ಬಾವಿಗೆ ಬಿದ್ದ ಕರು ಸುರಕ್ಷಿತ, ರಕ್ಷಿಸಲೆತ್ನಿಸಿದ ಸಹೋದರರಿಬ್ಬರು ಮೃತ

4:47 PM, Wednesday, May 27th, 2020
Share
1 Star2 Stars3 Stars4 Stars5 Stars
(No Ratings Yet)
Loading...

paiwalike deathಕಾಸರಗೋಡು : ಇದೊಂದು ದುರಂತ ಘಟನೆ, ತನ್ನ ಮನೆಯ ಬಾವಿಗೆ ಬಿದ್ದ ದನದ ಕರುವನ್ನು ರಕ್ಷಿಸಲೆತ್ನಿಸಿದಾಗ ಸಹೋದರರಿಬ್ಬರು ಮೃತಪಟ್ಟ ದಾರುಣ ಘಟನೆ ಇಂದು ಬೆಳಿಗ್ಗೆ ಪೈವಳಿಕೆ ಸಮೀಪದ ಸುಬ್ಬಯ್ಯಕಟ್ಟೆಯಲ್ಲಿ ನಡೆದಿದೆ.

ಅವರಿಬ್ಬರೂ ಅಣ್ಣ ತಮ್ಮಂದಿರು  ಸುಬ್ಬಯ್ಯ ಕಟ್ಟೆಯ ನಾರಾಯಣ (50) ಮತ್ತು ಸಹೋದರ ಶಂಕರ (40) . ಕರುವನ್ನು ಮೇಲೆಕ್ಕೆತ್ತಲು ಮೊದಲಿಗೆ ಶಂಕರ  ಹಗ್ಗದ ಸಹಾಯದಿಂದ ಬಾವಿಗೆ ಇಳಿದಿದ್ದು, ಬಾವಿಯಲ್ಲಿ ಉಸಿರಾಟ ತೊಂದರೆ ಉಂಟಾಗಿ ಬಾವಿಯೊಳಗೆ ಕುಸಿದು ಬಿದ್ದಿದ್ದಾರೆ , ಇದ್ದನ್ನು ಕಂಡು ಸಹೋದರ ನಾರಾಯಣ ಎಂಬವರು ಕೂಡ ಬಾವಿಗೆ ಇಳಿದಿದ್ದು , ಇಬ್ಬರೂ ಬಾವಿಯಲ್ಲಿ ಕುಸಿದು ಬಿದ್ದರು. ಬೊಬ್ಬೆ ಕೇಳಿ ಧಾವಿಸಿ ಬಂದ ಸ್ಥಳೀಯರು ಇವರನ್ನು ರಕ್ಷಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ .

ಮನೆಯ ಹಿತ್ತಿಲಿನ ಆವರಣ ಇಲ್ಲದ ಬಾವಿಗೆ ಬಿದ್ದಿದ್ದ ಕರುವನ್ನು ಮೇಲಕ್ಕೆತ್ತಲು  ಇವರು ಪ್ರಯತ್ನಿಸಿದ್ದರು.

ಉಪ್ಪಳದಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬಂದಿಗಳು ಇಬ್ಬರನ್ನು ಮೇಲಕ್ಕೆತ್ತಿದರೂ ಆಗಲೇ ಮೃತಪಟ್ಟಿದ್ದರು ಕರುವನ್ನು ಅಗ್ನಿಶಾಮಕ ದಳದ ಸಿಬಂದಿಗಳು ಸುರಕ್ಷಿತವಾಗಿ ಮೇಲಕ್ಕೆತ್ತಿದ್ದಾರೆ. ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದ ಸಹೋದರಿಬ್ಬರ ಮೃತದೇಹವನ್ನು ಮಂಗಲ್ಪಾಡಿ ಯಲ್ಲಿರುವ ತಾಲೂಕು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English