ಹುಬ್ಬಳ್ಳಿ : ಕಳೆದ ಎರಡು ವಾರಗಳಿಂದ ಸ್ವಲ್ಪ ಸಡಿಲಗೊಂಡ ಲಾಕ್ ಡೌನ್ ಶನಿವಾರ ಸಂಜೆ 7 ರಿಂದ ಸೋಮವಾರ 7 ರವರೆಗೆ ಕರ್ಫ್ಯೂ ವಿಧಿಸಲಾಗುತ್ತಿತ್ತು.
ಆದರೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಗರಿಕರಿಗೆ ರವಿವಾರದಂದು ಕರ್ಫ್ಯೂ ಸಡಿಲಗೊಳಿಸಿ ಆದೇಶ ಹೊರಡಿಸಿದ್ದಾರೆ. ಇದರಿಂದ ವ್ಯಾಪಾರಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಪ್ರತಿ ರವಿವಾರ ರಾಜ್ಯಾದ್ಯಂತ ಸಂಪೂರ್ಣ ಲಾಕ್‍ಡೌನ್ ಮಾಡಲಾಗಿತ್ತು. ಆದರೆ ರಾಜ್ಯ ಸರ್ಕಾರ ನಾಳೆ ಕರ್ಫ್ಯೂವನ್ನು ಸಡಿಲಗೊಳಿಸಿ ಆದೇಶ ಹೊರಡಿಸಿದೆ.
ಎಂದಿನಂತೆ ಎಲ್ಲಾ ಚಟವಟಿಕೆಗಳು ಇರಲಿದೆ ಎಂದು ಸಿಎಂ ಕಚೇರಿಯಿಂದ ಅಧಿಕೃತವಾಗಿ ಘೋಷಣೆಯಾಗಿದೆ.
ಬಸ್ ಸಂಚಾರ ಇರುತ್ತೆ. ಕೆಎಸ್‌ಆರ್‌ಟಿಸಿ ಮತ್ತು ಆಟೋ, ಟ್ಯಾಕ್ಸಿಗಳು ಎಂದಿನಂತೆ ಬೆಳಗ್ಗೆ 7 ರಿಂದ ಸಂಜೆ 7 ರವರೆಗೂ ಸಂಚಾರ ಮಾಡಲಿದೆ. ಅಂತಾರಾಜ್ಯ ಸಂಚಾರ ಕೂಡ ಇರುತ್ತದೆ.
ಹೋಟೆಲ್, ಸಲೂನ್, ತರಕಾರಿ, ದಿನಸಿ, ಬ್ಯೂಟಿ ಪಾರ್ಲರ್ ಸೇರಿದಂತೆ ಎಲ್ಲಾ ಅಂಗಡಿಗಳು ತೆರೆದಿರುತ್ತದೆ. ಅದೇ ರೀತಿ ಹೋಟೆಲ್‍ನಲ್ಲಿ ಪಾರ್ಸೆಲ್‍ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಮದ್ಯದಂಗಡಿ ಕೂಡ ಓಪನ್ ಆಗುತ್ತದೆ.
ವರದಿ : ಶಂಭು
ಮೆಗಾಮೀಡಿಯಾ ನ್ಯೂಸ್, ಹುಬ್ಬಳ್ಳಿ ಬ್ಯೂರೋ
Click this button or press Ctrl+G to toggle between Kannada and English