ಗದಗ : ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮೂಲಕ ಟ್ಯಾಕ್ಸಿ ಖರೀದಿಸಲು ನೀಡುವ ಮೂರು ಲಕ್ಷ ಸಬ್ಸಿಡಿ ಹಣ ಮಂಜೂರು ಮಾಡಲು ಲಂಚ ಕೇಳಿದ್ದ ಜಿಲ್ಲಾ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ಅಧಿಕಾರಿ ಮತ್ತು ಆತನಿಗೆ ಸಹಕಾರ ನೀಡಿದ ಕಂಪ್ಯೂಟರ್ ಆಪರೇಟರ್ ನನ್ನು ಲಂಚ ಸ್ವೀಕರಿಸುವಾಗ ಎಸಿಬಿ ಪೊಲೀಸರು ದಾಳಿ ನಡೆಸಿ ಮೇ.26 ಮಂಗಳವಾರ ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
2018-2019 ರ ಸಾಲಿನಲ್ಲಿ ದೂರುದಾರ ವಾಹನ ಚಾಲಕ ಫಾರುಖ್‌ಅಹ್ಮದ್ ಖಾನಸಾಬ ಬಿದರಕುಂದಿ ಎಂಬುವರು ಸಬ್ಸಿಡಿ ಹಣಕ್ಕಾಗಿ ಕೆಎಂಡಿಸಿ (ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ) ಗೆ ಅರ್ಜಿ ಸಲ್ಲಿಸಿದ್ದರು.
ಜಿಲ್ಲಾಧಿಕಾರಿಗಳನ್ನು ದೂರುದಾರರನ್ನು ಫಲಾನುಭವಿಗಳ ಪಟ್ಟಿಗೆ ಆಯ್ಕೆ ಮಾಡಿದ್ದರು. ಈ ಬಗ್ಗೆ ಸಬ್ಸಿಡಿ ಹಣ ಕೇಳಲು ಇವರ ಹಲವಾರು ಬಾರಿ ಕೆಎಂಡಿಸಿ ಕಚೇರಿ ಅಲೆದಾಡಿದ್ದಾರೆ. ಈ ಬಗ್ಗೆ ಕಚೇರಿಯಲ್ಲಿ ವಿಚಾರಿಸಿದಾಗ ನಿಗಮದ ಜಿಲ್ಲಾ ಅಧಿಕಾರಿ ಜಾಕೀರ ಹುಸೇನ್ ಕುಕನೂರ ಇವರು ಅಲ್ಲಿನ ಕಂಪ್ಯೂಟರ್ ಆಪರೇಟರ್ ಅಕ್ಬರ್ ಎಂಬಾತನ ಮೂಲಕ 40 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಅಕ್ಬರ್ ಕೂಡ ಲಂಚ ನೀಡಿದರೆ ಬೇಗ ನಿಮ್ಮ ಸಬ್ಸಿಡಿ ಮಂಜೂರಾಗುತ್ತದೆ ಎಂದು ಹೇಳಿದ್ದಾನೆ.
ಈ ಬಗ್ಗೆ ಎಸಿಬಿಗೆ ದೂರು ನೀಡಿದ್ದ ಫಾರುಖ ಖಾನ್ ಮೆ. 26 ರಂದು ಹಣ ನೀಡಲು ತೆರಳಿದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಆರೋಪಿತರನ್ನು ಬಂಧಿಸಿ ಲಂಚದ ಹಣ 40 ಸಾವಿರ ರೂ. ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ನ್ಯಾಯಾಲಯದಲ್ಲಿ ಹಾಜರು ಪಡಿಸಿದ್ದಾರೆ.
ದಾಳಿಯ ನೇತೃತ್ವವನ್ನು ಗದಗ ಎಸಿಬಿ ಠಾಣೆಯ ಡಿಎಸ್ಪಿ ವಾಸುದೇವ ರಾಮ.ಎನ್. ನೇತೃತ್ವದಲ್ಲಿ ನಡೆಯಿತು.
ಇನ್ಸಸ್ಪೆಕ್ಟರರಾದ ವೈ.ಎಸ್.ಧರಣಾ ನಾಯ್ಕ, ವಿಶ್ವನಾಥ ಹೆಚ್, ಸಿಬ್ಬಂದಿಗಳಾದ ಬಿ.ಬಿ.ಜಕ್ಕಣ್ಣವರ, ಎಮ್.ಎಮ್.ಅಯ್ಯನಗೌಡರ, ಆರ್.ಎಚ್.ಹೆಬಸೂರ, ಎಸ್.ಟಿ.ಅಣ್ಣಿಗೇರಿ, ಎಮ್.ಎನ್.ಕರಿಗಾರ, ಎನ್.ಎಸ್.ತಾಯಣ್ಣವರ, ಈರಣ್ಣ.ಸಿ.ಜಾಲಿಹಾಳ. ವೀರೇಶ ಜೋಳದ. ತಾರಪ್ಪ ದಾಳಿಯಲ್ಲಿ ಭಾಗವಹಿಸಿದ್ದರು.
ವರದಿ : ಶಂಭು
ಮೆಗಾಮೀಡಿಯಾ ನ್ಯೂಸ್, ಹುಬ್ಬಳ್ಳಿ ಬ್ಯೂರೋ
Click this button or press Ctrl+G to toggle between Kannada and English