ಮಂಗಳೂರು : ಮಕ್ಕಳ ಆರೋಗ್ಯದ ದೃಷ್ಟಿ ಯಿಂದ ಕನ್ಯಾಡಿ ಶ್ರೀ ಆತ್ಮಾನಂದ ಸರಸ್ವತಿ ಆಂಗ್ಲಮಾದ್ಯಮ ವಿದ್ಯಾಲಯ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ತೆರೆಯದಿರಲು ನಿರ್ಧರಿಸಿದೆ.
ಕೊರೋನಾ ಹಿನ್ನೆಲೆ ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಬಳಿಯ ಕನ್ಯಾಡಿ ಶ್ರೀ ಆತ್ಮಾನಂದ ಸರಸ್ವತಿ ಆಂಗ್ಲಮಾದ್ಯಮ ವಿದ್ಯಾಲಯ ಒಂದು ವರ್ಷ ಸಂಪೂರ್ಣ ಬಂದ್ ಇಡಲು ಶಿಕ್ಷಣ ಸಂಸ್ಥೆ ಅಧ್ಯಕ್ಷ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನಿರ್ಧಾರಿಸಿದ್ದಾರೆ.
ಕನ್ಯಾಡಿ ಶ್ರೀ ಆತ್ಮಾನಂದ ಸರಸ್ವತಿ ಆಂಗ್ಲಮಾದ್ಯಮ ವಿದ್ಯಾಲಯ ಸುಮಾರು 350 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಎಲ್ ಕೆಜಿಯಿಂದ ಹತ್ತನೇ ತರಗತಿ ಗಳಿವೆ. 350 ಮಕ್ಕಳ ಪೈಕಿ 250ರಷ್ಟು ಮಕ್ಕಳು 12ವರ್ಷದೊಳಗಿನವರಿದ್ದಾರೆ.
ಮಕ್ಕಳ ಪೋಷಕರ ಅಭಿಪ್ರಾಯ ಪಡೆದು ಶಾಲಾ ಆಡಳಿತ ನಿರ್ಧಾರತೆಗೆದು ಕೊಳ್ಳಲಾಗಿದೆ. ಬೇರೆ ಶಾಲೆಗೆ ಸೇರಲು ಇಚ್ಛಿಸಿದರೆ ವರ್ಗಾವಣೆ ಪತ್ರ ನೀಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ.
ಶಾಲೆ ಸ್ಥಗಿತದ ಬಗ್ಗೆ ಶಿಕ್ಷಣ ಸಚಿವರಿಗೆ, ಶಿಕ್ಷಣ ಇಲಾಖೆಗೆ ಮಾಹಿತಿ ನೀಡ ಲಾಗಿದೆ ಎಂದು ಶಾಲಾ ಆಡಳಿತ ಮಂಡಳಿ ಹೇಳಿದೆ.
Click this button or press Ctrl+G to toggle between Kannada and English