ಅಗ್ರಿ ಟೂರಿಸಂ ಪ್ರಾರಂಭಿಸಲು ಯೋಜನೆ

12:27 PM, Saturday, May 30th, 2020
Share
1 Star2 Stars3 Stars4 Stars5 Stars
(No Ratings Yet)
Loading...

ct-raviಬೆಂಗಳೂರು : ಕೋವಿಡ್-19 ಕಾರಣದಿಂದ ಅತ್ಯಂತ ಹೆಚ್ಚು ನಷ್ಟಕ್ಕೆ ಒಳಗಾಗಿರುವ ಪ್ರವಾಸೋದ್ಯಮವನ್ನು ಬಲಪಡಿಸುವ ನಿಟ್ಟಿನಲ್ಲಿ ಕೃಷಿ ಹಾಗೂ ಗ್ರಾಮೀಣ ಸಂಸ್ಕøತಿ ಒಳಗೊಂಡ ಅಗ್ರಿ ಟೂರಿಸಂ ಪ್ರಾರಂಭಿಸಲು ಯೋಜಿಸಲಾಗಿದೆ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕøತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಸಿ.ಟಿ.ರವಿ ಅವರು ತಿಳಿಸಿದರು.

ಅವರು ಇಂದು ನಗರದ ಕುಮಾರಕೃಪ ಅತಿಥಿ ಗೃಹದಲ್ಲಿ ಕೃಷಿ ಸಚಿವರು ಹಾಗೂ ತೋಟಗಾರಿಕೆ ಮತ್ತು ಪೌರಾಡಳಿತ ಇಲಾಖೆಯ ಸಚಿವರುಗಳೊಂದಿಗೆ ಜಂಟಿಯಾಗಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕರ್ನಾಟದಲ್ಲಿ “ಅಗ್ರಿ ಟೂರಿಸಂ” ಅಥವಾ “ಕೃಷಿ ಪ್ರಧಾನ” ಒಂದು ಹೊಸ ಪರಿಕಲ್ಪನೆಯಾಗಿದ್ದು ಈ ಯೋಜನೆ ಕೃಷಿ, ತೋಟಗಾರಿಕೆ, ಸಂಸ್ಕøತಿ ಮತ್ತು ಪ್ರವಾಸೋದ್ಯಮ ಸಮ್ಮಿಲನವಾಗಿದೆ.

ಈ  ಮೂರು ಇಲಾಖೆಗಳ ಸಮನ್ವಯದಲ್ಲಿ ಕರ್ನಾಟಕ ಟೂರಿಸಂ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಕೃಷಿಯ ಕಡೆಗೆ ಜನರಲ್ಲಿ ಅರಿವು ಮತ್ತು ಹೆಮ್ಮೆ ಮೂಡಿಸುವುದು ಮತ್ತು ಕೃಷಿ ಪ್ರವಾಸಗಳ ಮೂಲಕ ರೈತರು ಮತ್ತು ಗ್ರಾಮೀಣ ಸಮುದಾಯಗಳ ಸಾಮಾಜಿಕ- ಆರ್ಥಿಕ ಅಭಿವೃದ್ಧಿಗೆ ಅನುವು ಮಾಡಿಕೊಡುವುದು ಹಾಗೂ ರೈತರ ಆದಾಯವನ್ನು ದ್ವಿಗುಣಗೊಳಿಸಲು ಸಹಕರಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದರು.

ಇದು ನಗರವಾಸಿಗಳಿಗೆ ಕೃಷಿಯ ಬಗ್ಗೆ ತಿಳಿಯಲು ಮತ್ತು ರೈತರಿಗೆ ಉತ್ತಮ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಸಹಾಯಕಾರಿ.  ಈ ಯೋಜನೆಯಿಂದ  ಉದ್ಯೋಗ ಸೃಷ್ಠಿಯಾಗುವುದರ ಜೊತೆಗೆ ಗ್ರಾಮೀಣ ಅಭಿವೃದ್ಧಿಗೂ ಒತ್ತು ನೀಡುತ್ತದೆ.

