ಉಡುಪಿ ಜಿಲ್ಲೆಯಲ್ಲಿ ಎಂಟು ಮಕ್ಕಳು ಸೇರಿ 16 ಜನರಿಗೆ ಕೊರೋನಾ ಸೋಂಕು ದೃಢ

6:32 PM, Monday, May 25th, 2020
Share
1 Star2 Stars3 Stars4 Stars5 Stars
(No Ratings Yet)
Loading...

Udupi Covid19ಉಡುಪಿ: ಜಿಲ್ಲೆಯಲ್ಲಿ ಮತ್ತೆ 16 ಜನರಿಗೆ ಕೊರೋನಾ ಸೋಂಕು ದೃಢವಾಗಿದೆ. ಇದರಿಂದ ಕಳೆದ 24 ಗಂಟೆಯಲ್ಲಿ ಜಿಲ್ಲೆಯಲ್ಲಿ ಸೋಂಕು ದೃಢವಾದವರ ಸಂಖ್ಯೆ32 ಕ್ಕೆ ಏರಿಕೆಯಾಗಿದೆ. ಇದರಿಂದ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ ಶತಕ ದಾಟಿದ್ದು 108 ಆಗಿದೆ.

ಇಂದು ಸಂಜೆ ವರದಿಯಾದ 16 ಪ್ರಕರಣಗಳ ಪೈಕಿ 13 ಪ್ರಕರಣಗಳು ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಇದರಲ್ಲಿ ಒಂದು ವರ್ಷದ ಮಗುವೂ ಸೇರಿದೆ. ಸೋಂಕಿತ ಸಂಖ್ಯೆ 1435ರ ಸಂಪರ್ಕದಿಂದ 65 ವರ್ಷದ ಮಹಿಳೆಗೆ ಸೋಂಕು ತಾಗಿದ್ದು, ಕಂಟೈನ್ ಮೆಂಟ್ ಪ್ರದೇಶಕ್ಕೆ ಭೇಟಿ ನೀಡಿದ ಓರ್ವ ಸೋಂಕಿಗೆ ತುತ್ತಾಗಿದ್ದಾರೆ.

ಪ್ರಕರಣಗಳ ಪೈಕಿ ಎಂಟು ಮಕ್ಕಳು ಸೇರಿದ್ದಾರೆ – 3 ರಿಂದ 11 ವರ್ಷ ವಯಸ್ಸಿನ ಆರು ಹುಡುಗಿಯರು, ಮತ್ತು 4 ಮತ್ತು 5 ವರ್ಷ ವಯಸ್ಸಿನ ಇಬ್ಬರು ಹುಡುಗರು.

ಕಳೆದೆರಡು ವಾರಗಳ ಹಿಂದೆ ಕೇವಲ ಮೂರು ಇದ್ದ ಜಿಲ್ಲೆಯ ಸೋಂಕಿತರ ಸಂಖ್ಯೆ ಇಂದು ನೂರರ ಗಡಿ ದಾಟಿದೆ. ಮೂವರು ಚಿಕಿತ್ಸೆ ಮುಗಿಸಿ ಗುಣಮುಖರಾಗಿ ಮನೆಗೆ ಮರಳಿದ್ದರೆ, ಓರ್ವ ಸಾವನ್ನಪ್ಪಿದ್ದಾನೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English