ಮುಂಬಯಿ : ಜೂನ್ 15 ರ ತನಕ ಹೊರರಾಜ್ಯದವರನ್ನು ಕರ್ನಾಟಕ ಪ್ರವೇಶಿಸಲು ಕರ್ನಾಟಕ ಸರಕಾರವು ನಿಶೇಧವನ್ನು ಜಾರಿಮಾಡಿದ್ದ ಬಗ್ಗೆ ಇಲ್ಲಿನ ತುಳು ಕನ್ನಡಿಗರು ಅಸಮಧಾನ ವ್ಯಕ್ತಪಡಿಸಿದ್ದು ಮುಂಬಯಿಯ ವಿವಿಧ ಸಮಾಜದ ಪ್ರಮುಖರು ಜಾಗತಿಕ ಬಂಟರ ಸಂಘದ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಮತ್ತು ಉತ್ತರ ಮುಂಬಯಿ ಬಿಜೆಪಿ ಉಪಾಧ್ಯಕ್ಷರಾದ ಎರ್ಮಾಳು ಹರೀಶ್ ಶೆಟ್ಟಿಯವರ ನೇತೃತ್ವದಲ್ಲಿ ಇಂದು ಮುಂಜಾನೆ ಸಂಸದ ಗೋಪಾಲ ಶೆಟ್ಟಿಯವರನ್ನು ಸಂಪರ್ಕಿಸಿ ತುಳು ಕನ್ನಡಿಗರ ಸಮಸ್ಯೆಯನ್ನು ಅವರ ಮೂಲಕ ಕರ್ನಾಟಕದ ಮುಖ್ಯ ಮಂತ್ರಿಯವರ ಗಮನಕ್ಕೆ ಹಾಗೂ ಕೇಂದ್ರ ರೈಲ್ವೆ ಸಚಿವರಾದ ಪಿಯೂಶ್ ಗೋಯಲ್ ಅವರ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳ ಬೇಕಾಗಿ ವಿನಂತಿಸಿದರು.
ಮುಂಬಯಿ ಮಹಾನಗರದಿಂದ ಈಗಾಗಲೇ ಹಲವು ರೈಲುಗಳನ್ನು ಪ್ರಾರಂಭಿಸಿ ಉತ್ತರ ಭಾರತದವರಿಗೆ ತಮ್ಮ ಊರಿಗೆ ಪ್ರಯಾಣಿಸಲು ಅವರವರ ಸರಕಾರವು ಅನುಮತಿ ನೀಡಿದ್ದು ನಮ್ಮ ಸರಕಾರವು ನಮ್ಮನ್ನು ಕಡೆಗಣಿಸುವ ಮೂಲಕ ತಾಯಿ ಮನೆಯಿಂದ ಮಕ್ಕಳನ್ನು ಹೊರದಬ್ಬಿದಂತಾಗಿದೆ. ಇತರ ಎಲ್ಲಾ ರಾಜ್ಯಕ್ಕೆ ಜನರು ಹೋಗುತ್ತಿರುವಾಗ ನಮ್ಮ ರಾಜ್ಯಕ್ಕೆ ನಾವು ಯಾಕೆ ಹೋಗಬಾರದು. ನಾವು ಈ ತನಕ ಶಾಂತ ರೀತಿಯಲ್ಲಿ ಮೌನವಾಗಿದ್ದೆವು. ಮಹಾರಾಷ್ಟ್ರ ಸರಕಾರವು ನಮಗೆ ಪ್ರೋತ್ಸಾಹವನ್ನು ನೀಡುತ್ತಿದೆ. ಕರ್ನಾಟಕ್ಕೆ ಮುಂಬಯಿ ತುಳು ಕನ್ನಡಿಗರ ಕೊಡುಗೆ ಬಹಳಷ್ಟಿದೆ. ಈಗ ಊರಿನವರು ನಮ್ಮವರ ಪರವಾಗಿ ಯಾರೂ ಮಾತನಾಡುದಿಲ್ಲ. ಜನಸಾಮಾನ್ಯರು ಇದರಿಂದ ಬಹಳ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಮಂಗಳೂರಾಗಿ ಕೇರಳಕ್ಕೆ ರೈಲು ಹೋಗುತ್ತಿರುವಾಗ ಮಂಗಳೂರಿಗೆ ರೈಲು ಯಾಕಿಲ್ಲ. ಅದಕ್ಕಾಗಿ ನಾವು ಇಂದು ಎಲ್ಲಾ ಜಾತೀಯ ಸಂಘಟನೆಗಳ ಅಧ್ಯಕ್ಷರು ಇಂದಿಲ್ಲಿ ಸೇರಿ ನಿಮ್ಮಲ್ಲಿ ಮಂಗಳೂರಿಗೆ ರೈಲು ಪ್ರಾರಂಭಿಸಲು ಸಂಮಂಧಪಟ್ಟವರನ್ನು ಒತ್ತಯಿಸಬೇಕಾಗಿ ಮುಂಬಯಿಯ ಸಮಸ್ತ ತುಳು ಕನ್ನಡಿಗರ ಪರವಾಗಿ ಜಾಗತಿಕ ಬಂಟರ ಸಂಘದ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಸಂಸದ ಗೋಪಾಲ ಶೆಟ್ಟಿಯವರಿಗೆ ಮನವಿ ಸಲ್ಲಿಸುತ್ತಾ ವಿನಂತಿಸಿದರು.
