ಕತಾರಿನಲ್ಲಿ ’ಕರೋನಾ-19’ ಸಂಕಷ್ಟಕ್ಕೀಡಾದವರಿಗೆ ನೆರವಾಗುವ ಕನ್ನಡಿಗರ ಮಾನವೀಯತೆಯ ಸ್ಟೋರಿ

10:09 PM, Monday, May 25th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

qatar kannadigaಕತಾರ್ :  ದಿನೇ ದಿನೇ ಕರೋನ ಮಹಾಮಾರಿಯ ತಾಂಡವ ಹೆಚ್ಚುತ್ತಿದೆ. ಒಂದೆಡೆ ಪೀಡಿತರಾಗಿ ರೋಗಗ್ರಸ್ಥ ರಾಗಿರುವವರ ಸಂಖ್ಯೆ ಹೆಚ್ಚುತ್ತಿದ್ದರೆ, ಇನ್ನೊಂದೆಡೆ ಕೆಲಸ ಕಳೆದುಕೊಂಡು, ಸಂಬಳವಿಲ್ಲದೆ, ಹೊಟ್ಟೆಗೆ ಊಟವೂ ಸಿಗದಂತಹ ಪರಿಸ್ಥಿತಿ ಹಲವರನ್ನು ನಿರಾಶ್ರಿತರನ್ನಾಗಿಸಿದೆ. ಕತಾರಿನ ಭಾರತೀಯ ರಾಯಭಾರಿ ಕಾರ್ಯಾಲಯದಡಿಯಲ್ಲಿ ಕಾರ್ಯನಿರತವಾಗಿರುವ ’ಭಾರತೀಯ ಸಮುದಾಯ ಹಿತೈಶಿ ವೇದಿಕೆ’ (ಐ.ಸಿ.ಬಿ.ಎಫ಼್) ಸಂಸ್ಥೆಯು ಇಂತಹ ನಿರಾಶ್ರಿತರನ್ನು ಹುಡುಕಿ ಅವರಿಗೆ ಸಹಾಯ ಹಸ್ತ ನೀಡುತ್ತಿದೆ. ಪ್ರತ್ಯೇಕವಾಗಿ ಕನ್ನಡಿಗರಾದ ಶ್ರೀ ಮಹೇಶ್ ಗೌಡ, ಉಪಾಧ್ಯಕ್ಷರು, ಐ.ಸಿ.ಬಿ.ಎಫ಼್ ಮತ್ತು ಶ್ರೀ ಸುಬ್ರಮಣ್ಯ ಹೆಬ್ಬಾಗಿಲು, ಜಂಟಿ ಕಾರ್ಯದರ್ಶಿ, ಐ.ಸಿ.ಬಿ.ಎಫ಼್ ಇವರಿಬ್ಬರು ಸ್ವತಃ ಮುಂಚೂಣಿಯಲ್ಲಿ ಸೇವೆ ಸಲ್ಲಿಸುತ್ತಿರುವರು. ಪ್ರತಿದಿನ ಸರಿ ಸುಮಾರು 500 ರಿಂದ 700 ಜನರಿಗೆ ಉಟೋಪಚಾರದ ವ್ಯವಸ್ಥೆಯನ್ನು ಸತತವಾಗಿ ನಾಲ್ಕು ವಾರಗಳಿಂದ ಮಾಡುತ್ತಾ ಬರುತ್ತಿರುವರು, ಇನ್ನೂ ಈ ಸೇವೆ ಮುಂದುವರೆದಿದೆ. 100 ಕೈಚೀಲದಲ್ಲಿ 500 ರಿಂದ 700  ಜನರಿಗೆ ಸಾಕಾಗುವಷ್ಟು ಆಹಾರ ಪದಾರ್ಥಗಳನ್ನು ಜೊತೆಗಿರಿಸಲಾಗುತ್ತಿದೆ.

