ಮಂಗಳೂರು : ಜೂನ್ 8 ರಿಂದ ಧಾರ್ಮಿಕ ಮಂದಿರಗಳು, ಮುಜರಾಯಿ ಇಲಾಖೆಗೆ ಒಳಪಟ್ಟಿರುವ ದೇವಸ್ಥಾನಗಳು ತೆರೆಯಲಿದ್ದು, ಭಕ್ತರಿಗೆ ದೇವರ ದರ್ಶನದ ಅವಕಾಶ ನೀಡಲಾಗುತ್ತಿದ್ದು, ಕೆಲವು ಷರತ್ತುಗೊಳೊಂದಿಗೆ ದೇವರ ದರ್ಶನ ಪಡೆಯಬಹುದು.
ಲಾಕ್ ಡೌನ್ ಸಡಿಲಿಕೆಯ ಬಳಿಕ ಸುಮಾರು ಎರಡೂವರೆ ತಿಂಗಳ ಬಳಿಕ ದೇವಸ್ಥಾನಗಳನ್ನು ತೆರೆಯ ಬಹುದು ಎಂದು ಸರಕಾರ ಸುತ್ತೋಲೆ ಹೊರಡಿಸಿದೆ .
ಜೂನ್ 8 ರಿಂದ ಬಪ್ಪನಾಡು, ಮಂಗಳಾದೇವಿ, ಕಟೀಲು, ಕದ್ರಿ , ಧರ್ಮಸ್ಥಳ ಅಂತೆಯೇ ಅನೇಕ ದೇವಾಲಯದಲ್ಲಿ ದೇವರ ದರ್ಶನಕ್ಕೆ ಪ್ರವೇಶ ಮುಕ್ತವಾಗಲಿದ್ದು, ಮುಂಜಾಗೃತಾ ಕ್ರಮಗಳೊಂದಿಗೆ ವ್ಯವಸ್ಥೆ ಮಾಡಲಾಗಿದೆ.
ಕೊರೊನಾ ವೈರಸ್ ಹರಡದಂತೆ ತಡೆಗಟ್ಟುವುದಕ್ಕಾಗಿ ದೈಹಿಕ ಅಂತರ, ಸ್ಯಾನಿಟೈಸರ್ ಬಳಕೆ, ಮಾಸ್ಕ್ ಮತ್ತು ಗ್ಲೌಸ್ ಬಳಕೆ, ಶುಚಿತ್ವ ಕಾಪಾಡುವುದು ಸೇರಿದಂತೆ ಕೆಲ ಸಾಮಾನ್ಯ ನಿಯಮಗಳು ಕಡ್ಡಾಯವಾಗಿ ಅನ್ವಯವಾಗುತ್ತವೆ.
Click this button or press Ctrl+G to toggle between Kannada and English