ಮಿಡತೆಗಳ ದಾಳಿಯಿಂದ ಭಾರತದಲ್ಲಿ ಮತ್ತೊಂದು ಆತಂಕ

11:47 AM, Thursday, May 28th, 2020
Share
1 Star2 Stars3 Stars4 Stars5 Stars
(No Ratings Yet)
Loading...

grassoperಜೈಪುರ : ಒಂದೆಡೆ ದೇಶದಲ್ಲಿ ಕರೋನ ತೀವ್ರ ಆತಂಕ ಸೃಷ್ಟಿಸಿದೆ. ಮತ್ತೊಂದೆಡೆ ಗಾಯದ ಮೇಲೆ ಬರೆಯೆಳೆದಂತೆ ಅಂಫಾನ್ ಚಂಡಮಾರುತದ ಭೀಕರಕ್ಕೆ ಒರಿಸ್ಸಾ ಮತ್ತು ಪಶ್ಚಿಮ ಬಂಗಾಳ ತತ್ತರಿಸಿ ಹೋಗಿವೆ. ಇವುಗಳ ಜೊತೆಯಲ್ಲಿ ಮತ್ತೊಂದು ಆಘಾತ ಬಂದೆರಗಿದೆ. ಕೆಲವು ರಾಜ್ಯಗಳಲ್ಲಿ ಮಿಡತೆಗಳ ದಾಳಿ ಮತ್ತೊಂದು ಭೀಕರತೆ ಸೃಷ್ಟಿಸಿದೆ.

ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯಲ್ಲಿ ಮಿಡತೆಗಳ ಗುಂಪೊಂದು ಕಂಡು ಬಂದಿದೆ. ನಂತರ, ಉಜ್ಜಯಿನಿ ಜಿಲ್ಲೆಯ ರಾಣಾ ಹೆಡಾ ಗ್ರಾಮದಲ್ಲಿ ಲಕ್ಷಾಂತರ ಮಿಡತೆಗಳು ಕಂಡು ಬಂದಿವೆ. ನಂತರ ಅವು ರಾಜಸ್ಥಾನದ ಜೈಪುರದ ಮೇಲೆ ದಾಳಿ ಮಾಡಿವೆ. ಇಂದು (ಸೋಮವಾರ) ಬೆಳಿಗ್ಗೆ ಜೈಪುರದ ನಿವಾಸಿಗಳು ಟೆರೇಸ್ ಮೇಲೆ ಮಿಡತೆಗಳ ಹಿಂಡನ್ನು ನೋಡಿ ಗಾಬರಿಗೊಂಡಿದ್ದಾರೆ.

ಎಲ್ಲಿ ನೋಡಿದರೂ ಮಿಡತೆಗಳ ಹಿಂಡು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಮಿಡತೆಗಳಿರುವ ಫೋಟೋಗಳನ್ನು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಈ ವರ್ಷ ಅನೇಕ ವಿಪತ್ತುಗಳು ಸಂಭವಿಸುತ್ತಿರುವುದರಿಂದ, ಅನೇಕರು 2020 ರ ವರ್ಷವನ್ನು ಬೈದುಕೊಳ್ಳುತ್ತಿದ್ದಾರೆ.

“ಮಾನವಕುಲದ ಅಂತ್ಯದ ದಿನಗಳು ಆರಂಭವಾದವಾ ?

ಈ ವರ್ಷ ಮುಗಿಯುವುದರೊಳಗಾಗಿ ಇನ್ನೂ ಏನೇನು ಅನಾಹುತಗಳು ಸಂಭವಿಸುತ್ತವೋ ? ಎಂದು ಕಾಮೆಂಟ್ ಗಳನ್ನು ಹಾಕುತ್ತಿದ್ದಾರೆ.

ಈ ಮಿಡತೆಗಳ ದಂಡು ಕಳೆದ ಏಪ್ರಿಲ್‌ನಲ್ಲಿ ರಾಜಸ್ಥಾನ ಪ್ರದೇಶವನ್ನು ಪ್ರವೇಶಿಸಿ 50,000 ಹೆಕ್ಟೇರ್ ಬೆಳೆಯನ್ನು ನಾಶಪಡಿಸಿವೆ. ಇದರಿಂದ ತೀವ್ರವಾಗಿ ಹಾನಿಗೊಳಗಾದ ರೈತರ ಬಗ್ಗೆ ನೆಟ್ಟಿಗರು ಸಹಾನುಭೂತಿ ವ್ಯಕ್ತಪಡಿಸುತ್ತಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English