ಮುಂಜಾನೆ ಸೂಕ್ತ ವೈಯಕ್ತಿಕ ಸುರಕ್ಷತ ವಸ್ತ್ರವನ್ನು ಧರಿಸಿ, ’ಕತಾರಾ’ ಸಂಸ್ಥೆ, ಐ.ಸಿ.ಬಿ.ಎಫ಼್. ಕಾರ್ಯಾಲಯದಲ್ಲಿರುವ, ಮತ್ತಿತ್ತರ ದಾನಿಗಳ ಬಳಿ ಹೋಗಿ, ಅವರಿಂದ ಆಹಾರ ಸಾಮಗ್ರಿಗಳು, ತರಕಾರಿ, ಸೊಪ್ಪು, ಹಣ್ಣುಗಳನ್ನು ಸ್ವೀಕರಿಸಿ, ಅದನ್ನು ವಾಹನಗಳಿಗೆ ತುಂಬಿಸುತ್ತಾರೆ. ವಾಹನ ಚಾಲಕರೊಂದಿಗೆ ಅವಶ್ಯಕತೆ ಇರುವ ಸಂತ್ರಸ್ತರಿಗೆ ಹಂಚಿಕೊಂಡು ಬರುತ್ತಾರೆ. ಯಾರು ಯಾರಿಗೆ ಹಂಚುತ್ತಾರೆ ಎಂಬ ಪ್ರಶ್ನೆ ಉಗಮವಾಗುವುದು ಸಹಜ. ಭಾರತೀಯ ರಾಯಭಾರಿ ಕಛೇರಿಗೆ ಹಾಗು ಐ.ಸಿ.ಬಿ.ಎಫ಼್ ಕೇಂದ್ರಕ್ಕೆ ದಿನವು ನೂರಾರು ಕರೆಗಳು ಬರುತ್ತಲೇ ಇವೆ. ಮನೆಯಲ್ಲಿ ಬೇಸತ್ತು ಹವಣಿಸುತ್ತಿರುವವರು, ಕೆಲಸ ಕಳೆದುಕೊಂಡಿರುವವರು, ಸಂಬಳ ಇಲ್ಲದಿರುವವರು, ಹೊಟ್ಟೆ ಪಾಡಿಗೆ ನರಳುತ್ತಿರುವವರು, ಬಾಡಿಗೆ ಕಟ್ಟಲು ಹಣವಿಲ್ಲದಿರುವವರು, ಖಾಯಿಲೆಯಿಂದ ಬಳಲುತ್ತಿರುವವರು, ಮಾತೃಭೂಮಿಗೆ ಹಿಂತಿರುಗಲು ಹಾತೊರೆಯಿತ್ತುರುವವರು, ಊಟವಿಲ್ಲದೆ ಹಸಿವಿನಿಂದ ಕಂಗಾಲಾಗುತ್ತಿರುವವರು, ಹೀಗೆ ಅನೇಕಾನೇಕ ಶೋಚನೀಯ ಪರಿಸ್ಥಿತಿಯಲ್ಲಿರುವವರು ಸಹಾಯವನ್ನು ಕೋರಿ, ತುರ್ತು ಪರಿಸ್ಥಿತಿಗೆಂದೇ ಪ್ರಕಟಗೊಳಿಸಿರುವ ದೂರವಾಣಿ ಸಂಖ್ಯೆಗೆ ಕರೆ ನೀಡಿ, ತಮ್ಮ ದುಃಖವನ್ನು ತೋಡಿಕೊಳ್ಳುತ್ತಿರುವರು. ಕೇಂದ್ರಿಕೃತ ಕಾರ್ಯಲಯದಿಂದ, ಇಂತಹವರ ಮಾಹಿತಿಯನ್ನು ಪಡೆದು, ಊಟದ ಪದಾರ್ಥಗಳನ್ನು ಯಾಚಿಸುತ್ತಿರುವವರ ಮನೆಯನ್ನು ಹುಡುಕಿಕೊಂಡು ಹೋಗಿ ಕೈಚೀಲದಲ್ಲಿ ಆದಷ್ಟು ಸಾಮಗ್ರಿಗಳನ್ನು ನೀಡಿ, ಸಹಾಯ ಮಾಡುತ್ತಿರುವರು. ಶ್ರೀ ಮಹೇಶ್ ಗೌಡ, ಶ್ರೀ ಸುಬ್ರಮಣ್ಯ ಹೆಬ್ಬಾಗಿಲು, ಇತರ ವಾಹನ ಚಾಲಕರು ಹಾಗೂ ಸ್ವಯಂಸೇವಕರು ತಮಗೆ ರೋಗದ ಸೊಂಕು ಹರಡುವುದರ ಭಯ-ಭೀತಿಯನ್ನು ತೊರೆದು ಜನರ ಸೇವೆಯಲ್ಲಿ ತೊಡಗಿರುವುದು ನಿಜವಾಗಲು ಶ್ಲಾಘನೀಯ, ಸಾಹಸದ ಕಾರ್ಯ.

