ಚಿಕ್ಕಮಗಳೂರು : ರಿಯಲ್ ಎಸ್ಟೇಟ್ ವ್ಯವಹಾರದ ಮಾತುಕತೆ ಸಮಯದಲ್ಲಿ ಮಾತಿನ ಚಕಮಕಿಯಿಂದ ಇಬ್ಬರ ಮೇಲೆ ಗುಂಡು ಹಾರಿಸಿದ ಘಟನೆ ಮೇ 28 ರಂದು ಕಡೂರು ತಾಲೂಕಿನ ಬಾಣೂರ ಗ್ರಾಮದಲ್ಲಿ ನಡೆದಿದೆ.
ಚಿಕ್ಕಮಗಳೂರಿನ ಬಿಜೆಪಿ ಮುಖಂಡರೊಬ್ಬರ ಸಂಬಂಧಿ ಕಲ್ಯಾಣ ಕುಮಾರ ಹಾಗೂ ಉಪನ್ಯಾಸಕ ಸುಮಂತ ಎಂಬುವವರೇ ಗುಂಡೇಟು ತಿಂದವರು.
ಬೆಂಗಳೂರಿನಿಂದ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಆಗಮಿಸಿದ್ದ ವ್ಯಕ್ತಿಗಳೇ ಗುಂಡೇಟು ಹಾಕಿದ್ದಾರೆ. ಈಗ ಅವರು ಪರಾರಿಯಾಗಿದ್ದಾರೆ. ಈ ಬಗ್ಗೆ ಸಖರಾಯಪಟ್ಟಣ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇಬ್ಬರ ದೇಹದಲ್ಲೂ ಗುಂಡುಗಳು ಇನ್ನೂ ಇದ್ದು, ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳಿಸಲಾಗಿದ್ದು, ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Click this button or press Ctrl+G to toggle between Kannada and English