ಉಡುಪಿ : ಮಲ್ಪೆ ಪೊಲೀಸ್ ಠಾಣೆಯಲ್ಲಿ ಗುರುವಾರ ಯುವತಿಯೊಬ್ಬಳು ನಾಪತ್ತೆಯಾಗಿದ್ದಾಳೆ ಎಂಬ ದೂರು ದಾಖಲಾಗಿದೆ.
ಪದವಿ ಶಿಕ್ಷಣಕ್ಕಾಗಿ ಬ್ರಹ್ಮಾವರ ಪರಿಸರದ ಯುವತಿಯೊಬ್ಬಳು ಉಡುಪಿಗೆ ಪ್ರತಿನಿತ್ಯ ಕಾಲೇಜಿಗೆ ಬರುತ್ತಿದ್ದಾಗ ಸಂತೆಕಟ್ಟೆ ನಿವಾಸಿ ಬಸ್ ಚಾಲಕನ ಪರಿಚಯವಾಗಿ ಪ್ರೀತಿಗೆ ತಿರುಗಿತ್ತು. ಬಳಿಕ ಮದುವೆಯಾಗಲು ನಿರ್ಧರಿಸಿದ್ದರೂ, ಯುವತಿಗೆ ವಯಸ್ಸು 18 ತುಂಬದಿರುವುದು ಅಡ್ಡಿಯಾಗಿತ್ತು. 18 ಭತಿರ್ಯಾಗುತ್ತಿದ್ದಂತೆ ಯುವತಿ ಮತ್ತು ಯುವಕ ಮನೆಯವರಿಗೆ ತಿಳಿಯದಂತೆ ಉಡುಪಿ ವಿವಾಹ ನೋಂದಣಿ ಕಚೇರಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ. ನೋಂದಣಿ ಕಚೇರಿಯ ನೋಟಿಸ್ ಬೋರ್ಡ್ನಲ್ಲಿ ಇವರ ಫೋಟೋ ನೋಡಿದ ಹಿಂದೂ ಸಂಘಟನೆಯ ಯುವಕರು ಮನೆಯವರಿಗೆ ತಿಳಿಸಿದರು.
ಪುತ್ರಿಯ ಫೋಟೋ ಗಮನಿಸಿದ ಪಾಲಕರು ಆಕೆಗೆ ಬುದ್ಧಿಮಾತು ಹೇಳಿ ಯುವಕನಿಂದ ದೂರ ಮಾಡಲು ಯತ್ನಿಸಿದ್ದಾರೆ.
ಈ ನಡುವೆ, ಯುವತಿಯನ್ನು ಮನೆಯಲ್ಲಿ ಕೂಡಿ ಹಾಕಲಾಗಿದೆ ಎಂದು ಯುವಕ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದ. ಆಗ ಯುವತಿಯ ಮನೆಯವರನ್ನು ಕರೆಸಿದ ಪೊಲೀಸರು ಯುವತಿಯ ಅಭಿಪ್ರಾಯ ಕೇಳಿದಾಗ, “ನಾನು ಮನೆಯವರ ಜತೆ ಹೋಗುತ್ತೇನೆ’ ಎಂದಿದ್ದಳು. 40 ಸಾವಿರ ರೂ. ವಿಚಾರಕ್ಕೆ ಸಂಬಂಧಪಟ್ಟಂತೆ ಬಸ್ ಡ್ರೈವರ್ ಮೋಸ ಮಾಡಿದ್ದಾಗಿಯೂ ಠಾಣೆಯಲ್ಲಿ ಹೇಳಿಕೆ ನೀಡಿದ್ದಳು. ವಿವಾಹ ನೋಂದಣಿಗೆ ಸಾಕ್ಷಿ ಹಾಕಿದ್ದ ಮೂವರು ಸಾಕ್ಷಿದಾರರ ವಿರುದ್ಧ ಹೇಳಿಕೆ ನೀಡಿದ ಬಳಿಕ ಪ್ರಕರಣ ಅಲ್ಲಿಗೆ ಮುಕ್ತಾಯವಾಗಿತ್ತು.
ಇದಾದ ನಂತರ ಸಂಬಂಧಿಕರ ಮನೆಯಲ್ಲಿದ್ದ ಯುವತಿ ಗುರುವಾರ ಬೆಳಗ್ಗೆ ನಾಪತ್ತೆಯಾಗಿದ್ದು, ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ನಾಪತ್ತೆಯಾದ ಯುವತಿಯನ್ನು ಹುಡುಕುತ್ತಿದ್ದೇವೆ, ಯಾವುದೇ ಸುಳಿವು ಲಭ್ಯವಾಗಿಲ್ಲ ಎಂದು ಮಲ್ಪೆ ಪೊಲೀಸರು ತಿಳಿಸಿದ್ದಾರೆ.
ಯುವಕನನ್ನು ಸಂಪಕಿರ್ಸಿದಾಗ “ನನಗೆ ಯುವತಿ ಬಗ್ಗೆ ಏನೂ ಗೊತ್ತಿಲ್ಲ, ನಾನು ಹಾಸನದಲ್ಲಿದ್ದೇನೆ’ ಎಂದು ಪ್ರತಿಕ್ರಿಯಿಸಿದ್ದಾನೆ. ಇದೊಂದು ವ್ಯವಸ್ಥಿತ ಲವ್ ಜಿಹಾದ್ ಪ್ರಕರಣ ಎಂದು ಹಿಂದೂ ಸಂಘನೆಯ ಮುಖಂಡರೊಬ್ಬರು ಹೇಳಿದ್ದಾರೆ,
Click this button or press Ctrl+G to toggle between Kannada and English