ಕಾಸರಗೋಡು : ಮಹಾರಾಷ್ಟ್ರದಿಂದ ಆಗಮಿಸಿದ 13 ಮಂದಿ ಸಹಿತ ಜಿಲ್ಲೆಯಲ್ಲಿ ಗುರುವಾರ 18 ಮಂದಿಗೆ ಕೊರೋನಾ ವೈರಸ್ ತಗುಲಿರುವುದು ಖಚಿತವಾಗಿದೆ. ಒಬ್ಬ ಮಹಿಳೆ ಮತ್ತು 17 ಮಂದಿ ಪುರುಷರು ರೋಗಬಾಧಿತರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ.
ಮಹಾರಾಷ್ಟ್ರವಲ್ಲದೆ ಕುವೈತ್‌ನಿಂದ ಆಗಮಿಸಿದ ಇಬ್ಬರು, ಖತಾರ್‌ನಿಂದ ಬಂದ ಒಬ್ಬರು, ಷಾರ್ಜಾ ದಿಂದ ಆಗಮಿಸಿದ ಒಬ್ಬರು, ತಮಿಳುನಾಡಿನಿಂದ ಬಂದ ಒಬ್ಬರಲ್ಲಿ ಸೋಂಕು ಖಚಿತವಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕು ಖಚಿತಗೊಂಡವರ ಸಂಖ್ಯೆ 67ಕ್ಕೇರಿದೆ.
ಮೇ 20ರಂದು ತಮಿಳುನಾಡಿನಿಂದ ಆಗಮಿಸಿದ್ದ 23 ವರ್ಷದ ಕೋಟೋಂ-ಬೇಳೂರು ನಿವಾಸಿಗೆ ಸೋಂಕು ಖಚಿತವಾಗಿದೆ. ಮೇ 23ರಂದು ಆಗಮಿಸಿದ ಪೈವಳಿಕೆ ಗ್ರಾಮಪಂಚಾಯತ್ ನಿವಾಸಿ 41 ವರ್ಷದ ನಿವಾಸಿ, ಮೇ 24ರಂದು ಆಗಮಿಸಿದ 51 ವರ್ಷದ ಕಾಸರಗೋಡು ನಗರಸಭೆ ನಿವಾಸಿ, ಮೇ 17ರಂದು ಆಗಮಿಸಿದ 54 ವರ್ಷದ ಕುಂಬಳೆ ಗ್ರಾಮಪಂಚಾಯತ್ ನಿವಾಸಿ, ಮೇ 24ರಂದು ಬಂದಿದ್ದ 39, 48, 42 ವರ್ಷದ ಕಾಸರಗೋಡು ನಗರಸಭೆ ವ್ಯಾಪ್ತಿಯ ನಿವಾಸಿಗಳೂ, ಮೇ 23ರಂದು ಆಗಮಿಸಿದ 38 ವರ್ಷದ ಮಧೂರು ಗ್ರಾಮಪಂಚಾಯತ್ ನಿವಾಸಿ, ಮೇ 22ರಂದು ಆಗಮಿಸಿದ 45 ವರ್ಷದ ಪೈವಳಿಕೆ ನಿವಾಸಿ, ಮೇ 18ರಂದು ಆಗಮಿಸಿದ 40 ವರ್ಷದ ಮಂಗಲ್ಪಾಡಿ ನಿವಾಸಿ, ಮೇ 17ರಂದು ಆಗಮಿಸಿದ 37 ವರ್ಷದ ಪೈವಳಿಕೆ ನಿವಾಸಿ, ಮೇ 18ರಂದು ಆಗಮಿಸಿದ 29 ವರ್ಷದ ಮಂಗಲ್ಪಾಡಿ ಪಂಚಾಯತ್ ನಿವಾಸಿ, ಮೇ 19ರಂದು ಆಗಮಿಸಿದ್ದ 28 ವರ್ಷದ ಮಂಗಲ್ಪಾಡಿ ನಿವಾಸಿ, ಮೇ 17ರಂದು ಆಗಮಿಸಿದ್ದ 40 ವರ್ಷದ ಪೈವಳಿಕೆ ಪಂಚಾಯತ್ ನಿವಾಸಿಗಳಿಗೆ ಸೋಂಕು ಖಚಿತವಾಗಿದೆ.
ಮೇ 20ರಂದು ಕುವೈತ್ ನಿಂದ ಆಗಮಿಸಿದ್ದ 48 ವರ್ಷದ ಮಡಿಕೈ ಗ್ರಾಮಪಂಚಾಯತ್ ನಿವಾಸಿ, ಮೇ 19ರಂದು ಕುವೈತ್‌ನಿಂದ ಆಗಮಿಸಿದ್ದ 31 ವರ್ಷದ ಕುತ್ತಿಕೋಲ್ ಪಂಚಾಯತ್ ನಿವಾಸಿ, ಮೇ 24ರಂದು ಷಾರ್ಜಾದಿಂದ ಆಗಮಿಸಿದ್ದ 59 ವರ್ಷದ ಚೆಂಗಳ ಗ್ರಾಮಪಂಚಾಯತ್ ನಿವಾಸಿ, ಮೇ 19ರಂದು ಖತಾರ್‌ನಿಂದ ಆಗಮಿಸಿದ್ದ 24 ವರ್ಷದ ಕುಂಬಳೆ ಪಂಚಾಯತ್ ನಿವಾಸಿ ಮಹಿಳೆಗೆ ಕೊರೊನಾ ಸೋಂಕು ಖಚಿತಗೊಂಡಿದೆ.
ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 3616 ಮಂದಿ ಕೊರಂಟೈನ್ ಗೆ ಒಳಪಡಿಸಲಾಗಿದೆ. 3065 ಮಂದಿ ಮನೆಗಳಲ್ಲಿ, 551 ಮಂದಿ ಆಸ್ಪತ್ರೆಯ ಕೊರಂಟೈನ್ ಗೆ ಒಳಪಡಿಸಲಾಗಿದೆ . ಗುರುವಾರ ನೂತನವಾಗಿ 39 ಮಂದಿಯನ್ನು ಐಸೊಲೇಷನ್ ವಾರ್ಡಿಗೆ ದಾಖಲಿಸಲಾಗಿದೆ. 407 ಮಂದಿಯ ವರದಿ ಇನ್ನಷ್ಟೇ ಲಭಿಸಬೇಕಿದೆ.
Click this button or press Ctrl+G to toggle between Kannada and English