ಮಂಗಳೂರು : ದೇಶದಲ್ಲಿ ಹಂತ ಹಂತವಾಗಿ ಲಾಕ್ ಡೌನ್ ತೆರವು ಗೊಳ್ಳುತ್ತಿದ್ದಂತೆ ಕೊರೊನಾ ಸೋಂಕು ಜಿಲ್ಲೆಯಲ್ಲಿ ತೀವ್ರಗತಿಯಲ್ಲಿ ಏರಿದೆ. ಇಂದು ಮತ್ತೆ 6 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಸೋಂಕಿಗೆ ಒಳಗಾದ ಬಹುತೇಕ ಮಂದಿ ಮಹಾರಾಷ್ಟ್ರದ ಮುಂಬಯಿಂದಲೇ ಬಂದವರಾಗಿದ್ದಾರೆ.
ದಕ್ಷಿಣ ಕನ್ನಡದಲ್ಲಿ ಗುರುವಾರ ಒಂದೇ ದಿನ 6 ಮಂದಿಯಲ್ಲಿ ಕೊರೊನಾ ದೃಢಪಟ್ಟಿದ್ದು , 61, 18 ವರ್ಷದ ಮಹಿಳೆ, 62 , 50 , 24, 36 ವರ್ಷದ ಪುರುಷರಲ್ಲಿ ಕೊರೊನಾ ಪತ್ತೆಯಾಗಿದೆ. ಇವರೆಲ್ಲರೂ ಮಹಾರಾಷ್ಟ್ರದ ರಾಜ್ಯದಿಂದ ಹಿಂತಿರುಗಿದವರಾಗಿದ್ದಾರೆ.
Click this button or press Ctrl+G to toggle between Kannada and English