ಉಡುಪಿ : ಜಿಲ್ಲೆಯಲ್ಲಿ ಮೇ 27 ರ ಮಧ್ಯಾಹ್ನ 12 ರವರೆಗೆ 9 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಅರೋಗ್ಯ ಇಲಾಖೆಯ ಬುಲಿಟಿನ್ ತಿಳಿಸಿದೆ .
ಜಿಲ್ಲೆಯಲ್ಲಿ 9 ವರ್ಷದ ಬಾಲಕ ಸೇರಿ 7 ಪುರುಷರಿಗೆ ಹಾಗೂ 2 ಮಹಿಳೆಯರಿಗೆ ಕೊರೊನಾ ಪಾಸಿಟಿವ್ ಆಗಿದ್ದು ಅವರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಂಗಳವಾರ ಉಡುಪಿ ಜಿಲ್ಲೆಯಲ್ಲಿ ಕೇವಲ ಮೂರು ಪ್ರಕರಣಗಳು ದಾಖಲಾಗಿತ್ತು.
ಈ 9 ಕೊರೊನಾ ಸೋಂಕಿತರು ಕೂಡಾ ಮಹಾರಾಷ್ಟ್ರದಿಂದ ವಾಪಾಸ್ ಬಂದವರಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 120 ಏರಿಕೆಯಾಗಿದೆ.
Click this button or press Ctrl+G to toggle between Kannada and English