ಚಿಕ್ಕಮಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಚಿವ ಸಿ ಟಿ ರವಿ ಅವರು ಭಾರತೀಯ ಜನತಾ ಪಕ್ಷಕ್ಕೆ ಆಹ್ವಾನಿಸಿದ್ದಾರೆ!
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಬಿಜೆಪಿಯನ್ನು ಹೊಗಳಬೇಕಂದರೆ ಅವರು ಬಿಜೆಪಿಗೆ ಬರಬೇಕು. ಕಾಂಗ್ರೆಸ್ ನಲ್ಲಿದ್ದು ಬಿಜೆಪಿ ಹೊಗಳಿದರೆ ಅಧಿಕಾರಕ್ಕೆ ಸಂಚಕಾರ ಬರುತ್ತದೆ. ಆ ಸತ್ಯ ಅವರಿಗೂ ಗೊತ್ತಿದೆ, ಹಾಗಾಗಿ ಬಿಜೆಪಿಯನ್ನು ಹೊಗಳಲ್ಲ. ಅವರು ಬಿಜೆಪಿಗೆ ಬಂದ ದಿನ ಖಂಡಿತ ಹೊಗಳುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ಬಿಜೆಪಿಯನ್ನು ಬಹಳ ಟೀಕೆ ಮಾಡಿದವರು ನಮ್ಮ ದಾರಿ ಹಿಡಿದಿದ್ದಾರೆ. ಎಸ್.ಎಂ. ಕೃಷ್ಣ, ಮಾಧವ ರಾವ್ ಸಿಂಧ್ಯಾ ಅವರ ಮಗ ಬಿಜೆಪಿಗೆ ಬಂದಿದ್ದಾರೆ. ಹಾಗಾಗಿ ಸಿದ್ದರಾಮಯ್ಯನವರು ಬರಲ್ಲ ಅಂತೇನಿಲ್ಲ. ಡಿಕೆ ಶಿವಕುಮಾರ್-ಸಿದ್ದರಾಮಯ್ಯ ಅವರ ಶೀತಲ ಸಮರದಿಂದ ಏನು ಬೇಕಾದರೂ ಆಗಬಹುದು ಎಂದಿದ್ದಾರೆ.
ರಾಜ್ಯದಲ್ಲಿ ಕೆಲವರಷ್ಟೆ ಜನನಾಯಕರು. ಸಿದ್ದರಾಮಯ್ಯ, ದೇವೇಗೌಡ, ಯಡಿಯೂರಪ್ಪ ಜನನಾಯಕರು. ಜನನಾಯಕರು ಎಲ್ಲಿರಬೇಕು ಎಂದರೆ ಬಿಜೆಪಿ ಪಾರ್ಟಿಯಲ್ಲಿರಬೇಕು ಎಂದು ಪರೋಕ್ಷವಾಗಿ ಸಿದ್ದರಾಮಯ್ಯನವರನ್ನು ಸಿ ಟಿ ರವಿ ಬಿಜೆಪಿಗೆ ಆಹ್ವಾನಿಸಿದ್ದಾರೆ.
Click this button or press Ctrl+G to toggle between Kannada and English