ಬಂಟರ ಸಂಘ ಮುಂಬಯಿಯ ಅಧ್ಯಕ್ಷರಾದ ಪದ್ಮನಾಭ ಪಯ್ಯಡೆಯವರು ತುಳು ಕನ್ನಡಿಗರನ್ನು ತಾಯ್ನಾಡಿಗೆ ಪ್ರವೇಶಿಸಲು ಅವಕಾಶ ನೀಡಬೇಕು ಎಂದು ಸಂಸದರನ್ನು ವಿನಂತಿಸುತ್ತಾ ಮನವಿಯನ್ನು ನೀಡುತ್ತಾ ಇಂದು ಕರ್ನಾಟಕದಿಂದ ಕನ್ನಡಿಗರಿಗೆ ಸಮಸ್ಯೆಯಾಗುತ್ತಿದೆ. ರಾತ್ರಿ ಹಗಲು ನಮ್ಮ ತಾಯಿನಾಡಿಗಾಗಿ ದುಡಿದು ಇದೀಗ ನಮ್ಮವರನ್ನು ಕಡೆಗಣಿಸುತ್ತಿರುವ ಸರಕಾರದ ದೋರಣೆಯಿಂದಾಗಿ ಅನೇಕ ಗರ್ಭಿಣಿ ಮಹಿಳೆಯರು ಹಾಗೂ ವೃದ್ದರು ಗಡಿಬಾಗದಲ್ಲಿ ತೊಂದರೆಗೆ ಒಳಗಾಗಿದ್ದಾರೆ್ ಎಂದರು.
ಬಿಲ್ಲವರ ಅಸೋಷಿಯೇಶನ್ ಮುಂಬಯಿಯ ಅಧ್ಯಕ್ಷರಾದ ಚಂದ್ರಶೇಖರ ಪೂಜಾರಿಯವರು ತುಳು ಕನ್ನಡಿಗರ ಸಮಸ್ಯೆಯನ್ನು ಸಂಸದರ ಗಮನಕ್ಕೆ ತರುತ್ತಾ ಮನವಿಯನ್ನು ಸಲ್ಲಿಸಿದರು.
ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿಯವರು ನೀವು ಕೇಂದ್ರ ಸಚಿವರಲ್ಲಿ ಈ ಬಗ್ಗೆ ಚರ್ಚಿಸಿದ್ದಿರಾ ಎಂದು ಸಂಸದರಲ್ಲಿ ಪ್ರಶ್ನಿಸಿದಾಗ ಸಂಸದರು ಇದು ರಾಜ್ಯ ಸರಕಾರಕ್ಕೆ ಸಂಬಂಧಪಟ್ಟ ವಿಷಯವಾಗಿದೆ ಎಂದರು. ಗೋಪಾಲ ಶೆಟ್ಟಿಯವರು ಅ ನಂತರ ಮಾತನಾಡುತ್ತಾ ಮಹಾರಾಷ್ಟ್ರದಲ್ಲಿಯೂ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಪ್ರಯಾಣಿಸುವಾಗ ಇಂತಹ ಸಮಸ್ಯೆ ಉಂಟಾಗುತ್ತಿದೆ ಎಂದರು. ಇದಕ್ಕೆ ನಾವು ಕರ್ನಾಟಕದ ಮುಖ್ಯ ಮಂತ್ರಿಯವರನ್ನು ಸಂಪರ್ಕಿಸಬೇಕಾದಲ್ಲಿ ನಾವು ಅವರನ್ನು ಕೂಡಲೇ ಸಂಪರ್ಕಿಸಿ ಸೂಕ್ತ ಕ್ರಮವನ್ನು ಕೈಗೊಳ್ಳಲು ವಿನಂತಿಸೋಣ ಎಂದರು.
