ಮಂಗಳೂರು : ಮಂಗಳೂರಿನಿಂದ ಮೂಡಬಿದ್ರೆ ಮೂಲಕ ಕಾರ್ಕಳಕ್ಕೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ಗುರುಪುರ ನದಿಗೆ ಸುಮಾರು 39.4 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಸೇತುವೆ ಕಾಮಗಾರಿ ಪೂರ್ಣಗೊಂಡಿದೆ.
ಎರಡೂ ಕಡೆ ಸೇತುವೆಯ ಅಗಲ 16 ಮೀ. ಸೇತುವೆ ರಸ್ತೆ ಅಗಲ 11 ಮೀ., ಕಾಲುದಾರಿ ಅಗಲ 2.50 ಮೀ., ಫೈಲ್ ಫೌಂಡೇಶನ್, ಮೇಲ್ಕಟ್ಟಡಕ್ಕೆ ಪಿಎಸ್‌ಸಿ ಗರ್ಡರ್ ಬೀಮ್ ಮತ್ತು ಸ್ಪ್ಯಾಬ್, ಎರಡೂ ಕಡೆ ತಲಾ 500 ಮೀ. ಉದ್ದದ ಸಂಪರ್ಕ ರಸ್ತೆ ಕಾಮಗಾರಿ ಅಂತಿಮ ಹಂತದಲ್ಲಿದೆ.
ಹೊಸ ಸೇತುವೆಯನ್ನು ಹಳೆಯ ಸೇತುವೆಯ ಪಕ್ಕದಲ್ಲಿ ನಿರ್ಮಿಸಲಾಗಿದೆ, 1920 ರ ದಶಕದ ಆರಂಭದಲ್ಲಿ ನಿರ್ಮಿಸಿದ ಹಳೆಯ ಸೇತುವೆ ವಾಹನ ಸಂಚಾರಕ್ಕೆ ಅಸುರಕ್ಷಿತ ವಾಗಿತ್ತು.
ಫೆಬ್ರವರಿ 2020 ರ ವೇಳೆಗೆ ಪೂರ್ಣಗೊಳ್ಳಬೇಕಾಗಿದ್ದ ಹೊಸ ಸೇತುವೆ ತಾಂತ್ರಿಕ ಸಮಸ್ಯೆಗಳು ಮತ್ತು ನಿರ್ಮಾಣಕ್ಕಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ವಿಳಂಬದಿಂದಾಗಿ ನಾಲ್ಕು ತಿಂಗಳು ಮುಗ್ಗರಿಸಿತ್ತು.
ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಶಾಸಕ ಡಾ.ವೈ ಭರತ್ ಶೆಟ್ಟಿ ನೂತನ ಸೇತುವೆಯ ಅಂತಿಮ ಹಂತದ ಕಾಮಗಾರಿಗಳನ್ನು ಭೇಟಿ ನೀಡಿ ವೀಕ್ಷಿಸಿದರು.
Click this button or press Ctrl+G to toggle between Kannada and English