ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ ಮೂವರಿಗೆ ಕೋವಿಡ್ ಸೋಂಕು ದೃಢ

11:02 PM, Saturday, May 30th, 2020
Share
1 Star2 Stars3 Stars4 Stars5 Stars
(No Ratings Yet)
Loading...

kasaragod-covid ಕಾಸರಗೋಡು : ಜಿಲ್ಲೆಯಲ್ಲಿ ಶನಿವಾರ ಲಭ್ಯವಾದ ವರದಿಯಲ್ಲಿ ಮೂವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಆ ಮೂಲಕ ಸದ್ಯ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 73 ಕ್ಕೆ ಏರಿಕೆಯಾಗಿದೆ.

ಮೇ 19ರಂದು ಕುವೈತ್ ನಿಂದ ಆಗಮಿಸಿದ್ದ ಪಿಲಿಕೋಡ್ ನಿವಾಸಿಯಾಗಿರುವ 33 ವರ್ಷದ ವ್ಯಕ್ತಿಗೆ, ಮೇ 17ರಂದು ದುಬಾಯಿಯಿಂದ ಆಗಮಿಸಿದ್ದ ಮಧೂರು ನಿವಾಸಿಯಾಗಿರುವ 68 ವರ್ಷದ ವ್ಯಕ್ತಿ ಹಾಗೂ ಮೇ 21ರಂದು ಮಹಾರಾಷ್ಟ್ರ ದಿಂದ ಬಂದಿದ್ದ 29 ವರ್ಷದ ಚೆಮ್ನಾಡ್ ನಿವಾಸಿಗೆ ರೋಗ ತಗಲಿದೆ.

ಜಿಲ್ಲೆಯಲ್ಲಿ ಒಟ್ಟು 3595 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 2987 ಮಂದಿ, ಆಸ್ಪತ್ರೆಗಳಲ್ಲಿ 608 ಮಂದಿ ನಿಗಾದಲ್ಲಿದ್ದಾರೆ. 413 ಮಂದಿ ಶನಿವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. ಶನಿವಾರ ನೂತನವಾಗಿ 343 ಮಂದಿಯನ್ನು ಐಸೊಲೇಷನ್ ವಾರ್ಡಿಗೆ ದಾಖಲಿಸಲಾಗಿದೆ.

ಜಿಲ್ಲೆಯಲ್ಲಿ 6902 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 6020 ಮಂದಿಯ ತಪಾಸಣೆ ನೆಗೆಟಿವ್ ಆಗಿದೆ. 419 ಮಂದಿಯ ಫಲಿತಾಂಶ ಲಭಿಸಿಲ್ಲ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English