ಗಳನ್ನು ಕೇಳಿರುವುದು ಅತ್ಯಂತ ದುರದೃಷ್ಟವಾಗಿದೆ.
ಆದ್ದರಿಂದ ರಾಜ್ಯದಲ್ಲಿರುವ 7ಲಕ್ಷ 75ಸಾವಿರ ಚಾಲಕರು ದಂಗೆ ಏಳುವ ಮುಂಚೇನೆ ತಾವುಗಳು ಈ ತಪ್ಪುಗಳನ್ನು ಸರಿಪಡಿಸಬೇಕು ಒಂದು ವೇಳೆ ಇನ್ನೆರಡು ದಿನಗಳಲ್ಲಿ ಎಲ್ಲಾ ಗೊಂದಲಗಳಿಗೆ ತೆರೆಯದಿದ್ದರೆ ಲಾಕೌ ಡೌನ ನಿಯಮಗಳನ್ನು ಗಾಳಿಗೆ ತೂರಿ ನಾವೆಲ್ಲರೂ ಕೂಡ ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಬಸವರಾಜ ಮನಗುಂಡಿ ಎಚ್ಚರಿಸಿದ್ದಾರೆ.
ವರದಿ : ಶಂಭು
ಮೆಗಾಮೀಡಿಯಾ ನ್ಯೂಸ್. ಹುಬ್ಬಳ್ಳಿ ಬ್ಯೂರೋ
Click this button or press Ctrl+G to toggle between Kannada and English