ಮಂಗಳೂರು : ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ವಿಜಯ ಸನ್ನಿಧಿ ಬಳಿಯ ವಿಜಯ ಬ್ಯಾಂಕ್ ಎದುರುಗಡೆ ಎರಡು ತಂಡಗಳ ನಡುವೆ ನಡೆದ ಹೊಡೆದಾಟದಲ್ಲಿ ಜ್ಯುವೆಲ್ಲರಿ ಉದ್ಯಮಿ ಮೃತಪಟ್ಟು ಮೂವರು ಗಂಭೀರ ಗಾಯಗೊಂಡ ಘಟನೆಗೆ ಸಂಬಂಧಿಸಿದಂತೆ ಮುಲ್ಕಿ ಠಾಣಾ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ ವಸ್ತು ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಕಾರ್ನಾಡ್ ದರ್ಗಾ ರಸ್ತೆಯ ಹಂಝ ಎಂಬವರ ಪುತ್ರ ಮುಹಮ್ಮದ್ ಹಾಶಿಮ್(27), ನಿಸಾರ್ ಯಾನೆ ರಿಯಾಜ್(33), ಉಚ್ಚಿಲ ಬಡಾ ನಿವಾಸಿ ಇಸ್ಮಾಯಿಲ್ ಎಂಬವರ ಪುತ್ರ ಅಬೂಬಕರ್ ಸಿದ್ದಿಕ್(27), ಕಾರ್ನಾಡ್ ದರ್ಗಾ ರಸ್ತೆಯ ಎಂ.ಕೆ. ಮುಹಮ್ಮದ್ ಎಂಬವರ ಪುತ್ರ ಮುಹಮ್ಮದ್ ರಾಝೀಮ್(24) ಎಂದು ಹೆಸರಿಸಲಾಗಿದೆ.
ನಿನ್ನೆ ಸಂಜೆ ಕಾರ್ನಾಡ್ ದರ್ಗಾ ರೋಡ್ ನಿವಾಸಿ ಕಾಂಗ್ರೆಸ್ ಮುಖಂಡ ಮುನೀರ್ ಅವರು ಪುತ್ರ ಇಯಾಝ್ ಮತ್ತು ಅಳಿಯ ಲತೀಫ್, ಸಂಬಂಧಿ ಇಮ್ರಾನ್ ಜೊತೆ ಬ್ಯಾಂಕ್ ತೆರಳಿ ವಾಪಾಸ್ ಆಗುತ್ತಿದ್ದಾಗ ಅಲ್ಲೇ ಮುಂಭಾಗ ಕಾರ್ ನಲ್ಲಿದ್ದಾಗ ಸ್ಥಳಕ್ಕೆ ಬಂದ ಯುವ ಕಾಂಗ್ರೆಸ್ ಮೂಲ್ಕಿ ವಲಯಾಧ್ಯಕ್ಷ ಹಕೀಮ್ ಮತ್ತು ಆತನ ಸಹಚರರಾದ ವಫಾ, ಅಸಿಮ್, ಸಿದ್ದಿಕ್, ನಿಸಾರ್, ಸಕ್ಕರೆ ಬಾವಾ, ಫರಾನ್, ರಾಝೀಮ್ ಮತ್ತು ಸಿದ್ದಿಕ್ ಏಕಾಏಕಿ ಕಾರ್ ತಡೆದು ಸೋಡಾ ಬಾಟಲಿ ಮತ್ತು ಚಾಕುವಿನಿಂದ ಹಲ್ಲೆ ನಡೆಸಿದ ಪರಿಣಾಮ ಅಬ್ದುಲ್ ಲತೀಫ್ ಸಾವನ್ನಪ್ಪಿದ್ದು ಇಯಾಜ್ ಮತ್ತು ಮುನೀರ್ ಗಂಭೀರ ಗಾಯಗೊಂಡಿದ್ದರು.
ಯುವ ಕಾಂಗ್ರೆಸ್ ಮುಖಂಡ ಹಕೀಮ್ ಮತ್ತು ಮುನೀರ್ ಮಧ್ಯೆ ಹಳೆಯ ವೈಷಮ್ಯವಿದ್ದು ಈ ಕಾರಣದಿಂದ ದಾಳಿ ನಡೆಸಿರುವುದು ದೃಢಪಟ್ಟಿದೆ. ದುಷ್ಕರ್ಮಿಗಳು ಮುನೀರ್ ನನ್ನು ಟಾರ್ಗೆಟ್ ಮಾಡಿಕೊಂಡಿದ್ದು ಅಡ್ಡ ಬಂದ ಆತನ ಅಳಿಯ ಅಬ್ದುಲ್ ಲತೀಫ್ ದಾರುಣ ಸಾವನ್ನಪ್ಪಿದ್ದಾರೆ.
ಅಬ್ದುಲ್ ಲತೀಫ್ ಪುತ್ತೂರು ತಾಲೂಕು ಮುರುಳ್ಯ ನಿವಾಸಿ, ಸದ್ಯ ಮೂಡುಬಿದಿರೆಯಲ್ಲಿ ಆನ್ ಲೈನ್ ಗೋಲ್ಡ್ ಎಂಬ ಹೆಸರಿನ ಚಿನ್ನದ ಅಂಗಡಿ ನಡೆಸುತ್ತಿದ್ದರು, ಮೂಡುಬಿದಿರೆಯಲ್ಲೇ ವಾಸ್ತವ್ಯವಿದ್ದರು.
ಘಟನೆಗೆ ಸಂಬಂಧಿಸಿದಂತೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಕೊಲೆ, ಕೊಲೆ ಯತ್ನ ಪ್ರಕರಣದ ದಾಖಲಾಗಿತ್ತು. ಮುಲ್ಕಿ ಪೊಲೀಸ್ ಠಾಣಾ ಪೊಲೀಸರು ಮತ್ತು ಮಂಗಳೂರು ಉತ್ತರ ಉಪ ವಿಭಾಗದ ರೌಡಿ ನಿಗ್ರಹ ದಳದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
Click this button or press Ctrl+G to toggle between Kannada and English
June 6th, 2020 at 21:23:20
Monde hege agodu anyaya adrham madva Jana