ಕೊರೊನಾ ಗುಣ ಪಡಿಸುತ್ತೇನೆಂದು ಕಿಸ್ ಕೊಟ್ಟ ಬಾಬಾ ಮೃತ್ಯು, ಕಿಸ್ ಕೊಡಿಸಿಕೊಂಡ ನಾಲ್ವರು ಬಲಿ

1:50 PM, Friday, June 12th, 2020
Share
1 Star2 Stars3 Stars4 Stars5 Stars
(No Ratings Yet)
Loading...

aslam-babaಮಧ್ಯಪ್ರದೇಶ :  ಮಧ್ಯಪ್ರದೇಶದ ರತ್ನಂ ಜಿಲ್ಲೆಯಲ್ಲೊಬ್ಬ ಕೈಗೆ ಮುತ್ತು ಕೊಡುವ ಮೂಲಕ ಕರೊನಾ ಓಡಿಸುತ್ತೇನೆಂದು ನಂಬಿಸಿ, ಅನೇಕ ಮಂದಿಗೆ ಮುತ್ತುಕೊಟ್ಟಿದ್ದ. ಇದೀಗ ಅದೇ ಬಾಬಾ ಕರೊನಾ ಸೋಂಕಿನಿಂದ ಮೃತಪಟ್ಟಿದ್ದಾನೆ. ಈತನಿಂದ ಮುತ್ತು ಪಡೆದಿರುವ 85ಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದ್ದು, ಎಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 19 ಮಂದಿಯಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿರುವುದಾಗಿ ಆರೋಗ್ಯ ಇಲಾಖೆ ಹೇಳಿದೆ. ಈ ಪೈಕಿ ನಾಲ್ವರು ಇದಾಗಲೇ ಮೃತಪಟ್ಟಿದ್ದಾರೆ!

ಈ ಸ್ವಯಂ ಘೋಷಿತ ಮುಸ್ಲಿಂ ದೇವಮಾನವ ಬಾಬಾನ ಹೆಸರು ಅಸ್ಲಾಂ ಎಂದು ಈತ ಮಧ್ಯಪ್ರದೇಶದ ನಯಪುರ ಜಿಲ್ಲೆಯಲ್ಲಿ ಕೊರೋನಾ  ಗುಣಪಡಿಸುತ್ತೇನೆಂದು  ಹಲವರಿಗೆ ಕಿಸ್ ಕೊಟ್ಟಿದ್ದ ಎಂದು ಹೇಳಲಾಗಿದೆ.

ತಾನೊಬ್ಬ ದೇವ ಮಾನವ, ಪವಿತ್ರ ಮನುಷ್ಯ ಎನ್ನುತ್ತಿದ್ದ ಈತನಿಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಇದ್ದರು. ತಾನು ಕೈಗೆ ಮುತ್ತು ಕೊಟ್ಟರೆ ಕರೊನಾ ವೈರಸ್ ಹೋಗುತ್ತದೆ ಎಂದು ಈತ ಭಕ್ತರನ್ನು ನಂಬಿಸುತ್ತಿದ್ದ. ತಮಗೆ ಮಾಟಮಂತ್ರಗಳು ಚೆನ್ನಾಗಿ ಗೊತ್ತು. ಕೈಗೆ ಮುತ್ತು ಕೊಟ್ಟು ಮಾಟ ಮಾಡಿದರೆ ಯಾವುದೇ ವೈರಸ್ ಹತ್ತಿರ ಸುಳಿಯುವುದಿಲ್ಲ ಎಂದು ಈತ ಹೇಳುತ್ತಿದ್ದ.

ಈತನ ಮಾತಿಗೆ ಮರುಳಾಗಿ ಅನೇಕ ಮಂದಿ ಈತನಿಂದ ಕೈಗಳಿಗೆ ಮುತ್ತು ಕೊಡಿಸಿಕೊಳ್ಳಲು ಬರುತ್ತಿದ್ದರು.

ನಂತರ ಈ ಬಾಬಾನಿಗೆ ಸೋಂಕು ಕಾಣಿಸಿಕೊಂಡಿತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಈತನ ಸಾವಿನ ನಂತರ ಹಿನ್ನೆಲೆ ಹುಡುಕಿದಾಗ ಆರೋಗ್ಯ ಅಧಿಕಾರಿಗಳಿಗೆ ಶಾಕ್ ಆಗಿದೆ. ಈತನ ಮಾತಿಗೆ ಮರುಳಾಗಿ ಅನೇಕ ಭಕ್ತರು ತಮ್ಮ ಕೈಗಳಿಗೆ ಮುತ್ತು ಕೊಡಿಸಿಕೊಂಡಿರುವುದು ತಿಳಿದಿದೆ.

ಇದರ ಬೆನ್ನಟ್ಟಿ ಹೋಗಿರುವ ಆರೋಗ್ಯ ಇಲಾಖೆ ಸಿಬ್ಬಂದಿ ಅನೇಕ ಮಂದಿಗೆ ಪರೀಕ್ಷೆ ಮಾಡಿದ್ದಾರೆ. ಈ ಪೈಕಿ 85ಕ್ಕೂ ಅಧಿಕ ಮಂದಿಯಲ್ಲಿ ಸೋಂಕು ತಗುಲಿರುವುದು ಬೆಳಕಿಗೆ ಬಂದಿದೆ. ಇವರಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಸೋಂಕಿತನಾಗಿದ್ದ ಬಾಬಾ ಕೈಗೆ ಮುತ್ತು ಕೊಟ್ಟಾಗ ಆ ಭಾಗವನ್ನು ಭಕ್ತರು ಕಣ್ಣಿಗೆ ಹಾಗೂ ಮೂಗಿಗೆ ತಗುಲಿಸಿರುವ ಕಾರಣದಿಂದ ಸೋಂಕು ಬಾಧೆಗೆ ಒಳಗಾಗಿದ್ದಾರೆ ಎಂದು ಆರೋಗ್ಯ ಇಲಾಖೆ

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English