ಕರ್ನಾಟಕಕ್ಕೆ ಕತಾರ್ ನಿಂದ 10 ದಿನಗಳವರೆಗೆ ವಿಮಾನವಿಲ್ಲ

7:48 PM, Monday, May 25th, 2020
Share
1 Star2 Stars3 Stars4 Stars5 Stars
(No Ratings Yet)
Loading...

qatarಕತಾರ್ : ಮೇ.26 ಸೋಮವಾರದಿಂದ ಜೂನ್‌ 4 ರವರೆಗೆ 10 ದಿನ ಕರ್ನಾಟಕಕ್ಕೆ ಯಾವುದೇ ವಿಮಾನಯಾನ ಸೌಲಭ್ಯ ಒದಗಿಸದೇ ಇರುವುದು ವಿಪರ್ಯಾಸದ ಸಂಗತಿ ಎಂದು ಕತಾರ್ ನ ಭಾರತೀಯ ಸಮುದಾಯ ಹಿತೈಷಿ ವೇದಿಕೆಯ ಕರ್ನಾಟಕ ಪ್ರತಿನಿಧಿ ಸುಬ್ರಮಣ್ಯ ಹೆಬ್ಬಾಗಿಲು ಹೇಳಿದ್ದಾರೆ.

ಅವರು ಮೆಗಾಮೀಡಿಯಾ ನ್ಯೂಸ್‌ ನೊಂದಿಗೆ ಮಾತನಾಡಿ, ಕೊರೋನಾ ಭೀತಿಯಿಂದ ಕರ್ನಾಟಕಕ್ಕೆ ಬರಲು ಸುಮಾರು 3 ಸಾವಿರಕ್ಕೂ ಹೆಚ್ಚು ಕನ್ನಡಿಗರು ಕಾಯುತ್ತಿದ್ದಾರೆ. ಈ ಕುರಿತು ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗಿತ್ತು. ಆದರೆ ಭಾರತಕ್ಕೆ ತೆರಳುವ ವಿಮಾನಗಳಲ್ಲಿ 10 ದಿನಗಳವರೆಗೆ ಒಂದೂ ಕರ್ನಾಟಕಕ್ಕೆ ಇರದಿರುವುದು ನಿರಾಸೆ ಮೂಡಿಸಿದೆ ಎಂದಿದ್ದಾರೆ.

ದೇಶದ ವಿವಿಧ ರಾಜ್ಯಗಳಿಗೆ ಬರುವ ವಿಮಾನಗಳಲ್ಲಿ ಸುಮಾರು 19 ಸಾವಿರ ಭಾರತೀಯರಿಗೆ ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಕರ್ನಾಟಕಕ್ಕೆ ಒಂದೂ ವಿಮಾನವಿಲ್ಲ.

ಈ ಕುರಿತು ಕೇಂದ್ರ ಸಚಿವ ಸುರೇಶ ಅಂಗಡಿ, ಎಸ್‌. ಜೈಶಂಕರ್‌ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಕನ್ನಡಿಗರ ಬೇಡಿಕೆ ಈಡೇರದಿರುವುದು ನಿರಾಸೆ ಮೂಡಿದೆ ಎಂದು ಸುಬ್ರಹ್ಮಣ್ಯ ಹೇಳಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English