ಕಾಸರಗೋಡು ಜಿಲ್ಲೆಯಲ್ಲಿ ಮತ್ತೆ 9 ಮಂದಿಯಲ್ಲಿ ಕೋವಿಡ್ ಸೋಂಕು, 3876 ಮಂದಿಗೆ ಕೊರಂಟೈನ್

10:01 PM, Tuesday, June 2nd, 2020
Share
1 Star2 Stars3 Stars4 Stars5 Stars
(No Ratings Yet)
Loading...

kerala Coronaಕಾಸರಗೋಡು : ಮಂಗಳವಾರ ಕಾಸರಗೋಡು ಜಿಲ್ಲೆಯಲ್ಲಿ ಮತ್ತೆ 9 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ, ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ.

ಈ ಮದ್ಯೆ  ಏಳು ಮಂದಿ ಗುಣಮುಖರಾಗಿ,  3876 ಮಂದಿಯನ್ನು ಕೊರಂಟೈನ್ ಗೆ ಒಳಪಡಿಸಲಾಗಿದೆ, 655 ಮಂದಿ ಐಸೋಲೇಷನ್ ವಾರ್ಡ್ ನಲ್ಲಿದ್ದಾರೆ ಎಂದು ತಿಳಿಸಿದ್ದಾರೆ.

ಮಹಾರಾಷ್ಟ್ರದಿಂದ ಬಂದ ಪುತ್ತಿಗೆ ಗ್ರಾಮಪಂಚಾಯತ್ ನ 62 ಹರೆಯದ, ಪಡನ್ನದ 60 ವರ್ಷದ, ಕುಂಬ್ಡಾಜೆಯ 41 ವರ್ಷದ ನಿವಾಸಿ, ಕುಂಬಳೆಯ 32 ವರ್ಷದ ವ್ಯಕ್ತಿಗಳಲ್ಲಿ ಸೋಂಕು ಪತ್ತೆಯಾಗಿದೆ. ಕುವೈತ್ ನಿಂದ ಆಗಮಿಸಿದ್ದ ಕುಂಬಳೆಯ 43 ವರ್ಷದ ವ್ಯಕ್ತಿ, ಅಜಾನೂರಿನ 47 ವರ್ಷದ ಮತ್ತು ಇವರ 7 ವರ್ಷದ ಪುತ್ರನಿಗೆ ಸೋಂಕು ದೃಢಪಟ್ಟಿದೆ.

ಚೆನೈಯಿಂದ ಆಗಮಿಸಿದ್ದ ಪಳ್ಳಿಕ್ಕರೆ 20 ವರ್ಷದ ಪಳ್ಳಿಕೆರೆಯ ಯುವಕನಿಗೆ ಸೋಂಕು ತಗಲಿದೆ. ಸಂಪರ್ಕದಿಂದ ಕಿನಾನೂರು ಕರಿಂದಲದ 28 ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಏಳು ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಪೈವಳಿಕೆಯ ಮೂವರು, ಕುಂಬಳೆಯ ಮೂವರು ಮತ್ತು ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಓರ್ವ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇವರು ಉಕ್ಕಿನಡ್ಕದಲ್ಲಿರುವ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English