qatar ಕೇವಲ ಭಾರತೀಯರಿಗೆ ಮಾತ್ರವಲ್ಲದೆ ನೇಪಾಲ, ಬಾಂಗ್ಲದೇಶ, ಶ್ರೀಲಂಕಾ ಹಾಗೂ ಪಾಕಿಸ್ತಾನ ದೇಶದವರಿಗೂ ಊಟದ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸುತ್ತಿರುವುದು ಇಲ್ಲಿ ಗಮನಿಸಬೇಕಾದ ವಿಚಾರ. ನಿಸ್ವಾರ್ಥ ಸೇವೆಯ ಉದಾಹರಣೆ ಇದು. ಇವರು ಕೊಡುವುದನ್ನು ಸ್ವೀಕರಿಸುವಾಗ, ಕೆಲವರಿಗೆ ಕಣ್ಣು ತುಂಬಿ ಬಂದಿರುವುದು ಹೃದಯಕ್ಕೆ ನಾಟುವ ಸನ್ನಿವೇಶ. ಸ್ವಾಭಿಮಾನ ಹಾಗು ಅಸಹಾಯಕ ಪರಿಸ್ಥಿತಿಗಳ ಮಧ್ಯದ ಯುದ್ಧದಲ್ಲಿ ಸ್ವಾಭಿಮಾನವು ಗೆಲ್ಲಲು ಹವಣಿಸುತ್ತಿರುವುದನ್ನು ನೋಡಲು ಸ್ವಯಂಸೇವಕರು ಕಾಯದೆ, ಆ ಸ್ಥಳದಿಂದ ಮುಂದಿನ ವಿಳಾಸವನ್ನು ಹುಡುಕಿಕೊಂಡು ಧಾವಿಸುವರು.

ಮುಂಜಾನೆಯಿಂದ ಸಂಜೆಯವರೆಗೆ ಎಷ್ಟಾದರೂ ಅಷ್ಟು ಜನರಿಗೆ ವಿತರಿಸುವುದು, ಅವರ ದುಃಖತಪ್ತ ಕಥೆಯನ್ನು ಕೇಳುವುದು, ಸಂತೈಸಿ ಹುಮ್ಮಸ್ಸು ನೀಡಿ, ಬದುಕಲು ಉತ್ಸಾಹ ತುಂಬಿಸಿ ಬರುತ್ತಿರುವ ಶ್ರೀ ಮಹೇಶ್ ಗೌಡ, ಶ್ರೀ ಸುಬ್ರಮಣ್ಯ ಹೆಬ್ಬಾಗಿಲು ಹಾಗೂ ಇತರ ಸ್ವಯಂಸೇವಕರು, ಕೇವಲ ಪ್ರಶಂಸೆ, ಪ್ರಶಸ್ತಿ, ಹೆಸರಿಗಾಗಿ ಕೆಲಸಮಾಡುತಿಲ್ಲ. ಇವರು ಮನುಜರಿಗೆ ಸೇವೆಸಲ್ಲಿಸುತ್ತಾ, ಮನುಷ್ಯತ್ವದ ಮೌಲ್ಯವನ್ನು ಚಕ್ರವನ್ನಾಗಿಸಿ, ಮಾನವೀಯತೆಯ ರಥವನ್ನು ಕರೋನಾ ಮಾರಿ ಎದುರು ನಿಲ್ಲಿಸಿ, ತಮ್ಮ ಸರ್ವಸ್ವವನ್ನು ಒತ್ತೆಯಿಟ್ಟು, ದಿನವು ಸಂಗ್ರಾಮ ನಡೆಸುತ್ತಿದ್ದಾರೆ.

qatar ಇವರೆಲ್ಲರಿಗೂ ಆರೋಗ್ಯ ಚೆನ್ನಾಗಿರಲಿ, ಹುಮ್ಮಸ್ಸು ಹೀಗೆ ಇರಲಿ ಹಾಗೂ ಉತ್ಸಾಹ ದ್ವಿಗುಣವಾಗಲೆಂದು ಇವರು ಸೇವೆ ಮಾಡಿರುವ, ಮಾಡುತ್ತಿರುವವರು ಬೇಡಿಕೊಳ್ಳುವಂತೆ, ನಾವುಗಳೂ ಇವರೆಲ್ಲರ ಆರೋಗ್ಯಾಭಿವೃದ್ಧಿಗೆ ಪ್ರಾರ್ಥಿಸೋಣ.

