ಗದಗ ಜಿಲ್ಲೆಗೆ ಆಗಮಿಸಿದವರು ತಪ್ಪದೆ ಈ ಮಾಹಿತಿ ಗಮನಿಸಿ

9:52 PM, Tuesday, May 26th, 2020
Share
1 Star2 Stars3 Stars4 Stars5 Stars
(No Ratings Yet)
Loading...

Gadag DCಗದಗ : ಕೊವಿಡ್-19ರ ಸೋಂಕಿನ ನಿಯಂತ್ರಣ ಜಿಲ್ಲೆಯಲ್ಲಿ ಯಶಸ್ವಿಯಾಗಿ ಜಿಲ್ಲಾಡಳಿತಕ್ಕೆ ಸಹಕಾರ ಸಿಗುತ್ತಿದೆ.

ಆದರೆ ರಾಜ್ಯ ಸರಕಾರದ ನಿಯಮದಂತೆ ಹೊರ ರಾಷ್ಟ್ರ, ರಾಜ್ಯಗಳಿಂದ ರೈಲು ಮತ್ತು ರಸ್ತೆ ಮೂಲಕ ಆಗಮಿಸಿರುವ ಕೆಲ ಪ್ರಯಾಣಿಕರು ಕಡ್ಡಾಯವಾದ ಕೆಲವೊಂದು ನಿಯಮಗಳನ್ನು ಪಾಲಿಸುತ್ತಿಲ್ಲದಿರುವುದು ಜಿಲ್ಲೆಯಲ್ಲಿ ಕೊರೋನಾ ಆತಂಕದ ಭಯ ಮೂಡಿಸುತ್ತಿದೆ.

ಈ ಕುರಿತು ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಪ್ರಯಾಣಿಕರಿಗೆ ಕಡ್ಡಾಯವಾಗಿ ಸಾಂಸ್ಥಿಕ ಪ್ರತಿಬಂಧಿತ ವಾಸದ ಷರತ್ತು ಮತ್ತು ನಿರ್ಬಂಧಗಳನ್ವಯ ಅನುಮತಿ ನೀಡಲಾಗಿದೆ ಎಂದಿದ್ದಾರೆ.

ಆದರೆ, ಅನೇಕರು ಅಂತಾರಾಜ್ಯ ಗಡಿಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಗಾಗದೇ ಪರ್ಯಾಯ ಒಳ ಮಾರ್ಗ ಬಳಸಿ ನೇರವಾಗಿ ತಮ್ಮ ಮನೆಗೆ ಆಗಮಿಸಿರುವುದು ಪರಿಶೀಲನೆ ಸಂದರ್ಭದಲ್ಲಿ ಕಂಡುಬಂದಿದೆ.

ರಾಷ್ಟ್ರೀಯ ವಿಕೋಪದ ಈ ಸಂದರ್ಭದಲ್ಲಿ ಹೀಗೆ ಮಾಡಿರುವುದು, ಸ್ಥಳಿಯ ಮತ್ತು ಜಿಲ್ಲಾಡಳಿತಕ್ಕೆ ಮಾಹಿತಿ ನೀಡದೇ ಇರುವುದು ಸದ್ಯದ ಪರಿಸ್ಥಿತಿಯಲ್ಲಿ ಗುರುತರ ಅಪರಾಧವಾಗುತ್ತದೆ. ಇದರಿಂದ ತಮ್ಮ ಕುಟುಂಬದ ಹಾಗೂ ಇಡೀ ಊರಿನ ಜನತೆ ಕೊವಿಡ್-19ರ ಸೋಂಕಿಗೆ ಒಳಗಾಗುವ ಅಪಾಯವಿರುತ್ತದೆ. ಈಗಾಗಲೇ ಜಿಲ್ಲೆಗೆ ಹೊರ ರಾಜ್ಯಗಳಿಂದ ಆಗಮಿಸಿದವರ ಪ್ರಕರಣಗಳು ಹೆಚ್ಚಾಗುತ್ತಿವೆ. ಕೂಡಲೇ ಮಾಹಿತಿ ಒದಗಿಸದೇ ಬಂದ ಪ್ರಯಾಣಿಕರು ಈ ಮುಂದೆ ಸೂಚಿಸಿರುವ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಲು ನಿರ್ದೇಶನ ನೀಡಿದ್ದಾರೆ.

