ಇ-ರೌಂಡ್ಸ್ ಉಪಕ್ರಮಕ್ಕೆ ಕರ್ನಾಟಕ ಸರ್ಕಾರದೊಂದಿಗೆ ಕೈಜೋಡಿಸಿದ ಬೆಂಗಳೂರು ಮಣಿಪಾಲ್ ಆಸ್ಪತ್ರೆ

12:18 PM, Tuesday, May 26th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Manipal Hospitalಗದಗ : ಕೊರೋನಾ ವೈರಸ್ ಸೋಂಕಿನಿಂದ ಗಂಭೀರ ಸ್ಥಿತಿಯಲ್ಲಿರುವ ರಾಜ್ಯದ ೭ ಜಿಲ್ಲೆಗಳಲ್ಲಿನ ರೋಗಿಗಳಿಗೆ ಇ-ರೌಂಡ್ ನಡೆಸುವ ಮೂಲಕ ಬೆಂಬಲ ಒದಗಿಸಲು ಹಾಗೂ ಸೋಂಕು ಪ್ರಕರಣಗಳಲ್ಲಿ ಕರ್ನಾಟಕ ಸರ್ಕಾರಕ್ಕೆ ಬೆಂಬಲ ನೀಡಲು ಬೆಂಗಳೂರು ಮಣಿಪಾಲ್ ಆಸ್ಪತ್ರೆ ಮುಂದಾಗಿದೆ. ಇದಕ್ಕಾಗಿ ಬೆಂಗಳೂರಿನಲ್ಲಿ ವಾರ್ ರೂಮ್(ಯುದ್ಧ ಕೋಣೆ) ಅನ್ನು ಸಜ್ಜುಗೊಳಿಸಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ‍್ಯದರ್ಶಿ, ಆರೋಗ್ಯ ಆಯುಕ್ತರು ಮತ್ತು ಸರ್ಕಾರ ನೇಮಿಸಿದ ವೈದ್ಯರು ಈ ಉಪಕ್ರಮದಲ್ಲಿ ಸೇರಿದ್ದು, ಜಿಲ್ಲೆಗಳಲ್ಲಿ ವಿಶೇಷಜ್ಞರೊಂದಿಗೆ ವರ್ಚುವಲ್ ಆರೋಗ್ಯ ಸುತ್ತುಗಳನ್ನು ನಡೆಸಲು ಅವಕಾಶ ಮಾಡಿಕೊಡಲಿದ್ದಾರೆ. ಈ ತಂಡ ಎಲ್ಲಾ ಆಸ್ಪತ್ರೆಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್‌ಗಳ ಮೂಲಕ ಸಲಹೆಗಳನ್ನು ನೀಡಲು ಅವಕಾಶ ಮಾಡಿಕೊಡುತ್ತದೆ. ಕಳೆದ ಎರಡು ವಾರಗಳಲ್ಲಿ ವೃದ್ಧಾಪ್ಯ ತಜ್ಞರು, ತೀವ್ರನಿಗಾ ತಜ್ಞರು, ಶ್ವಾಸಕೋಶ ರೋಗತಜ್ಞರು, ಅರಿವಳಿಕೆ ತಜ್ಞರು ಮತ್ತು ಮೂತ್ರಪಿಂಡ ತಜ್ಞರನ್ನು ಒಳಗೊಂಡ ವಿಶೇಷಜ್ಞರ ತಂಡ ರಾಜ್ಯದ ಎಲ್ಲೆಡೆ ಇರುವ ಕೋವಿಡ್-೧೯ ಕೇಂದ್ರಗಳಲ್ಲಿನ ಗಂಭೀರ ಕೋವಿಡ್-19 ರೋಗಿಗಳನ್ನು ಗಮನಿಸುತ್ತಿದ್ದಾರೆ.

