ಹುಬ್ಬಳ್ಳಿಗೆ ಪ್ರವೇಶಿಸಿದ ಮುಂಗಾರು, ವರುಣನ ಅಬ್ಬರ

9:27 PM, Saturday, May 30th, 2020
Share
1 Star2 Stars3 Stars4 Stars5 Stars
(No Ratings Yet)
Loading...

hubballi rainಹುಬ್ಬಳ್ಳಿ : ಭಾರತೀಯ ಹವಾಮಾನ ಇಲಾಖೆಯ ಎಚ್ಚರಿಕೆಯಂತೆ ಹುಬ್ಬಳ್ಳಿಯಲ್ಲಿ ಮುಂಗಾರು ಮಳೆ ಮೇ ತಿಂಗಳ ಕೊನೆಯ ದಿನ ಮೇ.30 ರಂದು ಶನಿವಾರ ಹು-ಧಾ ಅವಳಿ ನಗರಕ್ಕೆ ಗುಡುಗು ಸಿಡಿಲಿನ ಸಮೇತ ಕಾಲಿಟ್ಟಿತ್ತು.

ಕೇರಳಕ್ಕೆ ಈಗಾಗಲೇ ಮುಂಗಾರು ಪ್ರವೇಶವಾಗಿದ್ದು, ಕರ್ನಾಟಕದಲ್ಲೂ ಮೂರು ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.

ಕಳೆದ ಕೆಲ ದಿನಗಳಿಂದ ರಾಜಧಾನಿ ಬೆಂಗಳೂರಿನಲ್ಲಿ ಭಾರಿ ಮಳೆಯಾಗಿ ಸಾಕಷ್ಟು ಮರಗಳು, ಕೆಲವರ ಪ್ರಾಣ ಹಾನಿಯೂ ಕೂಡ ಆಗಿತ್ತು. ಅಲ್ಲಿ ಹಗಲಿನಲ್ಲಿಯೇ ಮಳೆಯಾಗಿದ್ದರಿಂದ ಅನಾಹುತಕ್ಕೆ ಕಾರಣವಾಗಿತ್ತು. ಆದರೆ ಹುಬ್ಬಳ್ಳಿಯಲ್ಲಿ ಲಾಕ್‌ ಡೌನ್‌ ಆರಂಭವಾಗುವ ಸಂಜೆಯ 5.30  ರ ಹೊತ್ತಿಗೆ ಮಳೆ ಸುರಿಯಲಾರಂಭಿಸಿದೆ. ರವಿವಾರ ಮೇ 31 ರಂದು ಇಡೀದಿನವಿರುವ ಲಾಕ್‌ ಡೌನ್‌ ನನ್ನು ಸ್ಥಗಿತಗೊಳಿಸಿರುವುದರಿಂದ ನಾಗರಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಏಕೆಂದರೆ ರವಿವಾರಕ್ಕೆ ಬೇಕಾಗುವ ತರಕಾರಿ ಮತ್ತು ಇತರೆ ಸಾಮಾನುಗಳನ್ನು ಶನಿವಾರವೇ ಖರೀದಿ ಮಾಡುತ್ತಿದ್ದ ಜನರು, ಈಗ ರವಿವಾರವೂ ಎಲ್ಲ ಅಂಗಡಿಗಳು ತೆಗೆದುದಿರುವುದರಿಂದ ತೊಂದರೆ ಇಲ್ಲಾ ಬಿಡು ಎಂದು ನಿಶ್ಚಿಂತೆಯಿಂದಿದ್ದಾರೆ. ಕೆಲವೆಡೆ ವಿದ್ಯುತ್‌ ವ್ಯತ್ಯಯವೂ ಉಂಟಾಗಿದ್ದು, ಇದು ಮಾತ್ರ ತಂಪೆರೆದ ಮಳೆರಾಯ ಮನೆಯಲ್ಲಿ ಇಳಿಹೊತ್ತಿನಲ್ಲಿ ಕತ್ತಲು ಮಾಡಿದನಲ್ಲಾ ಎಂದು ಶಪಿಸುವಂತಾಗಿದೆ.

ವರದಿ : ಶಂಭು,
ಮೆಗಾಮೀಡಿಯಾ ನ್ಯೂಸ್‌, ಹುಬ್ಬಳ್ಳಿ ಬ್ಯೂರೋ

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English