* ಜಿಲ್ಲೆಗೆ ಹೊರ ರಾಜ್ಯಗಳಿಂದ ಮೇ. 7ರಿಂದ ಆಗಮಿಸಿರುವ ಪ್ರಯಾಣಿಕರು ದೂರವಾಣಿ ಸಂಖ್ಯೆ 81052-52726 ಗೆ ಕರೆ ಅಥವಾ ವಾಟ್ಸಪ್ ಮೂಲಕ ತಮ್ಮ ಹೆಸರು, ವಿಳಾಸ, ಸಂಪರ್ಕ ಮೊಬೈಲ್ ಸಂಖ್ಯೆ, ಯಾವ ರಾಜ್ಯದಿಂದ, ಯಾವ ದಿನಾಂಕದಂದು ಜಿಲ್ಲೆಗೆ ಆಗಮಿಸಿದ್ದು, ಯಾವ ವಾಹನ, ವಾಹನ ಚಾಲಕ ಸೇರಿದಂತೆ ಜೊತೆಗೆ ಇದ್ದವರ ವಿವರ ತಕ್ಷಣವೇ ಕಡ್ಡಾಯವಾಗಿ ಒದಗಿಸಬೇಕು.

* ಸೂಚನೆ ನೀಡದೆ ರಸ್ತೆಯ ಮುಖೇನ ಜಿಲ್ಲೆಗೆ ಆಗಮಿಸಿದ ನಂತರ ಜ್ವರ, ಕೆಮ್ಮು, ನೆಗಡಿ, ಉಸಿರಾಟದ ತೊಂದರೆ ಇದ್ದಲ್ಲಿ ಜಿಲ್ಲಾಡಳಿತಕ್ಕೆ ವಿವರ ನೀಡಬೇಕು.

* ವಿವರಗಳನ್ನು ಪರಿಶೀಲಿಸಿ ಜಿಲ್ಲಾಡಳಿತದಿಂದ ಅವರು ಆಗಮಿಸಿದ ದಿನದಿಂದ ನಿಯಮದನ್ವಯ 7 ದಿನದ ಗೃಹ ದಿಗ್ಬಂಧನದ ಕಾಲಾವದಿ ಮುಗಿಯದೇ ಇದ್ದಲ್ಲಿ ಗೃಹ ದಿಗ್ಬಂಧನಕ್ಕೊಳಪಡಿಸಲಾಗುವುದು. ಗೃಹ ದಿಗ್ಬಂಧನವು ಸಾಂಸ್ಥಾನಿಕ ದಿಗ್ಬಂಧನಕ್ಕಿಂತ ಭಿನ್ನವಾಗಿದ್ದು ಸ್ವಂತ ಮನೆಯಲ್ಲಿರುವಂತೆ ವ್ಯವಸ್ಥೆ ಕಲ್ಪಿಸಲಾಗುವುದು.

* ಇಂತಹ ವ್ಯಕ್ತಿಗಳು ಸ್ವತ: 7 ದಿನಗಳ ಮಟ್ಟಿಗೆ ಗೃಹ ದಿಗ್ಬಂಧನದಲ್ಲಿದ್ದು ಷರತ್ತುಗಳನ್ನು ಪಾಲಿಸಬೇಕು.

* ಸೋಂಕು ಹೆಚ್ಚಾಗಿರುವ ಮಹಾರಾಷ್ಟ್ರ, ರಾಜಸ್ಥಾನ, ಮದ್ಯಪ್ರದೇಶ, ದೆಹಲಿ, ತಮಿಳುನಾಡು, ಗುಜರಾತ ರಾಜ್ಯಗಳಿಂದ ಆಗಮಿಸುವಂತಹ ಪ್ರಯಾಣಿಕರನ್ನು ಕಡ್ಡಾಯವಾಗಿ 7 ದಿನದ ಸಾಂಸ್ಥಿಕ ದಿಗ್ಬಂಧನದಲ್ಲಿರಿಸಿ ಅವರ ಗಂಟಲು ದ್ರವದ ಪರೀಕ್ಷಾ ವರದಿ ಋಣಾತ್ಮಕವಾಗಿ ಬಂದ ನಂತರ ಅವರನ್ನು ಸಾಂಸ್ಥಿಕ ದಿಗ್ಬಂಧನದಿಂದ ಬಿಡುಗಡೆ ಮಾಡಲಾಗುವುದು.

• ಸಾರ್ವಜನಿಕರು, ಸ್ಥಳಿಯ ನಿವಾಸಿಗಳು, ಸಂಘಗಳು ತಮ್ಮ ತಮ್ಮ ಪ್ರದೇಶಗಳಲ್ಲಿ ಇಂತಹ ಪ್ರಯಾಣಿಕರ ಕುರಿತ ಮಾಹಿತಿ ಇದ್ದಲ್ಲಿ ತಪ್ಪದೇ ಜಿಲ್ಲಾಡಳಿತ ಸಹಾಯವಾಣಿ 08372-239177 ಮಾಹಿತಿ ನೀಡಲು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ..

ವರದಿ : ಶಂಭು
ಮೆಗಮೀಡಿಯಾ ನ್ಯೂಸ್‌, ಹುಬ್ಬಳ್ಳಿ ಬ್ಯೂರೋ

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English