ಪ್ರತಿ ದಿನ ಬೆಳಿಗ್ಗೆ 11ಗಂಟೆ ಮತ್ತು ಸಂಜೆ 6 ಗಂಟೆಗೆ ವರ್ಚುವಲ್ ವ್ಯವಸ್ಥೆ ಮೂಲಕ ಆನ್‌ಲೈನ್‌ನಲ್ಲಿ ಒಂದಾಗಿ ಸೇರಿ ಎಸ್‌ಎಆರ್‌ಐ(ತೀವ್ರ ರೀತಿಯ ಉಸಿರಾಟದ ಅಸ್ವಸ್ಥತೆ) ಪ್ರಕರಣಗಳನ್ನು ಹಾಗೂ ಐಎಲ್‌ಐ(ಇನ್‌ಫ್ಲೂಯೆನ್ಜಾ ರೀತಿಯ ರೋಗಗಳು) ಪ್ರಕರಣಗಳನ್ನು 7 ಜಿಲ್ಲೆಗಳಿಗೆ ಸಂಬಂಧಿಸಿದಂತೆ ಮೌಲ್ಯೀಕರಣ ನಡೆಸುತ್ತಿದ್ದಾರೆ. ಈ ಜಿಲ್ಲೆಗಳಲ್ಲಿ ಗದಗ, ಬೆಳಗಾವಿ, ಬೀದರ್, ಕಲ್ಬುರ್ಗಿ, ವಿಜಯಪುರ, ಮತ್ತು ದಕ್ಷಿಣ ಕನ್ನಡ ಮತ್ತು ದಾವಣಗೆರೆ ಸೇರಿವೆ. ಗಂಭೀರವಾಗಿ ಅಸ್ವಸ್ಥರಾಗಿರುವ ರೋಗಿಗಳನ್ನು ಗುರುತಿಸುವುದು, ಪ್ರಕರಣದ ದಾಖಲೆಗಳನ್ನು ಗಮನಿಸುವುದು, ಪ್ರಯೋಗಾಲಯ ತನಿಖೆಗಳು, ಎಕ್ಸ್‌ರೇ ವರದಿಗಳನ್ನು ಗಮನಿಸಿ ಆಯಾ ಸ್ಥಳದಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯರೊಂದಿಗೆ ಸಂವಾದ ನಡೆಸಿ, ಸೂಕ್ತ ಚಿಕಿತ್ಸೆಯ ಶಿಷ್ಟಾಚಾರವನ್ನು ರೂಪಿಸುವುದನ್ನು ನಿಗದಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಎಲ್ಲಾ ಪ್ರಕರಣಗಳ ವಿವರಗಳನ್ನು ಗಮನಿಸುವ ವೈದ್ಯರು ವೈಯಕ್ತಿಕ ನಿರ್ವಹಣಾ ಯೋಜನೆಗಳನ್ನು ರೂಪಿಸುತ್ತಾರೆ ಎಂದು ಐಎಎಸ್ ಅಧಿಕಾರಿ ಡಾ. ತ್ರಿಲೋಕ್ ಚಂದ್ರ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಇ-ರೌಂಡ್ಸ್ ಕ್ರಮವನ್ನು ನಿಭಾಯಿಸುತ್ತಿರುವ ಮಣಿಪಾಲ್ ಆಸ್ಪತ್ರೆಯಲ್ಲಿನ ವೈದ್ಯಕೀಯ ಸೇವೆಗಳ ಮುಖ್ಯಸ್ಥರಾದ ಡಾ.ಅನೂಪ್ ಅಮರ್‌ನಾಥ್ iತನಾಡಿ, “ವೈದ್ಯಕೀಯ ಸೇವೆಗೆ ಸಂಪರ್ಕವನ್ನು ಸುಧಾರಿಸಲು ಸಾರ್ವಜನಿಕ-ಖಾಸಗಿ ಪಾಲುದಾರಿಕೆ ಯಾವ ರೀತಿಯಲ್ಲಿ ಕೆಲಸ ಮಾಡಬಹುದು ಎಂಬುದಕ್ಕೆ ಇದು ಅತ್ಯಂತ ಉತ್ತಮ ನಿದರ್ಶನವಾಗಿದೆ ಎಂದು ವಿವರಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English