ಕತಾರಿನಲ್ಲಿ ಕರೋನಾದಿಂದ ನಿರಾಶ್ರಿತರಾಗಿ ಯಾರದರೂ ಇದ್ದಲ್ಲಿ, ಪ್ರತ್ಯೇಕವಾಗಿ ಕನ್ನಡಿಗರಿಗೆ ಸೂಕ್ತ ಸಹಾಯ ಅಗತ್ಯವಿದ್ದಲ್ಲಿ, ನೆರವಿಗೆ ನೀವು ಸಂಪರ್ಕಿಸಬೇಕಾದ ವಿವರಗಳು ಕೆಳಗೆ ನೀಡಲಾಗಿದೆ,

ಭಾರತೀಯ ಸಮುದಾಯ ಹಿತೈಶಿ ವೇದಿಕೆಯ ಕರ್ನಾಟಕದ ಪ್ರತಿನಿಧಿಗಳು (ICBF Representatives from Karnataka)

ಸುಬ್ರಮಣ್ಯ ಹೆಬ್ಬಾಗಿಲು +974 5564 1025
ಮಹೇಶ್ ಗೌಡ  +974 5534 2708

ಭಾರತೀಯ ರಾಯಭಾರಿ ಕಾರ್ಯಾಲಯ, ’ಕೋವಿಡ್ 2019 ಮಹಾಮಾರಿ’ 24X7  ಸಹಾಯವಾಣಿ
ಸ್ಥಿರ ಸಂಖ್ಯೆ: +974 4425 5747
ಸಂಚಾರಿ ದೂರವಾಣಿ ಹಾಗೂ ವಾಟ್ಸಪ್:+974 5566 7569
ಸಂಚಾರಿ ದೂರವಾಣಿ ಹಾಗೂ ವಾಟ್ಸಪ್: +974 5564 7502

Embassy of India Doha 24X7 Helpline for #COVID-19
44255747 (L); (For calls & whatsapp msgs):55667569, 55647502 (M), Email:covid19dohahelpline@gmail.com, Doctors for medical assistance: https://t.co/j0grRfujrf

ICBF Helpline: 50122010, 77384933
Embassy mail id for passport renewal: Cons.doha@mea.gov.in

ಭಾರತೀಯ ರಾಯಭಾರಿ ಕಾರ್ಯಾಲಯ, ವಾಣಿಜ್ಯ ಸಂಬಂಧಿತ ಸೇವೆಗಳು

ನೇಮಕಾತಿಗಾಗಿ ಕೆಳಗಿನ ಸಂಖ್ಯೆಗಳನ್ನು ಮುಂಜಾನೆ 9.30 ಯಿಂದ – 12.30 ಘಂಟೆಯ ತನಕ, ಹಾಗು ಮಧ್ಯಾಹ್ನ2.00 ರಿಂದ -5.00 ಘಂಟೆಯ ತನಕ ರವಿವಾರದಿಂದ ಗುರುವಾರದವರೆಗೆ ಕೆಲಸದ ದಿನಗಳಲ್ಲಿ ಸಂಪರ್ಕಿಸಬಹುದು.

+974 6698 7205
+974 6693 1380
+974 6685 1998

ಪರ್ಯಾಯ ವ್ಯವಸ್ಥೆ: ಅರ್ಜಿದಾರರು ಮೇಲ್ಕಂಡ ಸಂಖ್ಯೆಗಳಿಗೆ ’ವಾಟ್ಸಪ್’ ಮೂಲಕ ಸಂದೇಶವನ್ನು ರವಾನಿಸಬಹುದು. ಸಂದೇಶದಲ್ಲಿ ಅರ್ಜಿದಾರರ ಹೆಸರು, ಬೇಕಾದ ಸೇವೆ, ಪಾಸ್ಪೋರ್ಟ್ ಸಂಖ್ಯೆ, ಅದರ ಸಿಂಧುತ್ವ ಹಾಗು ತುರ್ತು ಪರಿಸ್ಥಿತಿಯ ವಿವರಣೆ.

ಇವರನ್ನು ತುರ್ತು ಪರಿಸ್ಥಿತಿಯಲ್ಲಿ ಸಂಪರ್ಕಿಸಬಹುದು. ಬಹಳ ಅನಿವಾರ್ಯವಿದ್ದಲ್ಲಿ ಮಾತ್ರ ಈ ಸಮಾಜ ಸೇವಕರನ್ನು ಸಂಪರ್ಕಿಸಬೇಕಾಗಿ ವಿನಂತಿ, ಅವಶ್ಯಕತೆಯ ನಿರಾಶ್ರಿತರನ್ನು ಪರಿಗಣಿಸಿ ತಡವಿಲ್ಲದೆ, ನಿಗದಿತ ಸಮಯದಲ್ಲಿ, ಅನುಕೂಲಕ್ಕನುಗುಣವಾಗಿ ಸಹಾಯಮಾಡಲಾಗುತ್ತಿದೆ. ತಮ್ಮ ಸಹಕಾರ ಅತ್ಯಗತ್ಯ.

qatar

qatar

qatar

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English