ಮಂಗಳೂರು :ಕೆಲವು ಮಂದಿ ಸೋಮಾರಿ ಪುರುಷರು ಮಂಗಳಮುಖೀಯರ ವೇಷ ಹಾಕಿಕೊಂಡು ಮಂಗಳೂರು ನಗರ, ಪಣಂಬೂರು ಬೀಚ್ ಮತ್ತು ಸುತ್ತಮುತ್ತ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿರುವುದಾಗಿ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಆನಂದ ಎಸ್.ಪಿ. ಅವರು ರವಿವಾರ ಪೊಲೀಸ್ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ನಡೆದ ಪರಿಶಿಷ್ಟ ಜಾತಿ -ಪಂಗಡದ ದೌರ್ಜನ್ಯ ತಡೆ ಬಗೆಗಿನ ಮಾಸಿಕ ಸಭೆಯಲ್ಲಿ ತಿಳಿಸಿದರು.
ಈ ಸಬಂಧ ಸಭೆಯ ಅಧ್ಯಕ್ಷತೆ ವಹಿಸಿದ ಪೊಲೀಸ್ ಆಯುಕ್ತ ಮನೀಶ್ ಕರ್ಬೀಕರ್ ರವರು ನಗರದಲ್ಲಿರುವ ಮಂಗಳಮುಖೀಯರ ಬಗ್ಗೆ ಸಮೀಕ್ಷೆ ನಡೆಸಿ ಅಂಕಿ ಅಂಶ ಸಂಗ್ರಹಿಸುವಂತೆ ಪೊಲೀಸರಿಗೆ ಸೂಚಿಸಿದರು.
ಮಂಗಳಮುಖೀಯರ ವೇಷ ಧರಿಸಿ ಓಡಾಡುತ್ತಿರುವ ಪುರುಷರ ಬಗ್ಗೆ ತಮ್ಮ ಗಮನಕ್ಕೆ ಬಂದಿಲ್ಲ. ಆದರೆ ಅಸಲಿ ಮಂಗಳಮುಖೀಯರನ್ನು ಪಣಂಬೂರು ಬೀಚ್, ಬೈಕಂಪಾಡಿ ಮುಂತಾದ ಕಡೆ ಇರುವುದನ್ನು ಕಂಡಿದ್ದೇವೆ ಎಂದು ಪಣಂಬೂರು ಎಸಿಪಿ ರವಿ ಕುಮಾರ್ ತಿಳಿಸಿದರು.
ಸಭೆಯಲ್ಲಿ ಡಿಸಿಪಿ ಧರ್ಮಯ್ಯ ಹಾಗೂ ಎಸಿಪಿ ಜಿ.ವಿ. ಸುಬ್ರಹ್ಮಣ್ಯ ಮತ್ತಿತರರು ಉಪಸ್ಥಿತರಿದ್ದರು.