ನರೇಗಾ ಯೋಜನೆಯಡಿ 9 ಲಕ್ಷ ಜನಕ್ಕೆ ಉದ್ಯೋಗ ಕೊಟ್ಟಿದ್ದೇವಲ್ಲ : ಈಶ್ವರಪ್ಪ

11:06 PM, Tuesday, May 26th, 2020
Share
1 Star2 Stars3 Stars4 Stars5 Stars
(No Ratings Yet)
Loading...

eswarappaಹುಬ್ಬಳ್ಳಿ : ಕೊರೋನಾ ಸಂಕಷ್ಟದಲ್ಲಿ ಸಿಲುಕಿರುವ ರಾಜ್ಯದ ಗ್ರಾಮೀಣ ಭಾಗದ ಜನತೆಗೆ ಇದುವರೆಗೂ ನರೇಗಾ ಯೋಜನೆಯಡಿ 9 ಲಕ್ಷಕ್ಕೂ ಅಧಿಕ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಸಚಿವ ಕೆ.ಎಸ್‌ .ಈಶ್ವರಪ್ಪ ಹೇಳಿದರು.
ಅವರು ಮೇ. 26 ಮಂಗಳವಾರದಂದು ನಗರದಲ್ಲಿ ಜಿಲ್ಲಾ ಪಂಚಾಯಿತಿ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿ, ಲಾಕ್‌ ಡೌನ್‌ ಸಡಿಲಿಕೆಯಿಂದ ಹೊರ ರಾಜ್ಯಗಳಿಂದ ಹೆಚ್ಚಿನ ಜನ ನಮ್ಮ ಕನ್ನಡಿಗರು ಆಗಮಿಸುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ಕೊರೋನಾ ಪೀಡಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ ಎಂದರು.

ಇನ್ನು ಹಲವರು ಬೇರೆ, ರಾಷ್ಟ್ರ, ರಾಜ್ಯಗಳಿಂದ ಆಗಮಿಸುವದಕ್ಕಾಗಿ ಕಾಯುತ್ತಿದ್ದಾರೆ. ಈಗಾಗಲೇ ರಾಜ್ಯ ಸರಕಾರ ರೋಗ ನಿಯಂತ್ರಣಕ್ಕೆ ಅನೇಕ ಮುಂಜಾಗೃತಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ರಾಜ್ಯದಲ್ಲಿರುವ 6021 ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕೆಲಸ ಆರಂಭಿಸಿದೆ.

5 ಎಕರೆಗಿಂತೆ ಕಡಿಮೆ ಉಳುಮೆ ಜಮೀನು ಹೊಂದಿರುವ ಸಣ್ಣ ರೈತ ಬಾಂಧವರಿಗೆ ಸರಕಾರ ನೇರವಾಗಿ ಫಲಾನುಭವಿಗಳಿಗೆ ನಗದು ನೀಡುತ್ತಿದೆ. ಹಿಂದಿನ ಸಮ್ಮಿಶ್ರ ಸರಕಾರದಲ್ಲಿ ಬಹಳಷ್ಟು ಕಾಮಗಾರಿಗಳು ಬಾಕಿ ಇದ್ದವು. ಈಗ ಕಾಮಗಾರಿ ಆರಂಭವಾಗಿರುವುದರಿಂದ ಕೆಲಸ ನಡೆಯುತ್ತಿದೆ. ಹೀಗಾಗಿ ಸರಕಾರದ ಅನುದಾನ ವಾಪಸ್ಸು ಹೋಗುವುದಿಲ್ಲ ಎಲ್ಲವನ್ನೂ ಕಾಮಗಾರಿಗೆ ಬಳಸಲಾಗುತ್ತದೆ ಎಂದರು. ಕೊರೋನಾದ ಈ ಸಂಕಷ್ಟ ಸಮಯದಲ್ಲಿ ಗ್ರಾ.ಪಂ. ಚುನಾವಣೆ ನಡೆಸುವ ಬಗ್ಗೆ ಇದುವರೆಗೂ ಯಾವುದೇ ಚರ್ಚೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್‌ ನವರು ಸುಮ್ಮನೇ ಸರಕಾರದ ಮೇಲೆ ಗೂಬೆ ಕೂರಿಸಿ ಆರೋಪ ಮಾಡುತ್ತಿದ್ದಾರೆ ಎಂದರು. ಸಚಿವ ಸಂಪುಟ ಸಭೆಯಲ್ಲಿಯೇ ಈ ಬಗ್ಗೆ ನಿರ್ಧರಿಸಲಾಗುತ್ತದೆ. ಹಿಂದೆ ಕಾಂಗ್ರೆಸ್‌ ನವರು ಅಧಿಕಾರದಲಿದ್ದಾಗ ಶಿವಮೊಗ್ಗ ನಗರಸಭೆಯಲ್ಲಿ ಅವರು ಮಾಡಿದ್ದೇನು ಎಂದು ಪ್ರಶ್ನಿಸಿದ ಈಶ್ವರಪ್ಪ, ಬಿಜೆಪಿಯಿಂದ ಆಯ್ಕೆಯಾದರೂ ಅದನ್ನು ಕ್ಯಾನ್ಸಲ್‌ ಮಾಡಿ ತಮ್ಮದೇ ಪಕ್ಷದ ಕಾರ್ಯಕರ್ತರನ್ನು ಸದಸ್ಯರನ್ನಾಗಿ ಮಾಡಿದ್ದು ನೆನಪಿಲ್ಲವೇ ಎಂದರು.
ಈಗ ಸರಕಾರಕ್ಕೆ ಇರುವ ಪ್ರಶ್ನೆಗಳೆಂದರೆ, ಈಗಾಗಲೇ ಆಯ್ಕೆಯಾಗಿರುವ ಸದಸ್ಯರನ್ನು ಮುಂದುವರೆಸಬೇಕೋ ಅಥವಾ ನಾಮ ನಿರ್ದೇಶಿತ ಆಡಳಿತ ಮಂಡಳಿ ಕಮೀಟಿ ಮಾಡಬೇಕು ಎಂಬುವುದು. ಈ ಬಗ್ಗೆ ಚುನಾವಣಾ ಆಯೋಗ ಎಲ್ಲ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದೆ. ಚುನಾವಣೆ ಯಾವಾಗ ಆದರೂ ನಮ್ಮ ಪಕ್ಷ ಸಿದ್ಧವಿದೆ ಎಂದರು.

ಇದೇ ಸಂದರ್ಭದಲ್ಲಿ ಇಲಾಖೆಗೆ ಸಂಬಂಧಪಟ್ಟ ಜಿಲ್ಲೆಯ ಅಂತರ್ಜಲ ಚೇತನ ಮತ್ತು ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ಸಭೆಯಲ್ಲಿ ಚರ್ಚಿಸಿದರು. ಜಿ.ಪಂ. ಸಿಇಓ ಸತೀಶ್‌ ಇನ್ನಿತರ ಅಧಿಕಾರಿಗಳು ಭಾಗವಹಿಸಿದ್ದರು.

ವರದಿ : ಶಂಭು
ಮೆಗಮೀಡಿಯಾ ನ್ಯೂಸ್‌, ಹುಬ್ಬಳ್ಳಿ ಬ್ಯೂರೋ

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English