ಎರಡು ದಿನದ ನವಜಾತ ಶಿಶುವಿನ ಶಸ್ತ್ರಚಿಕಿತ್ಸೆ ಯಶಸ್ವಿ

4:48 PM, Friday, May 29th, 2020
Share
1 Star2 Stars3 Stars4 Stars5 Stars
(No Ratings Yet)
Loading...

infant operationಬೆಂಗಳೂರು: ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಎರಡು ದಿನಗಳ ನವಜಾತ ಶಿಶುವಿಗೆ ನಗರದ ಪ್ರಕ್ರಿಯಾ ಆಸ್ಪತ್ರೆಯ ವೈದ್ಯರ ತಂಡ ನಡೆಸಿದ ನಾಸೊಫೆರಿಂಗೋಲರಿಂಗೊಸ್ಕೋಪಿ (ಎನ್‍ಪಿಎಲ್) ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಧ್ವನಿಪೆಟ್ಟಿಗೆ ಮೇಲಿನ ರಚನೆಯಲ್ಲಿ ಉಂಟಾದ ತೊಂದರೆಯಿಂದ ಶಿಶು ಉಸಿರಾಟ ಸಮಸ್ಯೆ ಎದುರಿಸುತ್ತಿತ್ತು. ಆಸ್ಪತ್ರೆಯ ಇಎನ್‍ಟಿ, ನವಜಾತ ಶಿಶು ತಜ್ಞರು ಮತ್ತು ಅರಿವಳಿಕೆ ವಿಭಾಗಗಳ ನೆರವಿನಿಂದ ಶಸ್ತ್ರಚಿಕಿತ್ಸೆ ಯಶಸ್ಸು ಸಾಧಿಸಿದೆ.

ಲ್ಯಾರಿಂಗೋಮಲೇಸಿಯಾ ಎಂಬುದು ತುಂಬಾ ಸಾಮಾನ್ಯವಾಗಿ ಧ್ವನಿಪೆಟ್ಟಿಗೆಯಲ್ಲಿ ಕಂಡುಬರುವ ಒಂದು ಅಸ್ವಾಭಾವಿಕ ಸಮಸ್ಯೆ. ಈ ಸಮಸ್ಯೆಗೆ ಕಾರಣ ಧ್ವನಿ ತಂತುಗಳ ಮೇಲಿನ ಟಿಶ್ಯೂಸ್ ಹಾನಿಗೊಂಡು ಕೆಳಗೆ ಬಿದ್ದ ಕಾರಣ ಇದು ಉಸಿರಾಟ ಮಾಡಿದಾಗ ಗಾಳಿ ಹರಿದಾಡದಂತೆ ತಡೆಹಿಡಿಯುತ್ತದೆ. ಈ ವೇಳೆ ಶ್ವಾಸಕೋಶಕ್ಕೆ ಗಾಳಿ ಹೋಗುವಾಗ ಟಿಶ್ಯೂಗಳಲ್ಲಿ ಸಿಕ್ಕಿ ಹಾಕಿಕೊಳ್ಳುವುದರಿಂದ ಇದು ಉಸಿರಾಟದ ವೇಳೆಯಲ್ಲಿ ವಿಚಿತ್ರ ಶಬ್ದ ಹೊರಡುವಂತೆ ಮಾಡುತ್ತದೆ. ಸಾಮಾನ್ಯವಾಗಿ ಇಂತಹ ಪ್ರಕರಣಗಳನ್ನ ಕಾಲಾನುಕ್ರಮದಲ್ಲಿ ಗುಣವಾದರೂ ಶೇ.10ರಷ್ಟು ಪ್ರಕರಣಗಳಿಗೆ ಮಾತ್ರ ತಕ್ಷಣವೇ ವೈದ್ಯಕೀಯ ನೆರವು ಅತ್ಯಗತ್ಯವಾಗಿರುತ್ತದೆ.
infant operation
ಉಸಿರಾಟಕ್ಕೆ ಪ್ರಯಾಸ ಪಡುತ್ತಾ ಸಾಕಷ್ಟು ಸದ್ದು ಮಾಡುತ್ತಿದ್ದ ಶಿಶುವೊಂದನ್ನ ( ಹೆಣ್ಣು ಮಗು, 3.6ಕೆಜಿ ತೂಕ) ನವಜಾತ ಶಿಶು ತಜ್ಞ ಡಾ. ಕಿರಣ್ ಅವರ ಬಳಿ ಕರೆದುಕೊಂಡು ಬರಲಾಯ್ತು. ಆಗ ತಕ್ಷಣ ಮಗುವನ್ನ ಕೃತಕ ಉಸಿರಾಟದ ನೆರವು ನೀಡಿ ಎನ್ ಐಸಿಯುಗೆ ದಾಖಲು ಮಾಡಲಾಯ್ತು. ಎರಡನೇ ದಿನ ಇಎನ್ ಟಿ ತಂಡದ ಮುಖ್ಯಸ್ಥ ಡಾ. ಸುಬ್ರಮಣ್ಯ ರಾವ್ ಪರೀಕ್ಷಿಸಿ ಶಿಶು ಗಂಭೀರ ಸ್ವರೂಪದ ಲ್ಯಾರಿಂಗೋಮಲೇಸಿಯಾ ಎಂಬ ಸಮಸ್ಯೆಗೆ ಸಿಲುಕಿರುವುದನ್ನ ಕಂಡುಕೊಂಡು ನಾಸೊಫೆರಿಂಗೊಲೆರಿಂಗೊಸ್ಕೋಪಿ(ಎನ್ ಪಿಎಲ್) ಕೈಗೊಳ್ಳಲಾಯ್ತು.