ಈ ನೂತನ ಪ್ರಯೋಗದಿಂದ ಪಟ್ಟಣವಾಸಿಗರು ತಮ್ಮ ದೈನಂದಿನ ಒತ್ತಡದ ಜೀವನಶೈಲಿಯಿಂದ ಹೊರಬಂದು ನೈಜ ಗ್ರಾಮೀಣ ಬದುಕನ್ನು ಮತ್ತು ಆಹಾರವನ್ನು ಸವಿಯಲು ಹಾಗ ಸ್ವತ: ವಿವಿಧ ಕೃಷಿ ಚಟುವಟಿಕೆಗಳಲ್ಲಿ ತೊಡಗಿ ಅವುಗಳನ್ನು ಪರಿಚಯಿಸಿಕೊಳ್ಳಲು ಅನುಕೂಲವಾಗಲಿದೆ.

ನಗರ ಮತ್ತು ಗ್ರಾಮೀಣ ಸಂಸ್ಕøತಿಗಳ ನಡುವಿನ ಸಂಪರ್ಕಕ್ಕಾಗಿ ಸಾಮಾನ್ಯ ಪ್ರವಾಸದ ಅನುಭವಕ್ಕಿಂತ ಕೃಷಿ ಪ್ರವಾಸಗಳು ನೈಜ ಜೀವನದ ಉತ್ಸಾಹಭರಿತ ಅನುಭವಗಳನ್ನು ನೀಡುತ್ತದೆ.  ಕೃಷಿ ಪ್ರವಾಸಲದಲಿ ವಿವಿಧ ಗ್ರಾಮೀಣ ಕ್ರೀಡೆಗಳಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟು ಪ್ರವಾಸಿಗರಿಗೆ ಪರಿಣಾಮಕಾರಿಯಾದ ಅನುಭವಗಳನ್ನು ನೀಡಿದಂತಾಗುತ್ತದೆ.  ಪ್ರವಾಸಿಗರು ಸ್ವತ: ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸಲು ಅಂದರೆ ನಾಟಿ ಮಾಡುವುದು, ಬೀಜಗಳ ಭಿತ್ತನೆ, ಕಟಾವು ಮಾಡುವುದು ಸಂಸ್ಕರಣೆಯಂತಹ ಅನುಭವ ಪಡೆಯಬಹುದು.

ಗ್ರಾಮೀಣ ಕರಕುಶಲ ವಸ್ತುಗಳು, ಉಡುಗೆಗಳು, ತಾಜಾ ಕೃಷಿ ಉತ್ಪನ್ನಗಳು, ಆಹಾರ ಪದಾರ್ಥಗಳನ್ನು ಕಡಿಮೆ ದರದಲ್ಲಿ ರೈತರ ತೋಟದಲ್ಲಿಯೇ ಪ್ರವಾಸಿಗರು ಖರೀದಿಸುವುದರಿಂದ ಕೃಷಿಕರ ಆದಾಯ ಹೆಚ್ಚುತ್ತದೆ.  ಹೀಗೆ ಅಗ್ರಿ ಟೂರಿಸಂ ಪ್ರವಾಸೋದ್ಯಮವನ್ನು ಉತ್ತೇಜಿಸುವುದರ ಜೊತೆಗೆ ಕೃಷಿಕರ ಆದಾಯವನ್ನು ಸಹ ವೃದ್ಧಿಸುವಲ್ಲಿ ಸಹಕಾರಿಯಾಗುತ್ತದೆ.

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಲೇಗಾಂ ಹಾಗೂ ಪುಣೆ ಜಿಲ್ಲೆಯ ಬಾರಮತಿ ಗ್ರಾಮಗಳಲ್ಲಿ ಕೃಷಿ ಪ್ರವಾಸವನ್ನು ಅನುಷ್ಠಾನಗೊಳಿಸುವಲ್ಲಿ ಸರ್ಕಾರೇತರ ಸಂಸ್ಥೆಗಳು ಯಶಸ್ವಿಯಾಗಿವೆ.

