ಪುತ್ತೂರು : ಗುಂಡ್ಯ, ಸಂಪಾಜೆ ಸೇರಿದಂತೆ ಬೇರೆ ಬೇರೆ ಗಡಿ ಭಾಗದಲ್ಲಿ ಚೆಕ್ ಪೋಸ್ಟ್ನಲ್ಲಿ ಕಾರ್ಯನಿರತರ ಪೊಲೀಸ್ ಸಿಬಂದಿಗಳಿಗೆ ಇಲಾಖೆ ನಿರ್ದೇಶನದಂತೆ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ. ಗಡಿ ಪ್ರದೇಶದಲ್ಲಿ ಚೆಕ್ಪೋಸ್ಟ್ನಲ್ಲಿ ನಿರತರಾಗಿದ್ದ ಠಾಣೆಯ ನಾಲ್ವರು ಮತ್ತು ಜ್ವರ ಸಮಸ್ಯೆಗೆ ಸಂಬಂಧಿಸಿ ಮತ್ತೆ ನಾಲ್ವರು ಸಿಬಂದಿ ಹೋಂ ಕ್ವಾರಂಟೈನ್ನಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಮಹಿಳಾ ಪೊಲೀಸ್ ಠಾಣೆಯಲ್ಲಿ ಇಬ್ಬರು ಮಹಿಳಾ ಪೊಲೀಸರು ಹಾಗೂ ಸಂಚಾರ ಪೊಲೀಸ್ ಠಾಣೆಯಲ್ಲಿ ಚೆಕ್ಪೋಸ್ಟ್ನಲ್ಲಿ ಕರ್ತವ್ಯ ನಿರ್ವಹಿಸಿದ್ದ ಓರ್ವ ಮತ್ತು ಮಡೀಕೇರಿಯ ಸೋಂಕಿತನ ಸಂಪರ್ಕ ಹೊಂದಿದ್ದ ವಿಚಾರಕ್ಕೆ ಓರ್ವನನ್ನು ಸಹಿತ ಪುತ್ತೂರು ಪೊಲೀಸ್ ಠಾಣೆಯಲ್ಲಿ ಒಟ್ಟು 8 ಮಂದಿ ಪೊಲೀಸರು ಹೋಂ ಕ್ವಾರಂಟೈನ್ಗೆ ತೆರಳಿದ್ದಾರೆ.
Click this button or press Ctrl+G to toggle between Kannada and English