ಮಂಗಳೂರು, : ದ.ಕ ಜಿಲ್ಲೆಯಲ್ಲಿ ಜೂನ್ 6ರಂದು ಶನಿವಾರ 24 ಕೊರೊನಾ ಪ್ರಕರಣ ಪತ್ತೆಯಾಗಿದ್ದರೆ, ಉಡುಪಿಯಲ್ಲಿ 121 ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ.
ದಕ್ಷಿಣ ಕನ್ನಡದಲ್ಲಿ ಶನಿವಾರ ಹದಿನೈದು ಜನರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಲ್ಲಿ 65 ಸಕ್ರಿಯ ಪ್ರಕರಣಗಳಿದ್ದು, 103 ಜನರು ಚೇತರಿಸಿಕೊಂಡಿದ್ದಾರೆ ಮತ್ತು ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ ಏಳು ಸಾವುಗಳು ದಾಖಲಾಗಿವೆ.
ಉಡುಪಿ ಜಿಲ್ಲೆಯಲ್ಲಿ ಪತ್ತೆಯಾದ 121 ಪಾಸಿಟಿವ್ ಪ್ರಕರಣಗಳಲ್ಲಿ ಎಲ್ಲರೂ ಮಹಾರಾಷ್ಟ್ರದಿಂದ ಆಗಮಿಸಿದವರಾಗಿದ್ದಾರೆ. 16 ಮಕ್ಕಳು ಸೇರಿದಂತೆ ಎಪ್ಪತ್ತೆಂಟು ಪುರುಷರು ಮತ್ತು 43 ಮಹಿಳೆಯರು. ಈ ನಡುವೆ ಶನಿವಾರದಂದು 21 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಸದ್ಯ ಜಿಲ್ಲೆಯಲ್ಲಿ 785 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 888 ಪ್ರಕರಣ ಗಳು ದೃಢಪಟ್ಟಿದೆ.
Click this button or press Ctrl+G to toggle between Kannada and English