ಕರ್ನಾಟಕದ ಬಹು ಸಂಸ್ಕøತಿಯ ಪ್ರವಾಸಿಗರಿಗೆ ಕಟ್ಟಿಕೊಡಲು ಇದೊಂದು ಮಹತ್ವದ ವೇದಿಕೆಯಾಗಿದೆ.  ಕರ್ನಾಟಕದಲ್ಲಿ ಈಗಾಗಲೇ ವೈನ್ ಟೂರಿಸಂ, ಮ್ಯಾಂಗೋ ಟೂರಿಸಂ, ಆರ್ಗಾನಿಕ್ ಟೂರಿಸಂ ಅಲ್ಲಲ್ಲಿ ಚಾಲ್ತಿಯಲ್ಲಿದ್ದು  ಇದಕ್ಕೆ ಪ್ರವಾಸೋದ್ಯಮದ ಪರಿಕಲ್ಪನೆಯ ಆಯಾಮ ನೀಡಲಾಗುವುದು.  ಕರ್ನಾಟಕದಲ್ಲಿ ಆರಂಭಿಕವಾಗಿ ನಾಲ್ಕು ಸ್ಥಳಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಪ್ರಾರಂಭಿಸಿ ಇವುಗಳ ಯಶಸ್ಸಿನ ಆಧಾರದ  ಮೇಲೆ  ಕನಿಷ್ಠ  200 ಸ್ಥಳಗಳಲ್ಲಿ ವಿಸ್ತರಿಸುವ  ಯೋಜನೆ  ಹೊಂದಿದ್ದು, ಸರ್ಕಾರದ ವಿವಿಧ ಇಲಾಖೆಗಳ ಸಮನ್ವಯದೊಮದಿಗೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಿ ಸಮುದಾಯದ ಸಹಭಾಗಿತ್ವದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಈ ಚರ್ಚೆಯಲ್ಲಿ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಮಾತನಾಡಿ, ಇದೊಂದು ಮಹತ್ವಂಕಾಕ್ಷಿ ಯೋಜನೆಯಾಗಿದ್ದು, ಇಲ್ಲಿಯವರೆಗೆ ಎರಡು ಹಂತದ ಚರ್ಚೆಗಳು ನಡೆದಿದೆ. ವಿದೇಶಗಳಲ್ಲಿ ಬಹುತೇಕ ಮಾನವ ನಿರ್ಮಿತ ಸೌಂದರ್ಯ ಆಕರ್ಷಿಣೀಯ ಪ್ರವಾಸಿತಾಣಗಳನ್ನಾಗಿ ಅಭಿವೃದ್ಧಿ ಪಡಿಸಲಾಗಿದೆ. ಆದರೆ, ನಮ್ಮ ದೇಶದಲ್ಲಿ ನ್ಯಾಚುರಲ್ಲಾಗಿ ಅತ್ಯಂತ ಹೆಚ್ಚಿನ ಆಕರ್ಷಣೀಯ ಸ್ಥಳಗಳಿದ್ದು, ಅಗ್ರಿ ಟೂರಿಸಂ ನಮ್ಮ ಶಕ್ತಿಯಾಗಿದೆ ಎಂದು ಹೇಳಿದರು.

ಪ್ರತಿ ಜಿಲ್ಲೆಗೊಂದು ಸಂಸ್ಕøತಿ ಹೊಂದಿರುವ ನಮ್ಮ ಕರ್ನಾಟಕ ಸಾಂಸ್ಕøತಿಕವಾಗಿ ಅತ್ಯಂತ ಶ್ರೀಮಂತ ರಾಜ್ಯವಾಗಿದೆ. ಪ್ರವಾಸೋದ್ಯಮ ಇಲಾಖೆಯೊಂದಿಗೆ ಕೈಜೋಡಿಸಿ ಕೃಷಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಹೇಳಿದರು.

ತೋಟಗಾರಿಕೆ ಮತ್ತು ಪೌರಾಡಳಿತ ಇಲಾಖೆ ಸಚಿವ ನಾರಾಯಣ ಗೌಡ ಅವರು ಮಾತನಾಡಿ ತೋಟಗಾರಿಕೆ ಮತ್ತು ರೇಷ್ಮೆಯನ್ನು ಕೇಂದ್ರಿಕರಿಸಿ ರೈತರಿಗೆ ಶಕ್ತಿ ತುಂಬುವ ಉದ್ದೇಶ ಹೊಂದಲಾಗಿದೆ. ಕೃಚಿಗೆ ಮುಖ್ಯವಾಗಿ ಮಾರ್ಕೆಟಿಂಗ್ ಮತ್ತು ಪಬ್ಲಿಸಿಟಿ ಅವಶ್ಯಕತೆ ಇದ್ದು ಇದರಿಂದ ಸಹಕಾರಿಯಾಗಲಿದೆ ಎಂದು ಹೇಳಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English