ಆ್ಯಂಬುಲೆನ್ಸ್ ಚಾಲಕರು ಕೊರೊನಾ ಹೊತ್ತುಕೊಂಡು ಸುತ್ತಾಡುವರು, ಈ ಗೂಡಂಗಡಿಗೆ ಬಂದರೆ ಏನು ಸಿಗಲ್ಲ

5:36 PM, Wednesday, June 10th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Ambulence ಮಂಗಳೂರು : ಸುಳ್ಯದಿಂದ ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ರೋಗಿಯನ್ನು ಸಾಗಿಸುತ್ತಿದ್ದ ಆ್ಯಂಬುಲೆನ್ಸ್ ಚಾಲಕನಿಗೆ ನೀರು ನೀಡದೆ ಅವಮಾನಿನಿಂದ ಘಟನೆ ಮಂಗಳೂರಿನ ಪಲ್ನೀರ್  ರಸ್ತೆಯಲ್ಲಿ ನಡೆದಿದೆ.

ಅಭಿಲಾಷ್ ಎನ್ನುವ ಅಂಬ್ಯುಲೆನ್ಸ್ ಡೈವರ್ ಸುಳ್ಯದಿಂದ ರೋಗಿಯೊಬ್ಬರನ್ನು ಬೆಳಗ್ಗಿನ ಜಾವ 4.30 ರ ವೇಳೆಗೆ ವೆನ್ ಲಾಕ್ ಆಸ್ಪತ್ರೆಗೆ ಕರೆತಂದಿದ್ದರು, ಅಂಬ್ಯುಲೆನ್ಸ್ ನಲ್ಲಿದ್ದ ರೋಗಿಯ ಸಂಬಂಧಿಕರೊಬ್ಬರಿಗೆ ಬಾಯಾರಿಕೆಯಾದ ಹಿನ್ನಲೆ ಮೋತಿಮಹಲ್ ಎದುರುಗಡೆ ಇರುವ ಜನಧ್ವನಿ ಕೇಂದ್ರದ ಗೂಂಡಂಗಡಿಯಲ್ಲಿ ನೀರು ಕೇಳಿದ್ದರು.

ಆ್ಯಂಬುಲೆನ್ಸ್ ಚಾಲಕರು ನಮ್ಮ ಅಂಗಡಿಗೆ ಬರವುದು ಬೇಡ,  ಕೊರೊನಾ ವಾರಿಯರ್ ಈ ಗೂಡ ಅಂಗಡಿಗೆ ಬಂದರೆ ಏನು ಸಿಗಲ್ಲ, ನಿಮ್ಮಿಂದ ನಮಗೆ ಕೊರೊನಾ ಬರುತ್ತೆ ನೀವು ಇಲ್ಲಿ ನಿಲ್ಲಬೇಡಿ ಆ್ಯಂಬುಲೆನ್ಸ್ ಚಾಲಕರು ಕೊರೊನಾ ಒತ್ತಕೊಂಡು ಸುತ್ತಾಡುವರು ಎಂದು ನಿಂದಿಸಿದ ಘಟನೆ ನಡೆದಿದೆ.

ಕೊನೆಗೆ  ಆ್ಯಂಬುಲೆನ್ಸ್ ಚಾಲಕ IPC 1860 ಕಾಯ್ದೆ ಅಡಿಯಲ್ಲಿ ಮಂಗಳೂರು ದಕ್ಷಿಣ ಠಾಣೆಯಲ್ಲಿ ದೂರು ದಾಖಲಿಸಿದರು.

 

Vedavyas Diwali

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English