ಅದೇ ದಿನ ಅರವಳಿಕೆ ತಂಡದ ನೆರವಿನೊಂದಿಗೆ ಲೇಸರ್ ಸಹಾಯದಿಂದ ಶಿಶುವಿಗೆ ಶಸ್ತ್ರಚಿಕಿತ್ಸೆ ನೆರವೇರಿಸಲಾಯಿತು. ಅರಿವಳಿಕೆ ವಿಭಾಗದ ಮುಖ್ಯಸ್ಥರಾದ ಡಾ. ಸೋಮನಾಥ್ ಅವರ ತಂಡದೊಂದಿಗೆ ನವಜಾತ ಶಿಶು ನಿಗಾಘಟಕದಲ್ಲಿ ಡಾ. ಕಿರಣ್ ಮಗುವಿನ ಆರೈಕೆ ಆಗುವಂತೆ ಎಲ್ಲ ಏರ್ಪಾಡುಗಳನ್ನ ಕೈಗೊಂಡರು. ಧ್ವನಿ ತಂತುಗಳ ಮೇಲಿನ ಗಟ್ಟಿಯಾದ ಭಾಗವು ಗಾಳಿ ಸುಳಿದಾಡುವ (ಏರ್ ವೇ)ಜಾಗದಲ್ಲಿ ಕುಸಿಯದಂತೆ ಲೇಸರ್ ನ ನೆರವಿನೊಂದಿಗೆ ಸೂಕ್ಷ್ಮವಾಗಿ ಬೇರ್ಪಡಿಸಿದರು.

ಶಸ್ತ್ರಚಿಕಿತ್ಸೆ ನಂತರ ಯಾವುದೇ ಬಾವು ಕಾಣಿಸಿಕೊಳ್ಳದಂತೆ ನಿಗಾವಹಿಸಲು ಮಗುವನ್ನ ಎರಡು ದಿನ ನವಜಾತಶಿಶು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಮಗು ಜನಿಸದ 4ನೇ ದಿನಕ್ಕೆ ಯಾಂತ್ರೀಕೃತ ವೆಂಟಿಲೇಷನ್ ನಿಂದ ಬಿಡುಗಡೆಗೊಳಿಸಲಾಯಿತು. ಮಗು ಈಗ ತುಂಬಾ ಚೇತರಿಸಿಕೊಂಡಿದ್ದಾಳೆ. ಆಸ್ಪತ್ರೆಯ ನುರಿತ ಇಎನ್ ಟಿ, ನವಜಾತ ಶಿಶು ತಜ್ಞರು ಮತ್ತು ಅರಿವಳಿಕೆ ವೈದ್ಯರ ತಂಡ ಸಮಯೋಚಿತವಾಗಿ ನಿರ್ಧಾರ ತೆಗೆದುಕೊಂಡು ಇದನ್ನ ಸಾಧ್ಯವಾಗಿಸಿದ್ದು ಶ್ಲಾಘನೀಯ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English