ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಮಂಗಳೂರು ಮೇಯರ್ ದಿವಾಕರ್, ಕಾರ್ಪೊರೇಟರ್ ಮನೋಹರ್ ಶೆಟ್ಟಿ ಮೊದಲಾದವರು ಜೂನ್ 8 ರ ಸೋಮವಾರ ಬೆಳಿಗ್ಗೆ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥಿಸಿದರು.
ಕದ್ರಿ ದೇವಾಲಯದಲ್ಲಿ ಸರ್ಕಾರದ ಸೂಚನೆಯಂತೆ ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ಮುಂತಾದ ವ್ಯವಸ್ಥೆಗಳನ್ನು ಮಾಡಲಾಗಿದೆ.
ವಿಗ್ರಹಗಳು, ಕಂಬಗಳು, ಗೋಡೆಗಳು ಇತ್ಯಾದಿಗಳನ್ನು ಮುಟ್ಟಬಾರದು, ತೀರ್ಥ ಪ್ರಸಾದ ಹಂಚಬಾರದು ಎಂದು ದೇವಾಲಯಗಳಿಗೆ ಆದೇಶಿಸಲಾಗಿದ್ದು ಸಾಮಾಜಿಕ ಅಂತರದೊಂದಿಗೆ ಮುಗಗವಸು ಧರಿಸುವುದು ಕಡ್ಡಾಯವಾಗಿದೆ.
ಕದ್ರಿ ಮಂಜುನಾಥಸ್ವಾಮಿ ದರ್ಶನ ಪಡೆದ ಬಳಿಕ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿಯವರು, ರಾಜ್ಯಾದ್ಯಂತ ಇಂದು ದೇವಸ್ಥಾನಗಳು ತೆರೆದಿವೆ. ಸಾಮಾಜಿಕ ಅಂತರ ಕಾಯ್ದುಕೊಂಡು ದೇವರ ದರ್ಶನ ಮಾಡುತ್ತಿದ್ದಾರೆ. ನಾನು ಮಂಗಳೂರಿನ ಇತಿಹಾಸ ಪ್ರಸಿದ್ಧ ಕದ್ರಿ ಮಂಜುನಾಥಸ್ವಾಮಿ ದರ್ಶನ ಪಡೆದಿದ್ದೇನೆ. ನಮ್ಮ ಇಲಾಖೆಯಿಂದ ಅವಕಾಶ ನೀಡಿದ್ದಕ್ಕೆ ಸಂತಸವಾಗುತ್ತಿದೆ ಎಂದು ಹೇಳಿದ್ದಾರೆ.
Click this button or press Ctrl+G to toggle between Kannada and English