ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ 14 ಕರೋನವೈರಸ್ ಪಾಸಿಟಿವ್ ಪ್ರಕರಣ ಪತ್ತೆ

8:15 PM, Saturday, May 30th, 2020
Share
1 Star2 Stars3 Stars4 Stars5 Stars
(No Ratings Yet)
Loading...

dk covid--19ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ  14 ಕರೋನವೈರಸ್  ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

ಒಟ್ಟು 11 ಪುರುಷರು ಮತ್ತು 3 ಮಹಿಳೆಯರ ಪಾಸಿಟಿವ್ ವರದಿ ಬಂದಿದೆ. ಇವುಗಳ ಪೈಕಿ ದಕ್ಷಿಣ ಕನ್ನಡದಲ್ಲಿ 13 ಮಂದಿ ಮಹಾರಾಷ್ಟ್ರದಿಂದ ಆಗಮಿಸಿ ಕ್ವಾರಂಟೈನ್‌ನಲ್ಲಿದ್ದವರಾಗಿದ್ದರೆ, ಒಂದು ಪ್ರಕರಣ ಸೋಮೇಶ್ವರ ಗ್ರಾಮದ ಪಿಲಾರ್ ದಾರಂದ ಬಾಗಿಲುವಿನಲ್ಲಿ ವರದಿಯಾಗಿದೆ. 17 ವರ್ಷದ ಬಾಲಕನಿಗೆ ಪಾಸಿಟಿವ್ ಬಂದಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ದ.ಕ ಒಟ್ಟು 75 ಸಕ್ರಿಯ ಪ್ರಕರಣಗಳಿವೆ

ಇದರೊಂದಿಗೆ ಜಿಲ್ಲೆಯಲ್ಲಿ 119  ಪಾಸಿಟಿವ್ ಪ್ರಕರಣಗಳಿವೆ, ಅದರಲ್ಲಿ 73 ಪ್ರಸ್ತುತ ಸಕ್ರಿಯವಾಗಿವೆ. 39 ಜನರು ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ, ಮತ್ತು ಇದುವರೆಗೆ ಏಳು ಸಾವುಗಳು ಸಂಭವಿಸಿವೆ.

ಉಡುಪಿಯಲ್ಲಿ ಮಹಾರಾಷ್ಟ್ರದಿಂದ ಆಗಮಿಸಿ ಕ್ವಾರಂಟೈನ್‌ನಲ್ಲಿದ್ದ 13 ಮಂದಿಯಲ್ಲಿ ಕೊರೊನಾ ದೃಢವಾಗಿದೆ. ಶನಿವಾರ ಉಡುಪಿ ಜಿಲ್ಲೆಯಲ್ಲಿ 17 ಮಕ್ಕಳು ಸೇರಿದಂತೆ 45 ಮಂದಿ ಗುಣಮುಖರಾಗಿದ್ದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English