ಮಂಗಳೂರು: ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಮೂಲ್ಕಿ ಹೆಚ್ ಡಿ ಎಫ್ ಸಿ ಬ್ಯಾಂಕ್ ಮುಂಭಾಗ ಯುವಕನೋರ್ವನನ್ನು ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಕಡಿದು ಬರ್ಬರವಾಗಿ ಹತ್ಯೆಗೈದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಜೊತೆಯಲ್ಲಿದ್ದ ಜೊತೆಯಲ್ಲಿದ್ದ ಅವರ ಮಾವ ಮತ್ತು ಅಳಿಯ ಗಂಭೀರ ಗಾಯಗೊಂಡಿದ್ದು ಅವರನ್ನು ಎಜೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರ್ನಾಡ್ ದರ್ಗಾ ರೋಡ್ ನಿವಾಸಿ ಮುನೀರ್ ಮತ್ತವನ ಅಳಿಯನ ಮೇಲೆ ಬ್ಯಾಂಕ್ ಮುಂಭಾಗ ಅಬ್ದುಲ್ ಲತೀಫ್ ಅವರ ಮಾವ ಮುನೀರ್ ಮತ್ತು ಅಳಿಯ ಹಯಾತ್ ಜೊತೆ ಕಾರಿನಲ್ಲಿ ಮೂಡಬಿದ್ರೆಗೆ ಹೋಗುತ್ತಿದ್ದಾಗ ಕಾರು ಮತ್ತು ಬೈಕುಗಳಲ್ಲಿ ಬಂದ ಎಂಟು ಜನರ ತಂಡ ಕಾರಿಗೆ ಅಡ್ಡ ಕಟ್ಟಿ ಮಾವ ಮುನೀರ್ ಜೊತೆ ತಕರಾರು ನಡೆಸಿದೆ. ಇದನ್ನು ವಿಚಾರಿಸಿದ ಅಬ್ದುಲ್ ಲತೀಫ್ ಮೇಲೆ ದಾಳಿ ನಡೆದಿದೆ.
ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಮುನೀರ್ ನ ಅಳಿಯ ಮೂಡಬಿದ್ರೆ ಆನ್ ಲೈನ್ ಗೋಲ್ಡ್ ಮಾಲಕ ಲತೀಫ್ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಮುನೀರ್ ಹಾಗೂ ಆತನ ಪುತ್ರ ಹಯಾತ್ ಗಂಭೀರ ಗಾಯಗೊಂಡಿದ್ದಾರೆ.
ಅಬ್ದುಲ್ ಲತೀಫ್ ಪತ್ನಿ ಮೂಡಬಿದ್ರೆ ನ್ಯಾಯಾಲಯದಲ್ಲಿ ವಕೀಲರಾಗಿದ್ದಾರೆ.
ಮುನೀರ್ ಕೆಲವು ತಿಂಗಳ ಹಿಂದೆ ಮೂಲ್ಕಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಹತ್ತಾರು ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ. ಐಷಾರಾಮಿ ಕಾರುಗಳ ಸಮೇತ ಆತನನ್ನು ಬಂಧಿಸಲಾಗಿತ್ತು. ಹಣಕಾಸಿನ ವಿಚಾರದಲ್ಲಿ ಎರಡು ಗುಂಪುಗಳ ಮಧ್ಯೆ ವೈಮನಸ್ಸಿನಿಂದ ಕೃತ್ಯ ನಡೆದಿರಬೇಕೆಂದು ಶಂಕಿಸಲಾಗಿದೆ.
ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Click this button or press Ctrl+G to toggle between Kannada and English