ಮುಂಬೈ : ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆಗೆ ಕೆಲ ದಿನಗಳ ಹಿಂದಷ್ಟೇ ಎಂಗೇಜ್‌ಮೆಂಟ್ ಆಗಿದೆ ಎಂಬ ಮಾಹಿತಿ ಹರಡಿದ ನಂತರ ಕೆಲ ದಿನಗಳಿಂದ ಅವರು ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆಯಾದರೂ, ಆ ಖಿನ್ನತೆಗೆ ನಿಜ ಕಾರಣವೇನು ಎಂಬುದು ಗೊತ್ತಾಗಿಲ್ಲ, ಅಷ್ಟರಲ್ಲೇ ಸುಶಾಂತ್ ಅವರ ಅಂತ್ಯವಾಗಿದೆ.
‘ಪವಿತ್ರ ರಿಷ್ತಾ’ದಲ್ಲಿ ಸುಶಾಂತ್ ಮತ್ತು ಅಂಕಿತಾ ಒಟ್ಟಿಗೆ ನಟಿಸಿದ್ದರು. ಆನಂತರ ಇಬ್ಬರ ನಡುವೆ ಉತ್ತಮ ಒಡನಾಟ ಬೆಳೆದಿತ್ತು. ಆರಂಭದಲ್ಲಿದ್ದ ಸ್ನೇಹ ಆ ಬಳಿಕ ಪ್ರೀತಿಗೆ ತಿರುಗಿತು. ಅನೇಕ ವರ್ಷಗಳ ಕಾಲ ಇಬ್ಬರು ರಿಲೇಷನ್‌ಶಿಪ್‌ನಲ್ಲಿದ್ದರು. ಇನ್ನೇನು ಈ ಜೋಡಿ ಮದುವೆಯಾಗಲಿದೆ ಎಂದು ಎಲ್ಲರೂ ಅಂದುಕೊಂಡಿರುವಾಗಲೇ ಬ್ರೇಕ್‌ಅಪ್ ಮಾಡಿಕೊಂಡರು!
ಸುಶಾಂತ್ ಕರಿಯರ್ ಶುರು ಮಾಡಿದ್ದು ಕಿರುತೆರೆಯಿಂದ. ಆದರೆ, ಅದೇ ಥರ ನಟಿ ಅಂಕಿತಾ ಕೂಡ ಧಾರಾವಾಹಿಯಲ್ಲೇ ಸಾಕಷ್ಟು ಫೇಮಸ್ ಆಗಿದ್ದರು.
2016ರ ಹೊತ್ತಿಗೆ ‘ಪಿಕೆ’, ‘ಎಂಎಸ್ ಧೋನಿ’ ಸೇರಿದಂತೆ ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರು ಸುಶಾಂತ್. ಎಲ್ಲವೂ ಚೆನ್ನಾಗಿರುವಾಗಲೇ ಬ್ರೇಕಪ್ ಮೂಲಕ ಬ್ರೇಕಿಂಗ್ ನ್ಯೂಸ್ ನೀಡಿತ್ತು ಈ ಜೋಡಿ. ಅದಕ್ಕೆ ಕಾರಣವೇನು ಎಂಬುದು ಮಾತ್ರ ಯಾರಿಗೂ ತಿಳಿಯಲೇ ಇಲ್ಲ!
ಆನಂತರ ಬೇರೆ ಬೇರೆ ನಟಿಯರೊಂದಿಗೆ ಸುಶಾಂತ್ ಹೆಸರು ಕೇಳಿಬರುತ್ತಿತ್ತು. ಇತ್ತ ಅಂಕಿತಾ ಕೂಡ ವಿಕ್ಕಿ ಜೈನ್ ಜೊತೆ ಪ್ರೀತಿಯಲ್ಲಿದ್ದು, ಕೆಲ ದಿನಗಳ ಹಿಂದಷ್ಟೇ ಅವರ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು. ಇನ್‌ಸ್ಟಾಗ್ರಾಮ್‌ನಲ್ಲಿ ಅಂಕಿತಾ ಅಪ್‌ಲೋಡ್ ಮಾಡಿದ ಒಂದು ಫೋಟೋ ಇಂಥದ್ದೊಂದು ಚರ್ಚೆಗೆ ಕಾರಣವಾಗಿತ್ತು. ಆದರೆ, ಆ ಬಗ್ಗೆ ಯಾರಿಂದಲೂ ಅಧಿಕೃತ ಮಾಹಿತಿ ಸಿಕ್ಕಿರಲಿಲ್ಲ. ಒಟ್ಟಿನಲ್ಲಿ ಅಂಕಿತಾ ಎಂಗೇಜ್‌ಮೆಂಟ್ ವಿಚಾರ ಮತ್ತು ಸುಶಾಂತ್ ಸಾವಿನ ಕುರಿತು ಚರ್ಚೆಗಳು ಶುರುವಾಗಿವೆ.
