ಬಂಟ್ವಾಳ: ವಿದ್ಯುತ್ ಕಂಬಕ್ಕೆ ಲಾರಿ ಢಿಕ್ಕಿ, ಚಾಲಕ ಪಾರು

2:39 PM, Friday, June 5th, 2020
Share
1 Star2 Stars3 Stars4 Stars5 Stars
(No Ratings Yet)
Loading...

lorryಬಂಟ್ವಾಳ: ಮರದ ದಿಮ್ಮಿಗಳನ್ನು ಹೊತ್ತ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಗಳಿಗೆ ಡಿಕ್ಕಿಯಾಗಿ ಉರುಳಿ ಬಿದ್ದ ಘಟನೆ ಬಂಟ್ವಾಳದ ಮಾರ್ನಬೈಲು ಜಂಕ್ಷನ್ ನಲ್ಲಿ ನಡೆದಿದೆ.

ಘಟನೆಯಲ್ಲಿ ಲಾರಿ ಜಖಂಗೊಂಡಿದ್ದು, ಮೂರಕ್ಕೂ ಅಧಿಕ ವಿದ್ಯುತ್ ಕಂಬಗಳು ರಸ್ತೆಗೆ ಉರುಳಿಬಿದ್ದಿದೆ. ವಿದ್ಯುತ್ ತಂತಿಗಳು ಕಡಿದುಹೋಗಿ ಅಪಾರ ನಷ್ಟ ಸಂಭವಿಸಿದೆ.

ಮೆಲ್ಕಾರ್ ನಿಂದ ಬೃಹತ್ ಗಾತ್ರದ ಮರಗಳನ್ನು ತುಂಬಿಸಿಕೊಂಡು ಹೋಗುತ್ತಿದ್ದ ಲಾರಿ ಬೆಳಿಗ್ಗೆ ಸುಮಾರು 5.30ರ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಗಳಿಗೆ ಡಿಕ್ಕಿಹೊಡೆದಿದೆ ನಂತರ ರಸ್ತೆಯ ಬದುಗೆ ಮಗುಚಿ ಬಿದ್ದಿದೆ. ಲಾರಿ ಮಗುಚಿ ಬಿದ್ದ ವೇಳೆ ಲಾರಿ ಚಾಲಕ ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೆ. ಪಾರಾಗಿದ್ದಾನೆ.

ವಿದ್ಯುತ್ ಕಂಬಗಳು ತುಂಡಾಗಿ ಬಿದ್ದ ಪರಿಣಾಮ ಈ ಭಾಗದ ಜನರಿಗೆ ವಿದ್ಯುತ್ ಕಡಿತಗೊಂಡಿದೆ. ಇನ್ನು ಮೆಸ್ಕಾಂ ಇಲಾಖೆಯವರು ವಿದ್ಯುತ್ ಕಂಬಗಳನ್ನು ಹಾಕಿದ ಬಳಿಕವೇ ಈ ಭಾಗದ ಜನರಿಗೆ ವಿದ್ಯುತ್ ಸಂಪರ್ಕ ಸಿಗಲಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English