ಮುಳ್ಳು ಹಂದಿ ದಾಳಿ ನಡೆಸಿ ಬೈಕ್​ ಸವಾರನಿಗೆ ಗಾಯ

1:14 PM, Wednesday, June 10th, 2020
Share
1 Star2 Stars3 Stars4 Stars5 Stars
(No Ratings Yet)
Loading...

hedgehogಮಂಗಳೂರು: ಬೈಕ್ನಲ್ಲಿ ಸ್ನೇಹಿತನ ಜೊತೆ ತೆರಳುತ್ತಿದ್ದ ಯುವಕನ ಮೇಲೆ ಮುಳ್ಳು ಹಂದಿ ದಾಳಿ ನಡೆಸಿ ಗಾಯಗೊಳಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕೊಳ್ನಾಡು ಗ್ರಾಮದಲ್ಲಿ ನಡೆದಿದೆ.

16 ವರ್ಷದ ಶಫೀಕ್ ಮುಳ್ಳುಹಂದಿಯಿಂದ ದಾಳಿ ಗಾಯಗೊಂಡ ಯುವಕ.

ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಕರೈ ಎಂಬಲ್ಲಿ ಈ ಘಟನೆ ಸಂಭವಿಸಿದೆ. ಶಫೀಕ್ ತನ್ನ ಸ್ನೇಹಿತನ ಜತೆ ಸಾಲೆತ್ತೂರಿನಿಂದ ಕರೈಗೆ ಬೈಕಿನಲ್ಲಿ ಹೋಗುತ್ತಿದ್ದ. ಈ ವೇಳೆ ಇದ್ದಕ್ಕಿದ್ದಂತೆ ಬಂದ ಮುಳ್ಳುಹಂದಿ ಬೈಕ್‌ನಲ್ಲಿ ತೆರಳುತ್ತಿದ್ದವರ ಮೇಲೆ ದಾಳಿ ಮಾಡಿದೆ. ಹೀಗಾಗಿ ಶಫೀಕ್‌ನ ಕಾಲಿಗೆ ಮುಳ್ಳುಹಂದಿಯ ಮುಳ್ಳುಗಳು ನೆಟ್ಟಿವೆ.

ಬಳಿಕ ಯುವಕ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾನೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English