ವಿಟ್ಲ : ಸ್ನೇಹಿತೆ ಜೊತೆ ಹೊರಟ 23 ವರ್ಷದ ಯುವತಿಯೊಬ್ಬಳು ಮನೆಗೆ ಬಾರದೇ ನಾಪತ್ತೆಯಾಗಿರುವ ಘಟನೆ ವಿಟ್ಲ ಪೊಲೀಸ್ ಠಾಣೆ ಯ ವ್ಯಾಪ್ತಿಯಲ್ಲಿ ನಡೆದಿದೆ .
ಪೆರುವಾಯಿ ಗ್ರಾಮದ ಕಂಬಕೋಡಿ ನಿವಾಸಿ 23 ವರ್ಷದ ಯುವತಿ ನಾಪತ್ತೆಯಾದವಳು.
ಮೇ 29ರಂದು ಆಕೆಯ ಸ್ನೇಹಿತೆ ಕರೆದುಕೊಂಡು ಹೋಗಿದ್ದಳು ಎನ್ನಲಾಗಿದೆ. ಬಳಿಕ ಮಧ್ಯಾಹ್ನ ಮನೆಗೆ ಕರೆ ಮಾಡಿ ಸ್ನೇಹಿತೆ ನನ್ನ ಜತೆ ಬಂದಿದ್ದಾಳೆ. ಮೂರು ದಿನದ ಬಳಿಕ ಕಳುಹಿಸಿಕೊಡುತ್ತೇನೆ ಎಂದು ತಿಳಿಸಿದ್ದಳು.
ಆಕೆ ಮನೆಗೆ ಹಿಂದಿರುಗಿ ಬಂದಿಲ್ಲ ಎಂದು ಆಕೆಯ ತಂದೆ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗ್ಗೆ ಪ್ರಕರಣ ದಾಖಲಿಸಿಕೊಂಡ ವಿಟ್ಲ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Click this button or press Ctrl+G to toggle between Kannada and English