ಜಿರಳೆ ಸಾಯಿಸಲು ಬಳಸುವ ವಿಷಕಾರಿ ಪದಾರ್ಥ ತಿನ್ನಿಸಿ ಕೊಲೆ ಪ್ರಯತ್ನ

9:58 PM, Sunday, May 31st, 2020
Share
1 Star2 Stars3 Stars4 Stars5 Stars
(No Ratings Yet)
Loading...

money ಹುಬ್ಬಳ್ಳಿ: ವರದಕ್ಷಿಣೆ ಪಿಡುಗಿಗೆ ನೂರಾರು ದಾರಿ ಕಂಡುಕೊಳ್ಳುವ ದುರುಳರು ಈಗ ಜಿರಳೆ ಸಾಯಿಸುವ ಲಕ್ಷಣ ರೇಖೆ ಎಂಬ ವಿಷಕಾರಿ ಪದಾರ್ಥವನ್ನು ಮಹಿಳೆಯೋರ್ವರಿಗೆ ತಿನ್ನಿಸಿ ಸಾಯಿಸಲು ಪ್ರಯತ್ನಿಸಿರುವ ಘಟನೆ ನಗರದಲ್ಲಿ ನಡೆದಿದೆ.

ಹುಬ್ಬಳ್ಳಿ ಅಕ್ಷಯ ಪಾರ್ಕ್‌ ಬಳಿಯ ಪ್ರಿಯದರ್ಶಿನಿ ಕಾಲನಿಯ ಚವ್ಹಾಣ ಪ್ಲಾಟ್‌ನ ನೇಹಾ ನಾರಾಯಣ ಶಿರಾಳಕರ (35) ಈ ಕುರಿತು ನಗರದ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ನನ್ನ ಪತಿ ಹಾಗೂ ಆತನ ಕುಟುಂಬದವರು ವರದಕ್ಷಿಣೆ ತರುವಂತೆ ಪದೇ ಪದೇ ಪೀಡಿಸುತ್ತ ಕಿರುಕುಳ ನೀಡುತ್ತಿದ್ದಾರೆ. 10 ವರ್ಷಗಳ ಹಿಂದೆ ನನ್ನ ಮದುವೆಯಾಗಿತ್ತು. ಮೊದ ಮೊದಲು ಚೆನ್ನಾಗಿ ನೋಡಿಕೊಂಡ ಪತಿ ನಂತರ ಮನೆಯವರ ಮಾತು ಕೇಳಿ ಕಿರುಕುಳ ನೀಡಲಾರಂಭಿಸಿದರು ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ.

ಮೇ. 14 ರಂದು ರಾತ್ರಿ ಮನೆಮಂದಿಯೆಲ್ಲ ಸೇರಿಕೊಂಡು ನನ್ನನು ಹೊಡೆದು ಒತ್ತಾಯ ಪೂರ್ವಕವಾಗಿ ನೆಲಕ್ಕೆ ಬೀಳಿಸಿ ಲಕ್ಷಣ ರೇಖೆ ಎಂಬ ಜಿರಳೆ ಕೊಲ್ಲುವ ವಿಷಕಾರಿ ಪದಾರ್ಥವನ್ನು ಬಾಯಿಗೆ ಹಾಕಿ ನನ್ನನ್ನು ಕೊಲ್ಲಲು ಯತ್ನಿಸಿದ್ದಾರೆ ಎಂದಿದ್ದಾರೆ. ನಂತರ ನನ್ನ ಚೀರಾಟ ಕೇಳಿದ ನೆರೆಹೊರೆಯವರು ಧಾವಿಸಿ ಕೂಡಲೇ ನಗರದ ಕಿಮ್ಸ್‌ ಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ ಎಂದು ಮಹಿಳೆ ತಿಳಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವರದಿ : ಶಂಭು
ಮೆಗಾಮೀಡಿಯ ನ್ಯೂಸ್‌ , ಹುಬ್ಬಳ್ಳಿ ಬ್ಯೂರೋ

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English