ಉಡುಪಿ : ಮಹಾರಾಷ್ಟ್ರದಿಂದ ಹಿಂತಿರುಗಿ ಕ್ವಾರಂಟೈನ್ ನಲ್ಲಿದ್ದ ಮೂರು ಮಂದಿಗೆ ಕೊರೊನಾ ದೃಢಪಟ್ಟಿದ್ದು ಇವರಲ್ಲಿ 9 ವರ್ಷದ ಹೆಣ್ಣು ಮಗು, 30 ವರ್ಷದ ಮಹಿಳೆ ಹಾಗೂ 27 ವರ್ಷದ ಯುವಕ ಒಳಗೊಂಡಿದ್ದರೆ, ಚಿಕಿತ್ಸೆಗಾಗಿ ಇವರನ್ನು ನಿಗದಿತ ಕೊವೀಡ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಮಧ್ಯಾಹ್ನದ ಬುಲೆಟಿನ್ ಪ್ರಕಾರ ಜಿಲ್ಲೆಯಲ್ಲಿ ಈವರೆಗೆ ಒಟ್ಟು 111 ಸೋಂಕು ಪ್ರಕರಣ ಪತ್ತೆಯಾಗಿದೆ. ರಾಜ್ಯ ಆರೋಗ್ಯ ಇಲಾಖೆ ಆಯಾ ದಿನದ ಸೋಂಕು ಪೀಡಿತರ ವಿವರಗಳನ್ನು ದಿನಕ್ಕೆ ಎರಡು ಆವೃತ್ತಿಯಲ್ಲಿ ಬಿಡುಗಡೆ ಮಾಡುತ್ತಿದ್ದು, ಸೋಮವಾರ ಒಟ್ಟಾರೆ 32 ಪ್ರಕರಣಗಳು ದೃಢಪಟ್ಟಿತ್ತು.
Click this button or press Ctrl+G to toggle between Kannada and English