ಅಕ್ರಮ ಮರಳುಗಾರಿಕೆ; ಒಬ್ಬನ ಮರ್ಡರ್, ಇಬ್ಬರಿಗೆ ಗಂಭೀರವಾಗಿ ಇರಿದ ದುಷ್ಕರ್ಮಿಗಳ ತಂಡ

2:07 PM, Monday, June 1st, 2020
Share
1 Star2 Stars3 Stars4 Stars5 Stars
(No Ratings Yet)
Loading...

Kirthanಮಂಗಳೂರು : ದುಷ್ಕರ್ಮಿಗಳ ತಂಡವೊಂದು ಕ್ಷುಲ್ಲಕ ಕಾರಣಕ್ಕಾಗಿ  ಮೂವರು ಯುವಕರ ಮೇಲೆ ತಲ್ವಾರ್ ದಾಳಿ ನಡೆಸಿದ ಪರಿಣಾಮ ಓರ್ವನ ಹತ್ಯೆ ನಡೆಸಿದ್ದು, ಮತ್ತಿಬ್ಬರು ಯುವಕರು ಗಂಭೀರ ಗಾಯಗೊಂಡ ಘಟನೆ ಬಜಪೆ ಸಮೀಪದ  ಅರಸುಗುಡ್ಡೆಯಲ್ಲಿ ರವಿವಾರ ರಾತ್ರಿ ನಡೆದಿದೆ.

ಈ ಸಂದರ್ಭ ಕರಂಬಾರು ನಿವಾಸಿ ಕೀರ್ತನ್‌ (20) ಕೊಲೆಯಾಗಿದ್ದಾನೆ.

ಮೂಡಬಿದ್ರೆ ತಾಲೂಕಿನ ಕಟೀಲು ಸಮೀಪದ ಎಕ್ಕಾರು ದೇವರಗುಡ್ಡೆಯಲ್ಲಿ ತಲ್ವಾರ್ ದಾಳಿ ನಡೆದಿದ್ದು, ಪರಿಣಾಮ ಕೀರ್ತನ್ ಕೊಲೆಯಾಗಿದ್ದಾನೆ,  ನಿತಿನ್(20), ಮಣೇಶ್(20) ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ

ಕೊಲೆ ನಡೆಸಿದ ತಂಡದವರು ಮತ್ತು ಕೊಲೆಯಾದ ಕೀರ್ತನ್‌ ಹಾಗೂ ಗಾಯಗೊಂಡವರು ಈ ಹಿಂದೆ ಜತೆಯಾಗಿಯೇ ಇದ್ದು ಸ್ನೇಹಿತರಾಗಿದ್ದರು.

ರವಿವಾರ ರಾತ್ರಿ ಕೀರ್ತನ್‌, ನಿತಿನ್‌ ಮತ್ತವರ ಇನ್ನೋರ್ವ ಸಹಚರ ಬಜಪೆ ದೇವರಗುಡ್ಡದಲ್ಲಿ ಒಟ್ಟು ಸೇರಿದ್ದರು. ಈ ಸಂದರ್ಭ ಅವರು ವಿರೋಧಿ ತಂಡವನ್ನು ಅಲ್ಲಿಗೆ ಕರೆಸಿಕೊಂಡಿದ್ದರು ಎನ್ನಲಾಗಿದೆ. ವಿರೋಧಿ ತಂಡ ಅಲ್ಲಿಗೆ ಆಗಮಿಸಿದಾಗ ಮಾತಿಗೆ ಮಾತು ಬೆಳೆದು ಕೀರ್ತನ್‌ ಮತ್ತು ಆತನ ಸಹಚರರ ಮೇಲೆ ಇನ್ನೊಂದು ತಂಡದವರು ಚೂರಿಯಿಂದ ಹಲ್ಲೆ ನಡೆಸಿದರು.

ಅಕ್ರಮ ಮರಳುಗಾರಿಕೆಯ ದ್ವೇಷದ ಹಿನ್ನಲೆಯಲ್ಲಿ ತಂಡದಿಂದ ದಾಳಿ ನಡೆಸಲಾಗಿದೆ ಎನ್ನುವ ಅನುಮಾನ ವ್ಯಕ್ತವಾಗಿದ್ದು, ಬಜಪೆ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿಗಳು ಸ್ಥಳದಿಂದ ಪಾರಾಗಿದ್ದು, ಬಜಪೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

 

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English