ನಿಜಗುಣ ಸ್ವಾಮೀಜಿಗಳೇ ಸಾರ್ವಜನಿಕವಾಗಿ ಕ್ಷಮೆ ಕೇಳಿ,ಇಲ್ಲಾಂದ್ರೆ ಗುಂಡು ತಿನ್ನಿ

2:33 PM, Friday, May 29th, 2020
Share
1 Star2 Stars3 Stars4 Stars5 Stars
(No Ratings Yet)
Loading...

nijaguna-swamijiಮುಂಡರಗಿ: ಹೌದು, ಇದು ಮುಂಡರಗಿಯ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿಯವರಿಗೆ ಬಂದಿರುವ ಬೆದರಿಕೆ ಪತ್ರದ ಒಕ್ಕಣೆ.

ಈ ಕುರಿತು ಜಗದ್ಗುರು ತೋಂಟದಾರ್ಯ ಸೇವಾ ಸಮಿತಿ ಸದಸ್ಯರು ಮೇ.29 ರಂದು ನಗರದ ತಹಶೀಲ್ದಾರ್‌ ಗೆ ದೂರಿ ಬೆದರಿಕೆ ಪತ್ರ ಹಾಗೂ ಜೀವ ಬೆದರಿಕೆ ಹಾಕುತ್ತಿರುವವರನ್ನು ಶೀಘ್ರವಾಗಿ ಬಂಧಿಸಬೇಕೆಂದು ಮನವಿ ಸಲ್ಲಿಸಿದರು.

ಸ್ವಾಮೀಜಿ ಬಸವ ತತ್ವವನ್ನು ಎಲ್ಲೆಡೆ ಪ್ರಚಾರ ಮಾಡುತ್ತಿದ್ದಾರೆ. ಇವರ ಈ ಸಮಾಜ ಕಾರ್ಯವನ್ನು ಸಹಿಸದ ಕೆಲ ಸಮಾಜ ವಿರೋಧಿ ಶಕ್ತಿಗಳು ಇವರಿಗೆ ಸಾಕಷ್ಟು ಬೆದರಿಕೆ ಪತ್ರ ಬರೆಯುತ್ತಿದ್ದಾರೆ. ಇಂಥಹವರ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕೆಂದು ಸಮಿತಿಯು ಮನವಿಯಲ್ಲಿ ಒತ್ತಾಯಿಸಿದೆ.

ಬೆದರಿಕೆ ಪತ್ರದಲ್ಲಿ, ಸ್ವಾಮೀಜಿ ಇದುವರೆಗೂ ನೀಡಿರುವ ಹೇಳಿಕೆಗಳಿಗೆ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಮೂವರನ್ನು ಕೊಂದಂತೆ ನಿಮ್ಮನ್ನೂ ಕೊಲ್ಲುವುದಾಗಿ ಜೀವ ಬೆದರಿಕೆ ನೀಡಲಾಗಿದೆ ಎಂದು ಸಮಿತಿಯ ವಿರುಪಾಕ್ಷಗೌಡ ಹರಗಿನ ಡೋಣಿ, ಕೆ.ಎಫ್.‌ ಅಂಗಡಿ,ವಿ.ಎಸ್.ಘಟ್ಟಿ, ಬಸವರಾಜ ದೇಸಾಯಿ, ಗಿರೀಶಗೌಡ ಪಾಟೀಲ, ಅಶೋಕ ಹುಬ್ಬಳ್ಳಿ, ಸುರೇಶ ಬಣಕಾರ, ಪಾಲಾಕ್ಷಿ ಗಣದಿನ್ನಿ, ಎ.ಕೆ.ಮುಲ್ಲಾ, ಈಶ್ವರಪ್ಪ ಬೆಟಗೇರಿ, ಸದಾಶಿವಯ್ಯ ಕಬ್ಬೂರಮಠ ಮನವಿಯಲ್ಲಿ ದೂರಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English