ಮುಂಬೈ : 34 ಹರೆಯದ ಬಾಲಿವುಡ್ ಯುವ ನಟ ಸುಶಾಂತ್ ಸಿಂಗ್ ರಜಪೂತ್ ಬಾಂದ್ರಾದಲ್ಲಿನ ತಮ್ಮ ನಿವಾಸದಲ್ಲಿಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪೋಲೀಸರ ಮಾಹಿತಿ ಪ್ರಕಾರ ನಟ ತಾನೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.
ಇತ್ತೀಚೆಗೆ ಸುಶಾಂತ್ ಸಿಂಗ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಕಳೆದ ವಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾಲಿಯಾನ್ ಆತ್ಮಹತ್ಯೆಗೆ ಮರುಕ ವ್ಯಕ್ತಪಡಿಸಿ ಸುಶಾಂತ್ ಸಿಂಗ್ ಟ್ವಿಟ್ ಮಾಡಿದ್ದರು.
1981 ಜನವರಿ 21ರಂದು ಬಿಹಾರದ ಪಾಟ್ನಾದಲ್ಲಿ ಜನಿಸಿದ್ದ ಸುಶಾಂತ್ ಸಿಂಗ್ , ಪವಿತ್ರ ರಿಶ್ತಾ ಸೀರಿಯಲ್ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು. ” ಕಾಯ್ ಪೋ ಚೇ’ ಸಿನಿಮಾ ಮೂಲಕ ಮೊದಲ ಬಾರಿಗೆ ಬಾಲಿವುಡ್ ಪ್ರವೇಶಿಸಿದ್ದ ಸುಶಾಂತ್ ಸಿಂಗ್, 11 ಚಿತ್ರಗಳಲ್ಲಿ ನಟಿಸಿದ್ದು, ಫಿಲಂ ಫೇರ್ ಪ್ರಶಸ್ತಿಗೂ ಭಾಜನರಾಗಿದ್ದರು.
ಸುಶಾಂತ್ ಸಿಂಗ್ ಅವರು ನಟಿಸಿದ್ದ ‘ಶುದ್ಧ್ ದೇಶಿ ರೊಮ್ಯಾನ್ಸ್’ ಸಿನಿಮಾದ ನಟನೆ ಮೆಚ್ಚುಗೆಗೆ ಪಾತ್ರವಾಗಿತ್ತು. ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಜೀವನಾಧಾರಿತ ಚಿತ್ರ ಸುಶಾಂತ್ ಸಿಂಗ್ ಗೆ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿತ್ತು.
ಸುಶಾಂತ್ ಸಿಂಗ್ ನಿವಾಸಕ್ಕೆ ಪೊಲೀಸರು ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಆತ್ಮಹತ್ಯೆಗೆ ಕಾರಣವೇನೆಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಲಾಕ್ ಡೌನ್ ವೇಳೆ ಸುಶಾಂತ್ ಅವರು ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು ಎನ್ನಲಾಗಿದೆ.
ಸುಶಾಂತ್ ಸಿಂಗ್ ನಿಧನಕ್ಕೆ ನಟ ಅಕ್ಷಯ್ ಕುಮಾರ್, ರಿತೇಶ್ ದೇಶ್ ಮುಖ್ , ಅನುರಾಗ್ ಕಶ್ಯಪ್ , ನಟಿ ಉರ್ಮಿಳಾ ಸೇರಿದಂತೆ ಹಲವು ಬಾಲಿವುಡ್ ಗಣ್ಯರು ಕಂಬನಿ ಮಿಡಿದಿದ್ದಾರೆ.
Click this button or press Ctrl+G to toggle between Kannada and English