ಮಂಗಳೂರು : ದ.ಕ. ಜಿಲ್ಲೆಯಲ್ಲಿ ರವಿವಾರದಂದು 14 ಮಂದಿಯಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಜೊತೆಗೆ ಒಂದೇ ದಿನ 12 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಸೋಂಕಿತರ ಪೈಕಿ 9 ಮಂದಿ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಒಬ್ಬರು ದುಬೈನಿಂದ ಬಂದಿದ್ದು, ಮತ್ತೊಬ್ಬರು ಮಲೇಶ್ಯಾದಿಂದ ಮರಳಿದವರಾಗಿದ್ದಾರೆ. ಇನ್ನು ಮೂರು ಮಂದಿ ಮಹಾರಾಷ್ಟ್ರದಿಂದ ಮರಳಿದವರಲ್ಲಿ ಸೋಂಕು ಪತ್ತೆಯಾಗಿದೆ.
3 ಹಾಗೂ 11 ವರ್ಷದ ಬಾಲಕಿಯರು, 71 ಹಾಗೂ 76 ವರ್ಷದ ವ್ಯಕ್ತಿಗಳು ಕೂಡ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇನ್ನುಳಿದಂತೆ 69, 41, 36 ವರ್ಷದ ಮಹಿಳೆರು ಹಾಗೂ 50, 39, 40, 44, 42 ವರ್ಷದ ಗಂಡಸರು ಸೇರಿದಂತೆ ಒಟ್ಟು 12 ಮಂದಿ ಬಿಡುಗಡೆಗೊಂಡಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಈ ದಿನ 120 ಮಂದಿಯ ಪರೀಕ್ಷಾ ವರದಿ ಲಭ್ಯವಾಗಿದ್ದು, ಈ ಪೈಕಿ 14 ಮಂದಿಯಲ್ಲಿ ಸೋಂಕು ದೃಢಪಟ್ಟರೆ, ದೊಡ್ಡ ಸಂಖ್ಯೆಯಲ್ಲಿ 106 ಮಂದಿಯ ವರದಿ ನೆಗೆಟಿವ್ ಬಂದಿದೆ. ಈ ಮೂಲಕ ಜಿಲ್ಲೆಯ ಜನತೆ ಸ್ವಲ್ಪ ಮಟ್ಟಿಗೆ ನಿರಾಳರಗಿದ್ದಾರೆ. ಇನ್ನೂ ಕೂಡ 231 ಮಂದಿಯ ಪರೀಕ್ಷಾ ವರದಿ ನಿರೀಕ್ಷಿಸಲಾಗಿದೆ.
Click this button or press Ctrl+G to toggle between Kannada and English