ಕಲಬುರ್ಗಿ : ರಾಜ್ಯ ಮತ್ತು ರಾಷ್ಟ್ರಮಟ್ಟದ ಕೆಲ ಸುದ್ದಿ ವಾಹಿನಿಗಳು ತಪ್ಪು ಮಾಹಿತಿಯಿಂದ ಕೂಡಿರುವ ಸುದ್ದಿಗಳನ್ನು ಪ್ರಸಾರ ಮಾಡಿದ್ದಾರೆ ಎಂದು ನಗರದ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ ಎಂದು ಕಲಬುರ್ಗಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಶಂಕರ ವಣಿಕ್ಯಾಳ ಹೇಳಿದ್ದಾರೆ.
ಅವರು ಮೇ. ೨೮ ರಂದು ನಗರದಲ್ಲಿ ನಡೆದ ಕೇಬಲ್ ಟೆಲಿವಿಷನ್ ನೆಟ್ ವರ್ಕ್ (ರೆಗ್ಯುಲೇಷನ್) ಅಧಿನಿಯಮ -1995 ಮತ್ತು ಅದರ ಮೇರೆಗೆ ಮಾಡಲಾದ ನಿಯಮಗಳ ಮೇಲ್ವಿಚಾರಣೆ ಮಾಡಲು ರಚಿಸಿದ್ದ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಸುದ್ದಿ ವಾಹಿನಿಗಳ ಕುರಿತು ನೀಡಿರುವ ದೂರನ್ನು ರಾಜ್ಯಮಟ್ಟದ ಸಮಿತಿಗೆ ಕಳುಹಿಸಲು ಸಮಿತಿಯಲ್ಲಿ ತೀರ್ಮಾನಿಸಲಾಗಿದೆ ಎಂದರು.
ಕೇಬಲ್ ಟಿವಿ ನಿರ್ವಾಹಕರು ರಾಜ್ಯ ಸರಕಾರದ ಅನೇಕ ಯೋಜನೆಯ ಕಾರ್ಯಕ್ರಮಗಳು ಪ್ರಸಾರ ಮಾಡುತ್ತಲಿವೆ ಮತ್ತು ಈ ಕುರಿತು ಅಂದರೆ ಪೊಲಿಯೋ, ಆನೆಕಾಲು ಲಸಿಕೆ ಕುರಿತ ಮುಂತಾದವುಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿವೆ ಎಂದಿದ್ದಾರೆ. ವಾಹಿನಿಗಳು ಸರಕಾರದ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿ ಸರಕಾರದ ಭಾಗವಾಗಿ ಕೆಲಸ ಮಾಡಬೇಕು, ಟಿವಿ ವಾಹಿನಿಗಳ ಕುರಿತು ಗ್ರಾಹಕರು ಮುಕ್ತವಾಗಿ ತಮ್ಮ ದೂರನ್ನು ದಾಖಲಿಸಬೇಕು ಎಂದು ಈ ಸಂದರ್ಭದಲ್ಲಿ ಹೇಳಿದರು.
Click this button or press Ctrl+G to toggle between Kannada and English