ಸಫಲ್ಯ ಸೇವಾ ಸಂಘ ಮುಂಬಯಿಯ ಅಧ್ಯಕ್ಷರಾದ ಶ್ರೀನಿವಾಸ ಸಫಲಿಗ, ದಿವಾಕರ ಶೆಟ್ಟಿ ಅಡ್ಯಾರ್, ಮೀರಾ ಡಾಹಾಣು ಬಂಟ್ಸನ ಗೌರವ ಅಧ್ಯಕ್ಷರಾದ ಡಾ. ವಿರಾರ್ ಶಂಕರ ಶೆಟ್ಟಿ, ಬಂಟರ ಸಂಘದ ನ್ಯು ಪ್ರೊಜೆಕ್ಟ್ ನ ಕಾರ್ಯಾಧ್ಯಕ್ಷರಾದ ಮುಂಡಪ್ಪ ಪಯ್ಯಡೆ, ಬಂಟರ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ, ಭಾರತ್ ಬ್ಯಾಂಕಿನ ನಿರ್ದೇಶಕ ಗಂಗಾಧರ ಪೂಜಾರಿ, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಇದರ ಅಧ್ಯಕ್ಷ ರಮೇಶ್ ಬಂಗೇರ, ಮೊಗವೀರ ಬ್ಯಾಂಕಿನ ನಿರ್ದೇಶಕ ಸುರೇಶ್ ಕಾಂಚನ್, ಮೊಗವೀರ ವ್ಯವಸ್ಥಾಪಕ ಮಂಡಳಿಯ ಜೊತೆ ಕಾರ್ಯದರ್ಶಿ ಲಕ್ಷಣ್ ಶ್ರೀಯಾನ್ ಬೋಳೂರು, ಕುಲಾಲ ಸಂಘದ ಪರವಾಗಿ ಪತ್ರಕರ್ತ ದಿನೇಶ್ ಕುಲಾಲ್, ತೀಯಾ ಸಮಾಜ ಮುಂಬಯಿ ಯ ಮಾಜಿ ಪ್ರದಾನ ಕಾರ್ಯದರ್ಶಿ ಈಶ್ವರ ಎಂ. ಐಲ್, ಪ್ರಧಾನ ಕಾರ್ಯದರ್ಶಿ ಬಾಬು ಬೆಳ್ಚಡ, ಮೀರಾ ಬಾಯಂಧರ್ ಬಿಜೆಪಿ ಯ ನಾಯಕ ಸಚ್ಚಿದಾನಂದ ಶೆಟ್ಟಿ, ದಿವಾಕರ್ ಶೆಟ್ಟಿ ಅಡ್ಯಾರ್ ಮೊದಲಾದವರು ಉಪಸ್ಥಿತರಿದ್ದು ಕರ್ನಾಟಕ ಸರಕಾರದ ಮಲತಾಯಿ ದೋರಣೆಯಿಂದ ತುಳು ಕನ್ನಡಿಗರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ವಿವರಿಸಿ ಕೂಡಲೇ ಈ ಸಮಸ್ಯೆಯನ್ನು ಬಗೆಯರಿಸಬೇಕಾಗಿ ವಿನಂತಿಸಿದರು.
ವರದಿ : ಈಶ್ವರ ಎಂ ಐಲ್
ಚಿತ್ರ: ದಿನೇಶ್ ಕುಲಾಲ್
Click this button or press Ctrl+G to toggle between Kannada and English